settings icon
share icon
ಪ್ರಶ್ನೆ

ರಕ್ಷಣೆಯ ಯೋಜನೆ ಎಂದರೇನು/ರಕ್ಷಣೆಯ ಮಾರ್ಗ ಎಂದರೇನು?

ಉತ್ತರ


ನೀವು ಹಸಿವೆಯಿಂದಿದ್ದೀರಾ? ಶಾರೀರಿಕ ಹಸಿವೆಯಲ್ಲ ಆದರೆ ಜೀವನದಲ್ಲಿ ಇನ್ನು ಹೆಚ್ಚಿನದ್ದಕ್ಕೇನಾದರು ಹಸಿವೆಯಿಂದಿದ್ದೀರಾ? ನಿಮ್ಮ ಅಂತರ್ಯದಲ್ಲಿರುವಂತದ್ದು ನಿಮಗೆ ಎಂದಿಗೂ ತೃಪ್ತಿಪಡಿಸುವದಿಲ್ಲವೆಂದು ಕಾಣುವ ಸಂಗತಿ ಯಾವುದಾದರು ಇದೆಯಾ? ಹಾಗಾದರೆ, ಯೇಸುವೇ ಮಾರ್ಗವಾಗಿದ್ದಾನೆ! ಯೇಸು ಹೇಳಿದ್ದು, "ಜೀವಕೊಡುವ ರೊಟ್ಟಿ ನಾನೇ; ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗುವದಿಲ್ಲ, ನನ್ನನ್ನು ನಂಬುವವನಿಗೆ ಎಂದಿಗೂ ನೀರಡಿಕೆಯಾಗುವದಿಲ್ಲ" (ಯೋಹಾನ 6:35).

ನೀವು ಗಲಿಬಿಲಿಗೊಂಡಿದ್ದೀರಾ? ಜೀವನದಲ್ಲಿ ಒಂದು ಮಾರ್ಗ ಅಥವಾ ಉದ್ದೇಶವನ್ನು ಎಂದಿಗೂ ಕಂಡುಕೊಳ್ಳಲಿಕ್ಕೆ ಆಗುತ್ತಿಲ್ಲವೋ? ನೀವಿರುವ ಕೋಣೆಯಲ್ಲಿ ಯಾರೋ ದೀಪ ಆರಿಸಿ ತಿರಿಗಿ ನೀವು ಅದನ್ನು ಬೆಳಗಿಸಲು ದೀಪ ಹುಡುಕುವಂತೆ ಕಾಣಿಸುತ್ತಿದೆಯಾ? ಹಾಗಾದರೆ, ಯೇಸುವೇ ಮಾರ್ಗವಾಗಿದ್ದಾನೆ! ಯೇಸು ಘೋಷಿಸಿದ್ದು, "ಯೇಸು ತಿರಿಗಿ ಅವರ ಸಂಗಡ ಮಾತಾಡಲಾರಂಭಿಸಿ - ನಾನೇ ಲೋಕಕ್ಕೆ ಬೆಳಕು; ನನ್ನನ್ನು ಅನುಸರಿಸುವವನು ಕತ್ತಲೆಯಲ್ಲಿ ನಡೆಯದೆ ಜೀವಕೊಡುವ ಬೆಳಕನ್ನು ಹೊಂದಿದವನಾಗಿರುವನು ಎಂದು ಹೇಳಿದನು" (ಯೋಹಾನ 8:12).

ನಿಮಗೆ ಜೀವನದಲ್ಲಿ ಎಂದಾದರೂ ಬಂಧಿಸಲ್ಪಟ್ಟ ಭಾವನೆ ಉಂಟಾಗಿದೆಯಾ? ಅನೇಕ ಬರಿದಾದ ಹಾಗೂ ಅರ್ಥವಿಲ್ಲದ ಬಾಗಿಲುಗಳನ್ನು ಮಾತ್ರ ತೆರೆಯಲು ಪ್ರಯತ್ನಿಸಿದ್ದೀರಾ? ಜೀವನ ಪೂರೈಸುವ ಒಂದು ಪ್ರವೇಶವನ್ನು ಎದುರುನೋಡುತ್ತಿದ್ದೀರಾ? ಹಾಗಾದರೆ, ಯೇಸುವೇ ಮಾರ್ಗವಾಗಿದ್ದಾನೆ! ಯೇಸು ಹೇಳಿದ್ದು, "ನಾನೇ ಆ ಬಾಗಿಲು; ನನ್ನ ಮುಖಾಂತರವಾಗಿ ಯಾವನಾದರೂ ಒಳಗೆ ಹೋದರೆ ಸುರಕ್ಷಿತವಾಗಿದ್ದು ಒಳಗೆ ಹೋಗುವನು, ಹೊರಗೆ ಬರುವನು, ಮೇವನ್ನು ಕಂಡುಕೊಳ್ಳುವನು" (ಯೋಹಾನ 10:9).

ಇತರರು ಯಾವಾಗಲೂ ನಿಮ್ಮನ್ನು ಕೆಳಗೆ ಬೀಳಿಸುತ್ತಿದ್ದಾರೋ? ನಿಮ್ಮ ಸಂಬಂಧಗಳು ಆಳವಲ್ಲದ ಹಾಗೂ ಬರಿದಾಗಿವೆಯೋ? ಎಲ್ಲರೂ ನಿಮ್ಮನ್ನು ತಮ್ಮ ಪ್ರಯೋಜನಕ್ಕೆ ಉಪಯೋಗಿಸುವಂತೆ ಕಾಣಿಸುತ್ತಿದೆಯಾ? ಹಾಗಾದರೆ, ಯೇಸುವೇ ಮಾರ್ಗವಾಗಿದ್ದಾನೆ! ಯೇಸು ಹೇಳಿದ್ದು, "ನಾನೇ ಒಳ್ಳೇ ಕುರುಬನು; ಒಳ್ಳೆ ಕುರುಬನು ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ. ನಾನೇ ಒಳ್ಳೇ ಕುರುಬನು; ತಂದೆಯು ನನ್ನನ್ನು ನಾನು ತಂದೆಯನ್ನು ತಿಳಿದಿರುವಂತೆಯೇ ನಾನು ನನ್ನ ಕುರಿಗಳನ್ನು ತಿಳಿದಿದ್ದೇನೆ; ನನ್ನ ಕುರಿಗಳು ನನ್ನನ್ನು ತಿಳಿದವೆ; ಮತ್ತು ಕುರಿಗಳಿಗೋಸ್ಕರ ನನ್ನ ಪ್ರಾಣ ಕೊಡುತ್ತೇನೆ" (ಯೋಹಾನ 10:11, 14).

ಈ ಜೀವನದ ನಂತರ ಏನಾಗಬಹುದೆಂದು ಆಶ್ಚರ್ಯಪಡುತ್ತಿದ್ದೀರಾ? ಕೊಳೆತ ಅಥವಾ ತುಕ್ಕು ಹಿಡಿದಿರುವ ಸಂಗತಿಗಳಿಗಾಗಿ ನಿಮ್ಮ ಜೀವೀತವನ್ನು ಜೀವಿಸಿ ದಣಿದಿರುವಿರಾ? ಜೀವನಕ್ಕೆ ಏನಾದರೂ ಅರ್ಥ ಉಂಟೋ ಎಂದು ಕೆಲವೊಮ್ಮೆ ಸಂದೇಹಪಟ್ಟದ್ದೀರಾ? ನೀವು ಸತ್ತ ನಂತರವೂ ಜೀವಿಸಲು ಇಚ್ಚಿಸುವಿರಾ? ಹಾಗಾದರೆ, ಯೇಸುವೇ ಮಾರ್ಗವಾಗಿದ್ದಾನೆ! ಯೇಸು ಹೇಳಿದ್ದು, "ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು; ಮತ್ತು ಬದುಕುತ್ತಾ ನನ್ನನ್ನು ನಂಬುವ ಪ್ರತಿಯೊಬ್ಬನು ಎಂದಿಗೂ ಸಾಯುವದಿಲ್ಲ" (ಯೋಹಾನ 11:25-26).

ಮಾರ್ಗ ಎಂದರೇನು? ಸತ್ಯ ಎಂದರೇನು? ಜೀವ ಎಂದರೇನು? ಯೇಸು ಉತ್ತರಿಸಿದ್ದು, "ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ" (ಯೋಹಾನ 14:6).

ನೀವು ಅನುಭವಿಸುವ ಹಸಿವೆ ಒಂದು ಆತ್ಮೀಕ ಹಸಿವೆಯಾಗಿದ್ದು ಕೇವಲ ಯೇಸುವಿನಿಂದ ಮಾತ್ರ ಅದು ತೃಪ್ತಿಪಡಿಸಲಾಗುವುದು. ಕೇವಲ ಏಕೈಕ ಯೇಸು ಮಾತ್ರವೇ ಅಂಧಕಾರವನ್ನು ತೆಗೆದು ಹಾಕಲು ಸಾಧ್ಯ. ಸಂತೃಪ್ತಿಕರ ಜೀವನಕ್ಕೆ ಕೇವಲ ಯೇಸು ಮಾತ್ರವೇ ಬಾಗಿಲಾಗಿದ್ದಾನೆ. ನೀವು ಹುಡುಕುತ್ತಿರುವ ಗೆಳೆಯ ಹಾಗೂ ಕುರುಬ ಕೇವಲ ಯೇಸು ಆಗಿದ್ದಾನೆ. ಇಹಲೋಕದಲ್ಲಿಯೂ – ಮುಂಬರುವ ಲೋಕದಲ್ಲಿಯೂ ಯೇಸುವೇ ಜೀವವಾಗಿದ್ದಾನೆ. ಯೇಸುವೇ ರಕ್ಷಣೆಯ ಮಾರ್ಗವಾಗಿದ್ದಾನೆ!

ನಿಮಗೆ ಹಸಿವೆ ಉಂಟಾಗಲು ಕಾರಣವೇನೆಂದರೆ, ನೀವು ಅಂಧಕಾರದಲ್ಲಿ ಕಳೆದುಕೊಂಡಿದ್ದೀರಿ, ಜೀವನದಲ್ಲಿ ಅರ್ಥವನ್ನು ಕಾಣದೆ ಇದ್ದೀರಿ, ಹಾಗೂ ದೇವರಿಂದ ಬೇರ್ಪಟ್ಟಿದ್ದೀರಿ. ಸತ್ಯವೇದವು ನಾವೆಲ್ಲರೂ ಪಾಪಮಾಡಿ ದೇವರಿಂದ ದೂರವಾಗಿದ್ದೇವೆಂದು ಹೇಳುತ್ತದೆ (ಪ್ರಸಂಗಿ 7:20; ರೋಮಾ 3:23). ನಿಮ್ಮ ಜೀವಿತದಲ್ಲಿ ನೀವು ಅನುಭವಿಸುತ್ತಿರುವ ಬರಿದುತನಕ್ಕೆ ದೇವರು ಇಲ್ಲದಿರುವುದೇ ಕಾರಣವಾಗಿದೆ. ದೇವರೊಂದಿಗೆ ಒಂದು ಸಂಬಂಧವನ್ನಿಟ್ಟುಕೊಳ್ಳಲು ನಾವು ಸೃಷ್ಠಿಸಲ್ಪಟ್ಟೆವು. ನಮ್ಮ ಪಾಪದ ನಿಮಿತ್ತ, ಆ ಸಂಬಂಧದಿಂದ ನಾವು ಬೇರ್ಪಟ್ಟಿದ್ದೇವೆ. ಹೇಳಬೇಕಾದರೆ, ನಮ್ಮ ಪಾಪವು ನಮ್ಮನ್ನು ಇಡೀ ನಿತ್ಯತ್ವದಲ್ಲಿ ಈ ಜೀವಿತ ಮತ್ತು ಮುಂದಿನ ಜೀವಿತದಲ್ಲಿ ದೇವರಿಂದ ದೂರವಿರುವಂತೆ ಮಾಡುತ್ತದೆ (ರೋಮಾ 6:23; ಯೋಹಾನ 3:36).

ಹಾಗಾದರೆ, ಈ ಸಮಸ್ಯೆ ಬಗೆಹರಿಸುವುದು ಹೇಗೆ? ಯೇಸುವೇ ಮಾರ್ಗವಾಗಿದ್ದಾನೆ! ಯೇಸು ನಮ್ಮ ಪಾಪವನ್ನು ತನ್ನ ಮೇಲೆ ಹೊತ್ತುಕೊಂಡನು (2 ಕೊರಿಂಥ 5:21). ನಾವು ಯಾವ ಶಿಕ್ಷೆಗೆ ಪಾತ್ರರಾಗಿದ್ದೇವೋ ಆ ಶಿಕ್ಷೆಯನ್ನು ತಾನೇ ಹೊತ್ತುಕೊಂಡು ನಮ್ಮ ಸ್ಥಾನದಲ್ಲಿ ಯೇಸು ಸತ್ತನು (ರೋಮಾ 5:8). ಮೂರು ದಿನಗಳ ನಂತರ ಪಾಪ ಮರಣದ ಮೇಲೆ ಜಯ ಸಾಧಿಸುತ್ತಾ ಯೇಸು ಸತ್ತವರೊಳಗಿಂದ ತಿರಿಗಿ ಎದ್ದುಬಂದನು (ರೋಮಾ 6:4-5). ಆತನು ಹಾಗೆ ಯಾಕೆ ಮಾಡಿಬೇಕಾಯಿತು? ಇದಕ್ಕೆ ಯೇಸು ಸ್ವತ ತಾನೇ ಉತ್ತರಿಸುತ್ತಾನೆ, "ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವದೂ ಇಲ್ಲ" (ಯೋಹಾನ 15:13). ನಾವು ಜೀವಿಸಬೇಕೆಂತಲೇ ಯೇಸು ಸತ್ತನು. ನಾವು ನಮ್ಮ ನಂಬಿಕೆ ಯೇಸುವಿನಲ್ಲಿಟ್ಟು ಆತನ ಮರಣವೇ ನಮ್ಮ ಪಾಪಗಳ ಪ್ರಯಾಶ್ಚಿತ್ತವೆಂದು ಭರವಸೆಯಿಡುವುದಾದರೆ, ನಮ್ಮ ಎಲ್ಲಾ ಪಾಪಗಳು ಕ್ಷಮಿಸಲ್ಪಟ್ಟು ಸಂಪೂರ್ಣವಾಗಿ ತೊಳೆಯಲಾಗುತ್ತವೆ. ಅನಂತರ ನಮ್ಮ ಆತ್ಮೀಕ ಹಸಿವೆ ತೃಪ್ತಿಗೊಳಿಸಲಾಗುತ್ತದೆ. ಬೆಳಕು ಬೆಳಗಿಸಲಾಗುತ್ತದೆ. ಜೀವನ ಪೂರೈಸುವಿಕೆಗೆ ಒಂದು ಪ್ರವೇಶ ಪಡೆದುಕೊಳ್ಳುತ್ತೇವೆ. ನಾವು ನಮ್ಮ ನಿಜವಾದ ಉತ್ತಮ ಸ್ನೇಹಿತನನ್ನು ಹಾಗೂ ಒಳ್ಳೇ ಕುರುಬನನ್ನು ತಿಳಿದುಕೊಳ್ಳುತ್ತೇವೆ. ನಾವು ಸತ್ತ ನಂತರ ಸಹ ಜೀವನ ಇದೆ ಎಂದು - ನಿತ್ಯತ್ವದಲ್ಲಿ ಯೇಸುವಿನೊಂದಿಗೆ ಪುನರುತ್ಥಾನ ಹೊಂದಿದ ಜೀವನವಿದೆ ಎಂದು ನಾವು ತಿಳಿದುಕೊಳ್ಳುತ್ತೇವೆ!

"ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು. ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು" (ಯೋಹಾನ 3:16).

ನೀವು ಇಲ್ಲಿ ಓದಿದವುಗಳ ನಿಮಿತ್ತ ಕ್ರಿಸ್ತನಿಗಾಗಿ ತೀರ್ಮಾನ ಮಾಡಿಕೊಂಡಿದ್ದೀರಾ? ಹಾಗಾದರೆ, “ನಾನು ಇಂದು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿರುವ ಬಟ್ಟನ್ ಮೇಲೆ ಕ್ಲಿಕ್ ಮಾಡಿರಿ.
Englishಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ

ರಕ್ಷಣೆಯ ಯೋಜನೆ ಎಂದರೇನು/ರಕ್ಷಣೆಯ ಮಾರ್ಗ ಎಂದರೇನು?
Facebook icon Twitter icon Pinterest icon Email icon
© Copyright Got Questions Ministries