settings icon
share icon
ಪ್ರಶ್ನೆ

ಹಚ್ಚೇ/ಶರೀರ ಚುಚ್ಚಿಕೊಳ್ಳುವದನ್ನು ಕುರಿತು ಸತ್ಯವೇದವು ಏನು ಹೇಳುತ್ತದೆ?

ಉತ್ತರ


ಹಳೆ ಒಡಂಬಡಿಕೆಯ ನಿಬಂಧನೆಯು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದ್ದೇನಂದರೆ, "ಸತ್ತವರಿಗೋಸ್ಕರ ದುಃಖವನ್ನು ಸೂಚಿಸುವದಕ್ಕಾಗಿ ದೇಹವನ್ನು ಗಾಯಮಾಡಿಕೊಳ್ಳಬಾರದು. ಶರೀರದ ಮೇಲೆ ಹಚ್ಚೇ ಚುಚ್ಚಿಕೊಳ್ಳಬಾರದು. ನಾನು ಯೆಹೋವನು" (ಯಾಜಕಕಾಂಡ 19:28). ಆದ್ದರಿಂದ, ವಿಶ್ವಾಸಿಗಳು ಇಂದು ಹಳೆ ಒಡಂಬಡಿಕೆಯ ನ್ಯಾಯಪ್ರಮಾಣದ ಅಧೀನದಲ್ಲಿ ಇಲ್ಲದಿದ್ದರೂ ಸಹ (ರೋಮಾ 10:4; ಗಲಾತ್ಯ 3:23; ಎಫೆಸ 2:15), ಹಚ್ಚೇ ಚುಚ್ಚಿಕೊಳ್ಳುವದರ ವಿರುದ್ಧ ಒಂದು ಆಜ್ಞೆಯಿದ್ದು ಅದು ಹಲವು ಪ್ರಶ್ನೆಗಳನ್ನು ಎತ್ತುತ್ತದೆಂಬುದು ವಾಸ್ತವವಾಗಿದೆ. ಒಬ್ಬ ವಿಶ್ವಾಸಿ ಹಚ್ಚೇ ಚುಚ್ಚಿಕೊಳ್ಳಬೇಕೋ ಅಥವಾ ಬೇಡವೋ ಈ ಬಗ್ಗೆ ಹೊಸ ಒಡಂಬಡಿಕೆ ಏನೂ ಹೇಳುವುದಿಲ್ಲ.

ನಮಗೆ ಈ ಆಜ್ಞೆ 1 ಪೇತ್ರ 3:3-4ರಲ್ಲಿ ಇದೆ "ನೀವು ನಿರ್ಮಲರಾಗಿಯೂ ಭಯಭರಿತರಾಗಿಯೂ ನಡೆದುಕೊಳ್ಳುವದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರಾದ ನಿಮ್ಮ ನಡತೆಯಿಂದಲೇ ಸನ್ಮಾರ್ಗಕ್ಕೆ ಬಂದಾರು. ಜಡೆಹೆಣೆದುಕೊಳ್ಳುವದು ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳುವದು ವಸ್ತ್ರಗಳನ್ನು ಧರಿಸಿಕೊಳ್ಳುವದು ಈ ಮೊದಲಾದ ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು. ಸಾತ್ವಿಕವಾದ ಶಾಂತಮನಸ್ಸು ಎಂಬ ಒಳಗಣ ಭೂಷಣವೇ ನಿಮ್ಮ ಅಲಂಕಾರವಾಗಿರಲಿ. ಇದು ಶಾಶ್ವತವಾದದ್ದೂ ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದೂ ಆಗಿದೆ." ಈ ವಾಕ್ಯಭಾಗವು ಕ್ರೈಸ್ತ ಸ್ತ್ರೀಯರಿಗೆ ಸಮ್ಮತಿಸುತ್ತದೆ, ಆದರೆ ಸಮಯೋಚಿತವಾದ ಒಂದು ತತ್ವ ಇದರಲ್ಲಿದೆ: ಯಾವದೆಂದರೆ, ಒಬ್ಬ ವ್ಯಕ್ತಿಯ ಹೊರಗಣ ಶೃಂಗಾರವೇ ನಮ್ಮ ಗಮನವಾಗಿರಬಾರದು. "ಜಡೆಹೆಣೆದಕೊಳ್ಳುವದು" ಮತ್ತು "ವಸ್ತ್ರಗಳನ್ನು ಧರಿಸಿಕೊಳ್ಳುವದು" ಹಾಗೂ ಒಡವೆಗಳನ್ನು ಇಟ್ಟುಕೊಳ್ಳುವದು ಇವುಗಳಿಗೆ ಹೆಚ್ಚು ಪ್ರಯಾಸ ಬೇಕಾಗುತ್ತದೆ, ಆದರೆ ಒಬ್ಬ ಸ್ತ್ರೀಯ ನಿಜವಾದ ಸೌಂದರ್ಯ ಅವುಗಳಲ್ಲಿ ಮಾತ್ರ ಒಳಗೊಂಡಿರುವದಿಲ್ಲ. ಅದೇ ರೀತಿಯಲ್ಲಿ ಹಚ್ಚೇ ಹಾಗೂ ಶರೀರ ಚುಚ್ಚಿಕೊಳ್ಳುವದು "ಹೊರಗಣ ಶೃಂಗಾರವಾಗಿವೆ," ಮತ್ತು ನಾವು ಸ್ತ್ರೀ ಪುರುಷರೆಂದು ಲೆಕ್ಕಿಸದೇ ನಮ್ಮ "ಒಳಗಣ ಶೃಂಗಾರದ" ಬೆಳವಣಿಗೆಯನ್ನು ಕುರಿತು ಹೆಚ್ಚು ಪ್ರಯಾಸಪಡುವ ಹಾಗೆ ಎಚ್ಚರಿಕೆಯಿಂದಿರಬೇಕು.

ಹಚ್ಚೇ ಹಾಗೂ ಶರೀರ ಚುಚ್ಚಿಕೊಳ್ಳುವದಕ್ಕೆ ಸಂಬಂಧಿಸಿದಂತೆ, ನಾವು ಪ್ರಾಮಾಣಿಕರಾಗಿರುವದಕ್ಕೆ ಒಂದು ಒಳ್ಳೆಯ ಪರೀಕ್ಷೆ ಎಂದರೆ ನಾವು ಒಳ್ಳೇ ಪರಿಜ್ಞಾನದಲ್ಲಿ, ಆ ಒಳ್ಳೇ ಚಟುವಟಿಕೆಯನ್ನು ಆರ್ಶೀವದಿಸುವಂತೆ ಮತ್ತು ಆತನ ಸ್ವಂತ ಒಳ್ಳೆಯ ಉದ್ದೇಶಗಳಿಗಾಗಿ ಉಪಯೋಗಿಸುವಂತೆ ದೇವರನ್ನು ಬೇಡಿಕೊಳ್ಳತ್ತೇವೋ ಎಂದು ನಿರ್ಧರಿಸಬೇಕು. "ಹೀಗಿರಲಾಗಿ ನೀವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ" (1 ಕೊರಿಂಥ 10:31). ಹಚ್ಚೇ ವಿರುದ್ಧ ಹೊಸ ಒಡಂಬಡಿಕೆಯು ನಿರ್ಧಿಷ್ಟವಾದ ಆಜ್ಞೆ ಕೊಡಲಿಲ್ಲ, ಆದರೆ ನಾವು ಹಚ್ಚೇ ಅಥವಾ ಶರೀರ ಚುಚ್ಚಿಕೊಳ್ಳಲು ದೇವರು ಬಯಸುತ್ತಾನೆಂದು ನಂಬುವಂತೆ ಯಾವ ಕಾರಣವನ್ನು ನಮಗೆ ಕೊಡುವದಿಲ್ಲ.

ವಿವಾದಾಂಶಗಳನ್ನು ಕುರಿತು ಸತ್ಯವೇದ ನಿರ್ಧಿಷ್ಟವಾಗಿ ಸಂಭೋದಿಸಲಾರದ ಒಂದು ಪ್ರಮುಖವಾದ ವಾಕ್ಯಾಧಾರಿತ ತತ್ವವು ಏನೆಂದರೆ ಇದು ದೇವರಿಗೆ ಮೆಚ್ಚಿಕೆಯಾಗಿದೆಯೇ ಎಂಬ ಅನುಮಾನಕ್ಕೆ ಸ್ಥಳವಿರುವದಾದರೆ, ಆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದೇ ಇರುವುದು ಉತ್ತಮ. ರೋಮಾ 14:23 ಯಾವದಕ್ಕೆ ನಂಬಿಕೆಯು ಆಧಾರವಿಲ್ಲವೋ ಅದು ಪಾಪವೆಂದು ನಮಗೆ ನೆನಪಿಸುತ್ತದೆ. ನಮ್ಮ ಶರೀರಗಳೂ ಅದೇ ರೀತಿ ನಮ್ಮ ಆತ್ಮಗಳು ವಿಮೋಚಿಸಲ್ಪಟ್ಟು ದೇವರಿಗೆ ಸಂಬಂಧಪಟ್ಟದೆಂದು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. 1 ಕೊರಿಂಥ 6:19-20 ಹಚ್ಚೇ ಚುಚ್ಚಿಕೊಳ್ಳುವದಕ್ಕೆ ನೇರವಾಗಿ ಅನ್ವಯಿಸದಿದ್ದರೂ ಸಹ ಈ ವಾಕ್ಯ ನಮಗೆ ಒಂದು ತತ್ವವನ್ನು ಒದಗಿಸುತ್ತದೆ: "ದೇವರಿಂದ ದೊರಕಿ ನಿಮ್ಮೊಳಗೆ ನೆಲೆಗೊಂಡಿರುವ ಪವಿತ್ರಾತ್ಮನಿಗೆ ನಿಮ್ಮ ದೇಹವು ಗರ್ಭಗುಡಿಯಾಗಿದೆಂಬದು ನಿಮಗೆ ತಿಳಿಯದೋ? ನೀವು ನಿಮ್ಮ ಸ್ವಂತ ಸೊತ್ತಲ್ಲ; ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು; ಆದಕಾರಣ ನಿಮ್ಮ ದೇಹದಲ್ಲಿ ದೇವರ ಪ್ರಭಾವವನ್ನು ಪ್ರಕಾಶಪಡಿಸಿರಿ." ನಾವು ನಮ್ಮ ಶರೀರದೊಂದಿಗೆ ಏನು ಮಾಡಬೇಕು ಹಾಗೂ ಎಲ್ಲಿಗೆ ಹೋಗಬೇಕೆಂಬ ಒಂದು ನಿಜವಾದ ವರ್ತನೆಯು ಈ ಶ್ರೇಷ್ಠವಾದ ಸತ್ಯವು ಹೊಂದಿರಬೇಕು. ನಮ್ಮ ದೇಹಗಳು ದೇವರಿಗೆ ಸಂಬಂಧಪಟ್ಟಿದ್ದರೆ ನಾವು "ಅವುಗಳನ್ನು ಗುರುತಾಗಿ" ಹಚ್ಚೇ ಅಥವಾ ದೇಹ ಚುಚ್ಚಿಕೊಳ್ಳುವದಕ್ಕಿಂತ ಮುಂಚೆ ಆತನ ಸ್ಪಷ್ಟವಾದ "ಅನುಮತಿ" ನಮಗಿದೆಯೇ ಎಂದು ನಾವು ಖಚಿತಪಡಿಸಿಕೊಳ್ಳಬೇಕು.

Englishಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ

ಹಚ್ಚೇ/ಶರೀರ ಚುಚ್ಚಿಕೊಳ್ಳುವದನ್ನು ಕುರಿತು ಸತ್ಯವೇದವು ಏನು ಹೇಳುತ್ತದೆ?
Facebook icon Twitter icon Pinterest icon Email icon
© Copyright Got Questions Ministries