settings icon
share icon
ಪ್ರಶ್ನೆ

ನನ್ನ ಕ್ರೈಸ್ತ ಜೀವಿತದಲ್ಲಿ ನಾನು ಪಾಪದ ಮೇಲೆ ಜಯಸಾಧಿಸುವದು ಹೇಗೆ?

ಉತ್ತರ


ನಾವು ಪಾಪದ ಮೇಲೆ ಜಯಸಾಧಿಸುವ ನಮ್ಮ ಪ್ರಯತ್ನದಲ್ಲಿ ನೆರವಾಗಲು ಸತ್ಯವೇದವು ವಿವಿಧವಾದ ಅನೇಕ ಮೂಲಗಳನ್ನು ಕೊಡುತ್ತದೆ. ಈ ಜೀವಿತ ಕಾಲದಲ್ಲಿ, ನಾವು ಪಾಪದ ಮೇಲೆ ಎಂದಿಗೂ ಪರಿಪೂರ್ಣವಾಗಿ ಜಯಸಾಧಿಸಲು ಆಗುವದಿಲ್ಲ (1 ಯೋಹಾನ 1:8), ಆದರೆ ಇದು ಇನ್ನೂ ನಮ್ಮ ಗುರಿಯಾಗಿರಬೇಕು. ದೇವರ ಸಹಾಯದಿಂದ ಮತ್ತು ಆತನ ವಾಕ್ಯದ ತತ್ವಗಳನ್ನು ಅನುಸರಿಸುವುದರ ಮೂಲಕ, ನಾವು ಕ್ರಮೇಣವಾಗಿ ಪಾಪವನ್ನು ಜಯಿಸಬಹುದು ಮತ್ತು ಇನ್ನು ಹೆಚ್ಚೆಚ್ಚಾಗಿ ಕ್ರಿಸ್ತನ ಹಾಗೆ ಆಗಬಹುದು.

ಪಾಪದ ಮೇಲೆ ಜಯಸಾಧಿಸುವ ನಮ್ಮ ಪ್ರಯತ್ನದಲ್ಲಿ ಸತ್ಯವೇದವು ಹೇಳುವ ಮೊದಲ ಸಹಾಯಕ ಪವಿತ್ರಾತ್ಮನಾಗಿದ್ದಾನೆ. ದೇವರು ನಮಗೆ ಪವಿತ್ರಾತ್ಮನನ್ನು ಕೊಟ್ಟಿದ್ದಾನೆ ಇದರಿಂದ ನಾವು ಕ್ರೈಸ್ತ ಜೀವಿತದಲ್ಲಿ ಜಯಭರಿತರಾಗಿರಬಹುದು. ಗಲಾತ್ಯ 5:16-25ರಲ್ಲಿ ದೇವರು ಶರೀರದ ಕ್ರಿಯೆಗಳನ್ನು ಆತ್ಮನ ಫಲಗಳೊಂದಿಗೆ ಹೋಲಿಸುತ್ತಾನೆ. ನಾವು ಆತ್ಮನಲ್ಲಿ ನಡೆಯಬೇಕೆಂದು ಈ ವಾಕ್ಯಭಾಗದಲ್ಲಿ ನಮಗೆ ಕರೆಕೊಡಲಾಗಿದೆ. ಎಲ್ಲಾ ವಿಶ್ವಾಸಿಗಳು ಈಗಾಗಲೇ ಪವಿತ್ರಾತ್ಮನನ್ನು ಹೊಂದಿರುತ್ತಾರೆ, ಆದರೆ ಆತನ ನಿಯಂತ್ರಣಕ್ಕೆ ವಶವಾಗಿ, ನಾವು ಆತ್ಮನಲ್ಲಿ ನಡೆಯಬೇಕೆಂದು ಈ ವಾಕ್ಯಭಾಗವು ನಮಗೆ ಹೇಳುತ್ತದೆ. ಇದರ ಅರ್ಥ ನಮ್ಮ ಜೀವಿತದಲ್ಲಿ ಶರೀರವನ್ನು ಅನುಸರಿಸುವದಕ್ಕಿಂತ, ಪವಿತ್ರಾತ್ಮನ ಪ್ರೇರಣೆಯನ್ನು ಸತತವಾಗಿ ಅನುಸರಿಸಲು ಆರಿಸಿಕೊಳ್ಳುವುದು.

ಪವಿತ್ರಾತ್ಮನು ತರಬಲ್ಲ ವ್ಯತ್ಯಾಸವು ಪೇತ್ರನ ಜೀವಿತದಲ್ಲಿ ತೋರಿಸಲ್ಪಟ್ಟಿದೆ, ಪವಿತ್ರಾತ್ಮನಿಂದ ತುಂಬಿಸಲ್ಪಡುವದಕ್ಕಿಂತ ಮುಂಚೆ ಯೇಸುವನ್ನು ಮೂರು ಸಾರಿ ನಿರಾಕರಿಸಿದನು – ಮತ್ತು ಇದಾದ ನಂತರ ಅವನು ಮರಣದವರೆಗೆ ಕ್ರಿಸ್ತನನ್ನು ಹಿಂಬಾಲಿಸುವೆನು ಎಂದು ಹೇಳಿದನು. ಆತ್ಮನಿಂದ ತುಂಬಿಸಲ್ಪಟ್ಟ ನಂತರ, ಅವನು ಪಂಚಾಶತಮಾನ ದಿನದಂದು ಯೆಹೂದ್ಯರಿಗೆ ಬಹಿರಂಗವಾಗಿ ಮತ್ತು ಬಲವಾಗಿ ಮಾತನಾಡಿದನು.

ಪವಿತ್ರಾತ್ಮನ ಪ್ರೇರಣೆಯನ್ನು ನಿಂದಿಸದೆ ಇರಲು ಪ್ರಯತ್ನಿಸುವಾಗ ನಾವು ಆತ್ಮನಲ್ಲಿ ನಡೆಯುತ್ತೇವೆ (1 ಥೆಸಲೋನಿಕ 5:19ರಲ್ಲಿ ಹೇಳಿದಂತೆ) ಮತ್ತು ಆತ್ಮನಿಂದ ತುಂಬಿಸಲ್ಪಡಲು ಪ್ರಯತ್ನಿಸುತ್ತೇವೆ (ಎಫೆಸ 5:18-21). ಒಬ್ಬನು ಪವಿತ್ರಾತ್ಮನಿಂದ ತುಂಬಿಸಲ್ಪಡುವುದು ಹೇಗೆ? ಮೊದಲನೆಯದಾಗಿ, ಹಳೆಯ ಒಡಂಬಡಿಕೆಯಲ್ಲಿ ಇದ್ದಂತೆ ಇದು ದೇವರ ಆಯ್ಕೆಯಾಗಿದೆ. ತಾನು ಆಗಬೇಕೆಂದು ಬಯಸಿದ ಕಾರ್ಯವನ್ನು ಸಾಧಿಸಲು ಆತನು ವ್ಯಕ್ತಿಗಳನ್ನು ಆರಿಸಿಕೊಂಡನು ಮತ್ತು ಅವರನ್ನು ತನ್ನ ಆತ್ಮನಿಂದ ತುಂಬಿಸಿದನು (ಆದಿಕಾಂಡ 41:38; ವಿಮೋಚ 31:3; ಅರಣ್ಯಕಾಂಡ 24:2; 1 ಸಮುವೇಲ 10:10). ಎಫೆಸ 5:18-21ರಲ್ಲಿ ಮತ್ತು ಕೊಲೊಸ್ಸೆ 3:16 ದೇವರ ವಾಕ್ಯದಿಂದ ತಮ್ಮನ್ನು ತುಂಬಿಸಿಕೊಂಡವರನ್ನು ದೇವರು ತುಂಬಿಸಲು ಆರಿಸಿಕೊಳ್ಳುವದಕ್ಕೆ ಸಾಕ್ಷ್ಯಾಧಾರಗಳಿವೆ. ಇದು ನಮಗೆ ಎರಡನೆಯ ಸಂಪನ್ಮೂಲಕ್ಕೆ ನಡೆಸುತ್ತದೆ.

ದೇವರ ವಾಕ್ಯವಾಗಿರುವ ಸತ್ಯವೇದವು ಹೇಳುವದೇನಂದರೆ, ಎಲ್ಲಾ ಒಳ್ಳೆಯ ಕಾರ್ಯಗಳಿಗಾಗಿ ನಮ್ಮನ್ನು ಸಿದ್ಧಪಡಿಸಲು ದೇವರು ತನ್ನ ವಾಕ್ಯವನ್ನು ನಮಗೆ ಕೊಟ್ಟಿದ್ದಾನೆ (2 ತಿಮೋಥೆ 3:16-17). ನಾವು ಹೇಗೆ ಜೀವಿಸಬೇಕು ಮತ್ತು ಏನನ್ನು ನಂಬಬೇಕು ಎಂದು ನಮಗೆ ಬೋಧಿಸುತ್ತದೆ, ನಾವು ತಪ್ಪುದಾರಿಗಳನ್ನು ಆರಿಸಿಕೊಂಡಾಗ ಅದು ನಮಗೆ ತಿಳಿಯಪಡಿಸುತ್ತದೆ, ಸರಿಯಾದ ದಾರಿಗೆ ಹಿಂದಿರುಗಲು ನಮಗೆ ಸಹಾಯಮಾಡುತ್ತದೆ, ಮತ್ತು ದಾರಿಯಲ್ಲಿ ಇರುವಂತೆ ಸಹಾಯಮಾಡುತ್ತದೆ. ಇಬ್ರಿಯ 4:12 ನಮಗೆ ಹೇಳುವದೇನಂದರೆ, ದೇವರ ವಾಕ್ಯವು ಸಜೀವವಾದ್ದದ್ದು ಮತ್ತು ಬಲವಾದ್ದು, ನಮ್ಮ ಹೃದಯವನ್ನು ವ್ಯಾಪಿಸುವುದಕ್ಕಾಗಿ ಬೇರುಗಳನ್ನು ಕಿತ್ತುಹಾಕಲು ಮತ್ತು ಹೃದಯದ ಆಳವಾದ ಪಾಪಗಳನ್ನು ಮತ್ತು ನಡತೆಯನ್ನು ಜಯಿಸಲು ಶಕ್ತಿಯುಳ್ಳದ್ದಾಗಿದೆ. ಕೀರ್ತನಾಕಾರನು ಕೀರ್ತನೆ 119ರಲ್ಲಿ ಜೀವಿತವನ್ನು ಮಾರ್ಪಡಿಸುವ ಅದರ ಆಳವಾದ ಶಕ್ತಿಯನ್ನು ಕುರಿತು ಮಾತನಾಡುತ್ತಿದ್ದಾನೆ. ತನ್ನ ಶತ್ರುಗಳನ್ನು ಜಯಿಸಲು ಮುಖ್ಯ ಸಂಗತಿಯ ಎಂದರೆ ಈ ಸಂಪನ್ಮೂಲವನ್ನು ಮರೆತುಬಿಡುವದಲ್ಲ ಆದರೆ ಹಗಲಿರುಳು ಅದನ್ನು ಧ್ಯಾನ ಮಾಡಿ ಅದಕ್ಕೆ ವಿಧೇಯರಾಗವುದೇ ಆಗಿದೆ ಎಂದು ಯೆಹೋಶುವನಿಗೆ ಹೇಳಲಾಗಿತ್ತು. ಸೈನ್ಯವನ್ನು ಸಹ ಗಮನಕ್ಕೆ ತೆಗೆದುಕೊಳ್ಳಬಾರದೆಂದು ದೇವರು ಆಜ್ಞಾಪಿಸಿದಾಗ ಅವನು ಹೀಗೆ ಮಾಡಿದನು ಮತ್ತು ವಾಗ್ಧಾನದ ದೇಶವನ್ನು ಜಯಿಸಲು ತನ್ನ ಯುದ್ಧಗಳಲ್ಲಿ ಇದು ಮುಖ್ಯ ಸಂಗತಿಯಾಗಿತ್ತು.

ಸತ್ಯವೇದವು ಸಂಪನ್ಮೂಲವಾಗಿದ್ದು ನಾವು ಅನೇಕವೇಳೆ ಇದನ್ನು ಹಗುರವಾಗಿ ತೆಗೆದುಕೊಳ್ಳುತ್ತೇವೆ. ನಮ್ಮ ಸತ್ಯವೇದಗಳನ್ನು ಸಭೆಗೆ ತೆಗೆದುಕೊಂಡು ಹೋಗುವುದರ ಮೂಲಕ ಪ್ರೀತಿಗೆ ಗುರುತಾಗಿ ಅದಕ್ಕೆ ಸೇವೆ ಮಾಡುತ್ತೇವೆ ಅಥವಾ ದೈನಂದಿನ ವಾಕ್ಯಗಳನ್ನು ಅಥವಾ ದಿನಕ್ಕೆ ಒಂದು ಅಧ್ಯಾಯವನ್ನು ಓದುತ್ತೇವೆ, ಆದರೆ ನಾವು ಅದನ್ನು ಬಾಯಿಪಾಠಮಾಡಲು, ಅದನ್ನು ಧ್ಯಾನಮಾಡಲು ಅಥವಾ ನಮ್ಮ ಜೀವಿತಕ್ಕೆ ಅನ್ವಯಿಸಲು ತಪ್ಪಿಹೋಗುತ್ತೇವೆ; ಅದು ಬಹಿರಂಗಪಡಿಸುವ ಪಾಪಗಳನ್ನು ಅರಿಕೆಮಾಡುವದಿಲ್ಲ ಅಥವಾ ಅದು ನಮಗೆ ತಿಳಿಯಪಡಿಸುವ ವರಗಳಿಗಾಗಿ ದೇವರಿಗೆ ಸ್ತುತಿ ಸಲ್ಲಿಸುವದಿಲ್ಲ. ಸತ್ಯವೇದದ ವಿಷಯಕ್ಕೆ ಬಂದಾಗ, ನಾವು ಅನೇಕವೇಳೆ ಹಸಿವೆಯಿಲ್ಲದವರು ಮತ್ತು ಅಧಿಕವಾಗಿ ತಿಂದು ವಾಂತಿ ಮಾಡುವವರು ಆಗಿರುತ್ತೇವೆ. ನಾವು ವಾಕ್ಯವನ್ನು ತಿನ್ನುವುದರ ಮೂಲಕ ಕೇವಲ ಆತ್ಮೀಕವಾಗಿ ಜೀವಂತವಾಗಿರಲು ಮಾತ್ರ ಸಾಕಷ್ಟು ತೆಗೆದುಕೊಳ್ಳುತ್ತೇವೆ (ಆದರೆ ಆರೋಗ್ಯಕರ, ತವಕಪಡುವ ಕ್ರೈಸ್ತರಾಗಿರಲು ಎಂದಿಗೂ ಸಾಕಷ್ಟು ಸೇವಿಸುವದಿಲ್ಲ), ಅಥವಾ ನಾವು ಅನೇಕ ವೇಳೆ ಪೋಷಿಸಿಕೊಳ್ಳುತ್ತೇವೆ ಆದರೆ ಅದರಿಂದ ಆತ್ಮೀಕ ಪೌಷ್ಠಿಕಾಂಶಗಳನ್ನು ತೆಗೆದುಕೊಳ್ಳುವದಕ್ಕಾಗಿ ಎಂದಿಗೂ ಅದನ್ನು ಸಾಕಷ್ಟು ಧ್ಯಾನ ಮಾಡುವದಿಲ್ಲ.

ನೀವು ಪ್ರತಿನಿತ್ಯ ದೇವರ ವಾಕ್ಯವನ್ನು ಅಧ್ಯಯನಮಾಡಿ ಬಾಯಿಪಾಠ ಮಾಡುವ ಅಭ್ಯಾಸ ಮಾಡಿಕೊಳ್ಳದೆ ಇದ್ದರೆ, ನೀವು ಹಾಗೆ ಮಾಡಲು ಆರಂಭಿಸುವುದು ಪ್ರಾಮುಖ್ಯವಾಗಿದೆ. ಪ್ರಯಾಣವನ್ನು ಆರಂಭಿಸಲು ಇದು ಸಹಾಯಕರವೆಂದು ಕೆಲವರು ಕಂಡುಕೊಳ್ಳುತಾರೆ. ನೀವು ವಾಕ್ಯದಿಂದ ಪಡೆದುಕೊಂಡದ್ದನ್ನು ಬರೆದುಕೊಳ್ಳುವವರೆಗೆ ಅದನ್ನು ಬಿಟ್ಟುಬಿಡದೆ ಇರಲು ಅಭ್ಯಾಸಮಾಡಿಕೊಳ್ಳಿರಿ. ಕೆಲವರು ದೇವರಿಗೆ ಪ್ರಾರ್ಥನೆಗಳನ್ನು ಬರೆದಿಡುತ್ತಾ, ಆತನು ಮಾತಾಡಿದ್ದನ್ನು ಕುರಿತು ಆ ಭಾಗಗಳಲ್ಲಿ ಬದಲಾಯಿಸಿಕೊಳ್ಳಲು ಅವರಿಗೆ ಸಹಾಯ ಮಾಡಲು ಬೇಡಿಕೊಳ್ಳುತ್ತಾರೆ. ನಮ್ಮ ಜೀವನದಲ್ಲಿ ಆತ್ಮನು ಉಪಯೋಗಿಸುವ ಸಾಧನವು ಸತ್ಯವೇದವಾಗಿದೆ (ಎಫೆಸ 6:17), ಇದು ನಮ್ಮ ಆತ್ಮೀಕ ಯುದ್ಧಗಳನ್ನು ಗೆಲ್ಲುವದಕ್ಕಾಗಿ ದೇವರು ನಮಗೆ ಕೊಡುವ ಆಯುದ್ಧದ ಪ್ರಾಮುಖ್ಯವಾದ ಮತ್ತು ಅತಿದೊಡ್ಡ ಭಾಗವಾಗಿದೆ (ಎಫೆಸ 6:12-18).

ಪಾಪಕ್ಕೆ ವಿರುದ್ಧವಾಗಿ ಹೋರಾಡಲು ಮೂರನೆಯ ಅತಿಮೂಖ್ಯವಾದ ಸಂಪನ್ಮೂಲವು ಪ್ರಾರ್ಥನೆಯಾಗಿದೆ. ಮತ್ತೇ, ಇದು ಕ್ರೈಸ್ತರು ಅನೇಕವೇಳೆ ತುಟಿಯ ಸೇವೆ ಮಾಡುವ ಸಂಪನ್ಮೂಲವಾಗಿದೆ ಆದರೆ ಅದನ್ನು ಅಲ್ಪವಾಗಿ ಉಪಯೋಗಿಸುತ್ತಾರೆ. ನಮಗೆ ಪ್ರಾರ್ಥನಾ ಕೂಟಗಳು, ಪ್ರಾರ್ಥನೆಯ ಸಮಯ ಇತ್ಯಾದಿಗಳಿಗೆ, ಆದರೆ ನಾವು ಪ್ರಾರ್ಥನೆಯನ್ನು ಆದಿ ಸಭೆಯು ಮಾಡಿದ ರೀತಿಯಲ್ಲಿ ಉಪಯೋಗಿಸುವದಿಲ್ಲ (ಅಪೊಸ್ತಲ ಕೃತ್ಯಗಳು 3:1; 4:31; 6:4; 13:1-3). ಪೌಲನು ಸೇವೆ ಮಾಡಿದವರಿಗಾಗಿ ಹೇಗೆ ಪ್ರಾರ್ಥನೆ ಮಾಡಿದನೆಂದು ತಿರಿಗಿ ತಿರಿಗಿ ಹೇಳುತ್ತಾನೆ (ಮತ್ತಾಯ 7:7-11; ಲೂಕ 18:1-8; ಯೋಹಾನ 6:23-27; 1 ಯೋಹಾನ 5:14-15), ಮತ್ತು ಪೌಲನು ಆತ್ಮೀಕ ಯುದ್ಧಕ್ಕೆ ಸಿದ್ಧನಾಗುವ ತನ್ನ ವಾಕ್ಯಭಾಗದಲ್ಲಿ ಪ್ರಾರ್ಥನೆಯನ್ನು ಸೇರಿಸುತ್ತಾನೆ (ಎಫೆಸ 6:18).

ನಮ್ಮ ಜೀವಿತಗಳಲ್ಲಿ ಪಾಪವನ್ನು ಜಯಿಸಲು ಪ್ರಾರ್ಥನೆಯು ಎಷ್ಟು ಪ್ರಾಮುಖ್ಯವಾಗಿದೆ? ಪೇತ್ರನು ಅಲ್ಲಗಳೆಯುವದಕ್ಕೆ ಸ್ವಲ್ಪ ಮುಂಚೆ, ಗೆತ್ಸೆಮನೆ ತೋಟದಲ್ಲಿ ಕ್ರಿಸ್ತನು ಪೇತ್ರನಿಗೆ ಹೇಳಿದ ಮಾತುಗಳು ನಮಗಿವೆ. ಯೇಸು ಅವನನ್ನು ಎಚ್ಚರಗೊಳಿಸಿ ಹೀಗಂದನು, “ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಮನಸ್ಸು ಸಿದ್ಧವಾಗಿದೆ ಸರಿ, ಆದರೆ ದೇಹಕ್ಕೆ ಬಲಸಾಲದು” (ಮತ್ತಾಯ 26:41). ಪೇತ್ರನಂತೆ ನಾವು ಯಾವುದು ಸರಿಯೋ ಅದನ್ನೇ ಮಾಡಲು ಬಯಸುತ್ತೇವೆ ಆದರೆ ಶಕ್ತಿಯನ್ನು ಕಂಡುಕೊಳ್ಳುತ್ತಿಲ್ಲ. ಹುಡುಕಿರಿ, ತಟ್ಟಿರಿ, ಬೇಡಿಕೊಳ್ಳಿರಿ ಎಂದು ದೇವರು ಒತ್ತಿಹೇಳಿದ್ದನ್ನು ನಾವು ಅನುಸರಿಸಬೇಕಾಗಿದೆ – ಮತ್ತು ಆತನು ನಮಗೆ ಬೇಕಾದ ಬಲವನ್ನು ಕೊಡುತ್ತಾನೆ (ಮತ್ತಾಯ 7:7). ಪ್ರಾರ್ಥನೆಯು ತಂತ್ರದ ಸೂತ್ರವಲ್ಲ. ಪ್ರಾರ್ಥನೆಯು ನಮ್ಮ ಸ್ವಂತ ಮಿತಿಗಳನ್ನು ಮತ್ತು ದೇವರ ಅಕ್ಷಯ ಶಕ್ತಿಯನ್ನು ಸುಮ್ಮನೆ ಅರಿಕೆಮಾಡುವುದಾಗಿದೆ ಮತ್ತು ನಾವು ಮಾಡಬೇಕೆಂದು ಬಯಸಿದ್ದನ್ನಲ್ಲಾ ಆದರೆ ಆತನು ಬಯಸುವದನ್ನು ಮಾಡುವದಕ್ಕಾಗಿ ಶಕ್ತಿ ಕೊಡಲು ಆತನ ಕಡೆಗೆ ತಿರುಗಿಕೊಳ್ಳುವುದಾಗಿದೆ (1 ಯೋಹಾನ 5:14-15).

ಪಾಪವನ್ನು ಜಯಿಸಲು ನಮ್ಮ ಯುದ್ಧದಲ್ಲಿ ನಾಲ್ಕನೆಯ ಸಂಪನ್ಮೂಲವು ಸಭೆಯಾಗಿದೆ, ಅದು ಇತರೆ ವಿಶ್ವಾಸಿಗಳ ಅನ್ಯೋನ್ಯತೆ. ಯೇಸು ತನ್ನ ಶಿಷ್ಯರನ್ನು ಹೊರಗೆ ಕಳುಹಿಸಿದಾಗ, ಆತನು ಅವರನ್ನು ಇಬ್ಬರಿಬ್ಬರಾಗಿ ಕಳುಹಿಸಿದನು (ಮತ್ತಾಯ 10:1). ಅಪೊಸ್ತಲರ ಕೃತ್ಯಗಳಲ್ಲಿ ಮಿಷನರಿಗಳು ಒಂದೇ ಸಾರಿ ಹೋಗಲಿಲ್ಲ, ಆದರೆ ಇಬ್ಬರು ಅಥವಾ ಹೆಚ್ಚಿನ ಗುಂಪಿನಲ್ಲಿ ಹೋದರು. ನಾವು ಒಟ್ಟಾಗಿ ಸೇರಿಕೊಳ್ಳುವದನ್ನು ಬಿಟ್ಟುಬಿಡದೆ, ಆದರೆ ಆ ಸಮಯವನ್ನು ಪ್ರೀತಿ ಮತ್ತು ಒಳ್ಳೆಯ ಕ್ರಿಯೆಗಳಲ್ಲಿ ಒಬ್ಬರನ್ನೊಬ್ಬರು ಉತ್ತೇಜಿಸಲು ಉಪಯೋಗಿಸಬೇಕೆಂದು ಯೇಸು ನಮಗೆ ಆಜ್ಞಾಪಿಸಿದ್ದಾನೆ (ಇಬ್ರಿಯ 10:24). ನಮ್ಮ ತಪ್ಪುಗಳನ್ನು ಒಬ್ಬರಿಗೊಬ್ಬರು ಅರಿಕೆಮಾಡಬೇಕೆಂದು ಆತನು ನಮಗೆ ಹೇಳುತ್ತಿದ್ದಾನೆ (ಯಾಕೋಬ 5:16). ಹಳೆಯ ಒಡಂಬಡಿಕೆಯ ಜ್ಞಾನೋಕ್ತಿಗಳ ಪುಸ್ತಕದಲ್ಲಿ, ಕಬ್ಬಿಣವು ಕಬ್ಬಿಣವನ್ನು ಹದಮಾಡುವಂತೆ, ಒಬ್ಬ ಮನುಷ್ಯನು ಮತ್ತೊಬ್ಬನನ್ನು ಹದಮಾಡುತ್ತಾನೆ ಎಂದು ನಮಗೆ ಹೇಳಲ್ಪಟ್ಟಿದೆ (ಜ್ಞಾನೋಕ್ತಿಗಳು 27:17). ಸಂಖ್ಯೆಯಲ್ಲಿ ಬಲವಿದೆ (ಪ್ರಸಂಗಿ 4:11-12).

ಮೊಂಡಾದ ಪಾಪಗಳನ್ನು ಜಯಿಸಲು ಲೆಕ್ಕ ಒಪ್ಪಿಸುವ ಸಹಪಾಟಿಗಳನ್ನು ಹೊಂದಿಕೊಳ್ಳುವದು ಹೆಚ್ಚು ಲಾಭದಾಯಕವೆಂದು ಅನೇಕ ಕ್ರೈಸ್ತರು ಕಂಡುಕೊಂಡಿದ್ದಾರೆ. ನಿಮ್ಮೊಂದಿಗೆ ಮಾತನಾಡುವ, ಪ್ರಾರ್ಥಿಸುವ, ಉತ್ತೇಜಿಸುವ ಮತ್ತು ನಿಮ್ಮನ್ನು ಖಂಡಿಸುವ ಮತ್ತೊಬ್ಬ ವ್ಯಕ್ತಿಯನ್ನು ಹೊಂದಿಕೊಳ್ಳುವದು ಬಹಳ ಅಮೂಲ್ಯವಾದದ್ದು. ನಮ್ಮೆಲ್ಲರಿಗೂ ಶೋಧನೆಯು ಸಾಮಾನ್ಯವಾಗಿದೆ (1 ಕೊರಿಂಥ 10:13). ಲೆಕ್ಕ ಒಪ್ಪಿಸುವ ಸಹಪಾಟಿ ಅಥವಾ ಲೆಕ್ಕ ಒಪ್ಪಿಸುವ ಗುಂಪನ್ನು ಹೊಂದಿಕೊಳ್ಳುವದು ನಮಗೆ ಅಂತಿಮ ಉತ್ತೇಜನದ ಒತ್ತನ್ನು ಕೊಡುತ್ತದೆ ಮತ್ತು ಅತಿ ಮೊಂಡಾದ ಪಾಪಗಳನ್ನು ಸಹ ಜಯಿಸಲು ನಮಗೆ ಬೇಕಾದ ಪ್ರೇರಣೆಯನ್ನು ಕೊಡುತ್ತದೆ.

ಕೆಲವೊಮ್ಮೆ ಪಾಪದ ಮೇಲೆ ಜಯವು ಬೇಗನೆ ಬರುತ್ತದೆ. ಬೇರೆ ಸಮಯಗಳಲ್ಲಿ, ಜಯವು ನಿಧಾನವಾಗಿ ಬರುತ್ತದೆ. ನಾವು ಆತನ ಸಂಪನ್ಮೂಲಗಳನ್ನು ಉಪಯೋಗಿಸುವಾಗ, ಆತನು ಕ್ರಮೇಣವಾಗಿ ನಮ್ಮ ಜೀವಿತದಲ್ಲಿ ಬದಲಾವಣೆಯನ್ನು ತರುವನೆಂದು ದೇವರು ವಾಗ್ಧಾನಮಾಡಿದ್ದಾನೆ. ನಾವು ಪಾಪವನ್ನು ಜಯಿಸುವ ಪ್ರಯತ್ನದಲ್ಲಿ ಸಹಿಸಿಕೊಳ್ಳಬಹುದು ಯಾಕೆಂದರೆ ಆತನು ತನ್ನ ವಾಗ್ಧಾನಕ್ಕೆ ನಂಬಿಗಸ್ತನಾಗಿದ್ದಾನೆಂದು ನಾವು ತಿಳಿದಿದ್ದೇವೆ.

English



ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ

ನನ್ನ ಕ್ರೈಸ್ತ ಜೀವಿತದಲ್ಲಿ ನಾನು ಪಾಪದ ಮೇಲೆ ಜಯಸಾಧಿಸುವದು ಹೇಗೆ?
Facebook icon Twitter icon Pinterest icon Email icon
© Copyright Got Questions Ministries