settings icon
share icon
ಪ್ರಶ್ನೆ

ನನಗೆ ಸರಿಯಾದ ಧರ್ಮ ಯಾವುದಾಗಿದೆ?

ಉತ್ತರ


ನಾವು ಬಯಸಿದ ಸರಿಯಾದ ರೀತಿಯಲ್ಲಿಯೇ ನಮ್ಮ ಆಹಾರವನ್ನು ಆಜ್ಞಾಪಿಸಲು ಫಾಸ್ಟ್ ಫುಡ್ ರೆಸ್ಟೋರೆಂಟ್ ಗಳು ನಮ್ಮನ್ನು ಮರುಳುಗೊಳಿಸುತ್ತವೆ. ಕೆಲವು ಕಾಫಿ ಅಂಗಡಿಗಳು ಸುಮಾರು ನೂರು ರೀತಿಯ ರುಚಿಗಳನ್ನು ಮತ್ತು ವಿವಿಧತೆಗಳನ್ನು ಕುರಿತು ಹೊಗಳಿಕೊಳ್ಳುತ್ತವೆ. ಮನೆ ಮತ್ತು ಕಾರುಗಳನ್ನು ಕೊಂಡುಕೊಳ್ಳುವಾಗ ಸಹ, ನಾವು ಆಶಿಸುವ ಎಲ್ಲಾ ಆಯ್ಕೆ ಮತ್ತು ಸೌಕರ್ಯ ಇರುವವುಗಳಿಂದ ನಾವು ಒಂದನ್ನು ಕಂಡುಕೊಳ್ಳಬಹುದು. ಕೇವಲ ಚಾಕೊಲೆಟ್, ವೆನಿಲಾ ಮತ್ತು ಸ್ಟ್ರಾಬೆರ್ರಿ ಲೋಕದಲ್ಲೇ ನಾವಿನ್ನೂ ವಾಸಿಸುತ್ತಿಲ್ಲ. ಆಯ್ಕೆಯು ಅರಸನಾಗಿದ್ದಾನೆ! ನಿಮ್ಮ ವೈಯಕ್ತಿಕ ಇಷ್ಟಗಳು ಮತ್ತು ಅಗತ್ಯತೆಗಳಿಗೆ ತಕ್ಕಂತೆ ನೀವು ಬಯಸುವ ಯಾವುದನ್ನು ಬೇಕಾದರೂ ಕಂಡುಕೊಳ್ಳಬಹುದು.

ಹಾಗಾದರೆ, ನಿಮಗೆ ಕೇವಲ ಸರಿಯಾದ ಧರ್ಮವು ಯಾವುದಾಗಿದೆ? ಅಪರಾಧ-ರಹಿತ, ಕೋರಿಕೆಗಳನ್ನು ಕೇಳದ, ಮತ್ತು ಮಾಡಬೇಕಾದವುಗಳು ಮತ್ತು ಮಾಡಬಾರದವುಗಳನ್ನು ಕುರಿತು ಹೆಚ್ಚಾಗಿ ಸಮಸ್ಯೆಗಳನ್ನು ಒಳಗೊಂಡಿಲ್ಲದ ಧರ್ಮ ಯಾವುದು? ನಾನು ಈಗಾಗಲೇ ವಿವರಿಸಿದ್ದು ಇಲ್ಲೇ ಇದೆ. ಆದರೆ ಧರ್ಮವು ಪ್ರಿಯವಾದ ಐಸ್ ಕ್ರೀಮ್ ರುಚಿಯನ್ನು ಆರಿಸಿಕೊಳ್ಳುವ ಹಾಗಿದೆಯೋ?

ನಮ್ಮ ಗಮನ ಸೆಳೆಯಲು ಅನೇಕ ಸ್ವರಗಳು ಸ್ಪರ್ಧಿಸುತ್ತಿವೆ, ಆದುದರಿಂದ ಯಾರಾದರು ಮೊಹಮದ್ ಅಥವಾ ಕನ್ಫೂಸಿಯಾಸ್, ಬುದ್ಧ, ಅಥವಾ ಚಾಲ್ಸ್ ಟಾಜೆ ರಸ್ಸೆಲ್ ಅಥವಾ ಜೋಸೆಫ್ ಸ್ಮಿತ್ ಇವರಿಗಿಂತ ಯೇಸುವೇ ಉನ್ನತನು ಎಂದು ಯಾಕೆ ಪರಿಗಣಿಸಬೇಕು? ಎಲ್ಲಾ ದಾರಿಗಳು ಪರಲೋಕಕ್ಕೆ ನಡೆಸುವದಿಲ್ಲವೋ? ಎಲ್ಲಾ ಧರ್ಮಗಳು ಮೂಲವಾಗಿ ಒಂದೇ ಅಲ್ಲವೋ? ಸತ್ಯವೇನೆಂದರೆ, ಎಲ್ಲಾ ದಾರಿಗಳು ಇಂಡಿಯಾನಾಗೆ ನಡೆಸುವುದಿಲ್ಲವೊ, ಹಾಗೆಯೇ ಎಲ್ಲಾ ಧರ್ಮಗಳು ಪರಲೋಕಕ್ಕೆ ನಡೆಸುವುದಿಲ್ಲ,

ಯೇಸು ಒಬ್ಬನೇ ದೇವರ ಅಧಿಕಾರದಿಂದ ಮಾತನಾಡುತ್ತಿದ್ದನು ಯಾಕೆಂದರೆ ಯೇಸು ಒಬ್ಬನೇ ಮರಣವನ್ನು ಜಯಿಸಿದಾತನಾಗಿದ್ದಾನೆ. ಮೊಹಮದ್, ಕನ್ಫೂಸಿಯಾಸ್, ಮತ್ತು ಬೇರೆ ರೂಪಕರು ತಮ್ಮ ಸಮಾಧಿಗಳಲ್ಲಿ ಈ ದಿನದ ವರೆಗೆ ಇದ್ದಾರೆ. ಆದರೆ ಯೇಸು ರೋಮನ್ನರ ಕ್ರೂರ ಶಿಲುಬೆಯ ಮೇಲೆ ಸತ್ತು ಮೂರು ದಿವಸಗಳ ನಂತರ ತನ್ನ ಸ್ವಂತ ಶಕ್ತಿಯ ಮೂಲಕ ಸಮಾಧಿಯಿಂದ ಎದ್ದು ಬಂದನು. ಯಾರಾದರು ಮರಣದ ಮೇಲೆ ಶಕ್ತಿಯನ್ನು ಹೊಂದಿದ್ದರೆ ಅವರನ್ನು ಕುರಿತು ಕೇಳುವುದು ಯೋಗ್ಯವಾಗಿದೆ.

ಯೇಸುವಿನ ಪುನರುತ್ಥಾನಕ್ಕೆ ಸಹಾಯಮಾಡುವ ಸಾಕ್ಷಿಯು ಅಗಾಧವಾಗಿದೆ. ಮೊದಲನೆಯದಾಗಿ, ಎಬ್ಬಿಸಲ್ಪಟ್ಟ ಕ್ರಿಸ್ತನಿಗೆ ಐನೂರಕ್ಕಿಂತ ಹೆಚ್ಚು ಪ್ರತ್ಯಕ್ಷ ಸಾಕ್ಷಿಗಳು ಇದ್ದರು! ಇದು ಹೆಚ್ಚಿನ ಪ್ರತ್ಯಕ್ಷ ಸಾಕ್ಷಿಗಳಾಗಿದೆ. ಐನೂರು ಸಾಕ್ಷಿಗಳನ್ನು ಕಡೆಗಣಿಸಲು ಆಗುವದಿಲ್ಲ. ಖಾಲಿಯಾದ ಸಮಾಧಿಯ ಸಂಗತಿಯು ಸಹ ಪ್ರಾಮುಖ್ಯವಾಗಿದೆ. ಯೇಸುವಿನ ವಿರೋಧಿಗಳು ಆತನ ಸತ್ತ, ಕೊಳೆತ ದೇಹವನ್ನು ತೋರಿಸುವುದರ ಮೂಲಕ ಪುನರುತ್ಥಾನದ ಮಾತುಗಳನ್ನು ಸುಲಭವಾಗಿ ನಿಲ್ಲಿಸಬಹುದಾಗಿತ್ತು, ಆದರೆ ಅವರಿಗೆ ತೋರಿಸಲು ಸತ್ತ ದೇಹವು ಇರಲಿಲ್ಲ! ಸಮಾಧಿಯು ಬರಿದಾಗಿತ್ತು! ಶಿಷ್ಯರು ಆತನ ದೇಹವನ್ನು ಕದ್ದುಕೊಳ್ಳಬಹುದಾಗಿತ್ತೋ? ಬಹಳ ಕಷ್ಟಕರ. ಇಂಥ ಆಕಸ್ಮಿಕತೆಯನ್ನು ತಡೆಯಲು, ಯೇಸುವಿನ ಸಮಾಧಿಯು ಆಯುಧಗಳನ್ನು ಧರಿಸಿದ್ದ ಸೈನಿಕರಿಂದ ಬಹಳವಾಗಿ ಭದ್ರಪಡಿಸಲಾಗಿತ್ತು. ಆತನನ್ನು ಸೆರೆಹಿಡಿದು ಕ್ರೂಜೆಗೆ ಹಾಕಲ್ಪಟ್ಟಾಗ, ಆತನ ನಿಕಟ ಹಿಂಬಾಲಕರು ಭಯದಿಂದ ಓಡಿ ಹೋಗಿದ್ದನ್ನು ಪರಿಗಣಿಸಿದರೆ, ಹೆದರಿಕೊಂಡ ಈ ಕಾಕಪೋಕ ಮೀನುಗಾರರ ಗುಂಪು ತರಬೇತಿ ಹೊಂದಿದ್ದ ವೃತ್ತಿಪರ ಸೈನಿಕರಿಗೆ ವಿರುದ್ಧವಾಗಿ ಮುಖಾಮುಖಿಯಾಗಿ ಹೋಗುವುದು ಅತ್ಯಂತ ಅಸಂಭವವಾಗಿತ್ತು. ಅಥವಾ ಅವರು ತಮ್ಮ ಜೀವಿತಗಳನ್ನು ತ್ಯಾಗಮಾಡಿ ಹತಸಾಕ್ಷಿಗಳಾಗಬಹುದಾಗಿತ್ತು – ಅವರಲ್ಲಿ ಹೆಚ್ಚಿನವರು ಮೋಸಕ್ಕಾಗಿ ಮಾಡಿದ್ದರು. ಸಾಮಾನ್ಯವಾದ ಸತ್ಯಸಂಗತಿ ಎಂದರೆ ಯೇಸುವಿನ ಪುನರುತ್ಥಾನವನ್ನು ವಿವರಿಸಲು ಆಗುವುದಿಲ್ಲ!

ಮರಣದ ಮೇಲೆ ಶಕ್ತಿಯಿರುವ ಯಾರನ್ನಾದರು ಕುರಿತು ಕೇಳಲ್ಪಡಲು ಯೋಗ್ಯವಾಗಿದೆ. ಯೇಸು ಮರಣದ ಮೇಲೆ ತನ್ನ ಶಕ್ತಿಯನ್ನು ರುಜುವಾತುಪಡಿಸಿದನು; ಆದುದರಿಂದ, ಆತನು ಹೇಳುವುದನ್ನು ನಾವು ಕೇಳಬೇಕಾಗಿದೆ. ರಕ್ಷಣೆಗೆ ಯೇಸು ಒಂದೇ ಮಾರ್ಗವೆಂದು ಹೇಳಿದನು (ಯೋಹಾನ 14:6). ಆತನು ಒಂದು ಮಾರ್ಗವಲ್ಲ; ಆತನು ಅನೇಕ ಮಾರ್ಗಗಳಲ್ಲಿ ಒಂದು ಮಾರ್ಗವಲ್ಲ. ಯೇಸುವೇ ಮಾರ್ಗವಾಗಿದ್ದಾನೆ.

ಮತ್ತು ಇದೇ ಯೇಸು ಹೀಗೆ ಹೇಳುತ್ತಿದ್ದಾನೆ, “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು” (ಮತ್ತಾಯ 11:28). ಇದು ಕಠಿಣಕರವಾದ ಲೋಕವಾಗಿದೆ ಮತ್ತು ಜೀವಿತವು ಕಷ್ಟಕರವಾಗಿದೆ. ನಮ್ಮಲ್ಲಿ ಅನೇಕರು ಬಹಳ ಚೆನ್ನಾಗಿ ರಕ್ತಸಿಕ್ತರು, ಮೂಗೇಟಿಗೊಳಗಾದವರು ಮತ್ತು ಯುದ್ಧಕ್ಕೆ-ಹೆದರುವವರು ಆಗಿದ್ದೇವೆ. ಒಪ್ಪಿಕೊಳ್ಳುವಿರಾ? ಹಾಗಾದರೆ ನಿಮಗೆ ಏನು ಬೇಕಾಗಿದೆ? ಪುನರ್ ಸ್ಥಾಪನೆಯೋ ಅಥವಾ ಕೇವಲ ಧರ್ಮವೋ? ಜೀವಿಸುವ ರಕ್ಷಕನೋ ಅಥವಾ ಸತ್ತವರ ಅನೇಕ “ಪ್ರವಾದಿಗಳಲ್ಲಿ” ಒಬ್ಬನೋ? ಒಂದು ಅರ್ಥಗರ್ಭಿತ ಸಂಬಂಧವೋ ಅಥವಾ ಬರಿದಾದ ಸಂಪ್ರದಾಯವೋ? ಯೇಸು ಆಯ್ಕೆಯಲ್ಲ – ಆತನೇ ಆಯ್ಕೆಯಾಗಿದ್ದಾನೆ!

ನೀವು ಕ್ಷಮಾಪಣೆಗಾಗಿ ಎದುರುನೋಡುತ್ತಿದ್ದರೆ ಯೇಸುವೇ ಸರಿಯಾದ “ಧರ್ಮ”ವಾಗಿದ್ದಾನೆ (ಅಪೊಸ್ತಲರ ಕೃತ್ಯಗಳು 10:43). ನೀವು ದೇವರೊಂದಿಗೆ ಅರ್ಥಗರ್ಭಿತವಾದ ಸಂಬಂಧವನ್ನು ಎದುರುನೋಡುತ್ತಿದ್ದರೆ, ಯೇಸುವೇ ಸರಿಯಾದ “ಧರ್ಮ”ವಾಗಿದ್ದಾನೆ (ಯೋಹಾನ 10:10). ನೀವು ಪರಲೋಕದಲ್ಲಿ ನಿತ್ಯ ನಿವಾಸವನ್ನು ಎದುರುನೋಡುತ್ತಿದ್ದರೆ, ಯೇಸುವೇ ಸರಿಯಾದ “ಧರ್ಮ”ವಾಗಿದ್ದಾನೆ (ಯೋಹಾನ 3:16). ಯೇಸು ಕ್ರಿಸ್ತನು ನಿಮ್ಮ ರಕ್ಷಕನೆಂದು ಆತನಲ್ಲಿ ನಿಮ್ಮ ನಂಬಿಕೆಯನ್ನು ಹಾಕಿರಿ; ಇದಕ್ಕಾಗಿ ನೀವು ವ್ಯಥೆಪಡುವದಿಲ್ಲ! ನಿಮ್ಮ ಪಾಪಗಳ ಕ್ಷಮಾಪಣೆಗಾಗಿ ಆತನಲ್ಲಿ ಭರವಸೆಯಿಡಿರಿ; ನೀವು ನಿರಾಶೆಗೊಳ್ಳುವದಿಲ್ಲ.

ನೀವು ದೇವರೊಂದಿಗೆ “ಸರಿಯಾದ ಸಂಬಂಧವನ್ನು” ಹೊಂದಿಕೊಳ್ಳಲು ಬಯಸುವುದಾದರೆ, ಇಲ್ಲಿ ಮಾದರಿ ಪ್ರಾರ್ಥನೆಯು ಕೊಡಲ್ಪಟ್ಟಿದೆ. ನೆನಪಿಡಿ, ಈ ಪ್ರಾರ್ಥನೆ ಅಥವಾ ಬೇರೆ ಪ್ರಾರ್ಥನೆಯನ್ನು ಹೇಳುವುದರಿಂದ ಇದು ನಿಮ್ಮನ್ನು ರಕ್ಷಿಸುವದಿಲ್ಲ. ಕ್ರಿಸ್ತನಲ್ಲಿ ನಂಬಿಕೆಯಿಡುವುದರಿಂದ ಮಾತ್ರ ನೀವು ನಿಮ್ಮ ಪಾಪದಿಂದ ರಕ್ಷಿಸಲ್ಪಡಬಹುದು. ನೀವು ಆತನಲ್ಲಿಟ್ಟಿರುವ ನಂಬಿಕೆಯನ್ನು ವ್ಯಕ್ತಪಡಿಸಲು ಮತ್ತು ನಿಮಗೆ ರಕ್ಷಣೆಯನ್ನು ಒದಗಿಸಿದಕ್ಕಾಗಿ ಆತನಿಗೆ ಕೃತಜ್ಞತೆ ಸಲ್ಲಿಸಲು ಈ ಪ್ರಾರ್ಥನೆಯು ಒಂದು ಸರಳವಾದ ರೀತಿಯಾಗಿದೆ. “ದೇವರೇ, ನಾನು ನಿನಗೆ ವಿರುದ್ಧವಾಗಿ ಪಾಪಮಾಡಿದ್ದೇನೆ ಮತ್ತು ನಾನು ಶಿಕ್ಷೆಗೆ ಅರ್ಹನಾಗಿದ್ದೇನೆಂದು ತಿಳಿದಿದ್ದೇನೆ. ಆದರೆ ನನಗೆ ಆಗಬೇಕಾದ ಶಿಕ್ಷೆಯನ್ನು ಯೇಸು ಕ್ರಿಸ್ತನು ಹೊತ್ತುಕೊಂಡನು, ಆದ್ದರಿಂದ ಆತನಲ್ಲಿಟ್ಟಿರುವ ನಂಬಿಕೆಯ ಮೂಲಕ ನನಗೆ ಕ್ಷಮಾಪಣೆ ಉಂಟಾಗಬಹುದು. ರಕ್ಷಣೆಗಾಗಿ ನನ್ನ ಭರವಸೆಯನ್ನು ನಿನ್ನಲ್ಲಿ ಹಾಕುತ್ತೇನೆ. ನಿನ್ನ ಕ್ಷಮಾಪಣೆಯ ಅನುಗ್ರಹವನ್ನು ನಾನು ಸ್ವೀಕರಿಸುತ್ತೇನೆ ಮತ್ತು ರಕ್ಷಣೆಗಾಗಿ ನಿನ್ನಲ್ಲಿ ನನ್ನ ಭರವಸೆಯಿಡುತ್ತೇನೆ. ನಿನ್ನ ಅದ್ಬುತವಾದ ಕೃಪೆ ಮತ್ತು ಕ್ಷಮಾಪಣೆಗಾಗಿ – ನಿತ್ಯಜೀವದ ವರಕ್ಕಾಗಿ ನಿನಗೆ ವಂದನೆ! ಆಮೆನ್!”

ನೀವು ಇಲ್ಲಿ ಓದಿದವುಗಳ ನಿಮಿತ್ತ ಕ್ರಿಸ್ತನಿಗಾಗಿ ತೀರ್ಮಾನ ಮಾಡಿಕೊಂಡಿದ್ದೀರಾ? ಹಾಗಾದರೆ, “ನಾನು ಇಂದು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿರುವ ಬಟ್ಟನ್ ಮೇಲೆ ಕ್ಲಿಕ್ ಮಾಡಿರಿ.
Englishಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ

ನನಗೆ ಸರಿಯಾದ ಧರ್ಮ ಯಾವುದಾಗಿದೆ?
Facebook icon Twitter icon Pinterest icon Email icon
© Copyright Got Questions Ministries