ಮುದ್ದಿನ ಪ್ರಾಣಿಗಳು / ಮೃಗ ಪ್ರಾಣಿಗಳು ಸ್ವರ್ಗಕ್ಕೆ ಹೋಗಿ ಡು? ಸಾಕುಪ್ರಾಣಿಗಳು / ಪ್ರಾಣಿಗಳು ಆತ್ಮಗಳು ಹೊಂದಿದ್ದೀರಾ?


ಪ್ರಶ್ನೆ: ಮುದ್ದಿನ ಪ್ರಾಣಿಗಳು / ಮೃಗ ಪ್ರಾಣಿಗಳು ಸ್ವರ್ಗಕ್ಕೆ ಹೋಗಿ ಡು? ಸಾಕುಪ್ರಾಣಿಗಳು / ಪ್ರಾಣಿಗಳು ಆತ್ಮಗಳು ಹೊಂದಿದ್ದೀರಾ?

ಉತ್ತರ:
ಸಾಕುಪ್ರಾಣಿಗಳು/ಪ್ರಾಣಿಗಳು “ಆತ್ಮವನ್ನು” ಹೊಂದಿವೆಯೋ ಅಥವಾ ಸಾಕುಪ್ರಾಣಿಗಳು/ಪ್ರಾಣಿಗಳು ಪರಲೋಕಕ್ಕೆ ಹೋಗುತ್ತವೆಯೋ ಎಂಬುದನ್ನು ಕುರಿತು ಸತ್ಯವೇದವು ಯಾವುದೇ ಸ್ಪಷ್ಟ ಬೊಧನೆಗಳನ್ನು ಕೊಡುವದಿಲ್ಲ. ಹೇಗಾದರೂ, ನಾವು ಈ ವಿಷಯವನ್ನು ಕುರಿತು ಸ್ವಲ್ಪ ಸ್ಪಷ್ಟತೆಯನ್ನು ಹೊಂದಿಕೊಳ್ಳಲು ಸತ್ಯವೇದಾನುಸಾರದ ಸಾಮಾನ್ಯ ತತ್ವಗಳನ್ನು ಉಪಯೋಗಿಸಬಹುದು. ಮನುಷ್ಯರು (ಆದಿಕಾಂಡ 2:7) ಮತ್ತು ಪ್ರಾಣಿಗಳು (ಆದಿಕಾಂಡ 1:30; 6:17; 7:15, 22) ಇವೆರಡೂ “ಜೀವ ಶ್ವಾಸವನ್ನು” ಹೊಂದಿವೆ ಎಂದು ಸತ್ಯವೇದವು ಹೇಳುತ್ತದೆ; ಅಂದರೆ, ಮನುಷ್ಯರು ಮತ್ತು ಪ್ರಾಣಿಗಳು ಇವೆರಡೂ ಜೀವಿಸುವ ಪ್ರಾಣಿಗಳಾಗಿವೆ. ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಇರುವ ಪ್ರಾಥಮಿಕ ವ್ಯತ್ಯಾಸವೆಂದರೆ, ಮಾನವತ್ವವು ದೇವರ ಸ್ವರೂಪ ಮತ್ತು ಹೋಲಿಕೆಯಲ್ಲಿ ಉಂಟುಮಾಡಲ್ಪಟ್ಟಿದೆ (ಆದಿಕಾಂಡ 1:26-27), ಆದರೆ ಪ್ರಾಣಿಗಳು ಹಾಗೆ ಉಂಟುಮಾಡಲ್ಪಟ್ಟಿಲ್ಲ. ದೇವರ ಸ್ವರೂಪ ಮತ್ತು ಹೋಲಿಕೆಯಲ್ಲಿ ಉಂಟುಮಾಡಲ್ಪಟ್ಟಿದೆ ಎಂದರೆ ಮಾನವ ಜೀವಿಗಳು ದೇವರ ಹಾಗೆ, ಮನಸ್ಸು, ಭಾವನೆ ಮತ್ತು ಬಯಕೆಗಳಿಂದ ಆತ್ಮಿಕತೆಗೆ ಶಕ್ತರಾಗಿದ್ದಾರೆ ಮತ್ತು ಮರಣದ ನಂತರ ಸಹ ಮುಂದುವರೆಯುವ ಜೀವದ ಭಾಗವನ್ನು ಸಹ ಹೊಂದಿದ್ದಾರೆ. ಒಂದು ವೇಳೆ ಸಾಕುಪ್ರಾಣಿಗಳು/ಪ್ರಾಣಿಗಳು “ಆತ್ಮ”ವನ್ನು ಅಥವಾ ಅಶರೀರ ಅಂಶವನ್ನು ಹೊಂದಿದ್ದರೆ, ಅದು ವ್ಯತ್ಯಾಸವಾಗಿರುವ ಮತ್ತು ಕಡಿಮೆ “ಗುಣಮಟ್ಟ”ದಾಗಿರುತ್ತದೆ. ಈ ವ್ಯತ್ಯಾಸವು ಪ್ರಾಯಶಃ ಸಾಕುಪ್ರಾಣಿಗಳ/ಪ್ರಾಣಿಗಳ “ಜೀವಾತ್ಮಗಳು” ಮರಣದ ನಂತರ ಅಸ್ತಿತ್ವದಲ್ಲಿ ಇರುವದಿಲ್ಲವೆಂಬದು ಇದರ ಅರ್ಥ.

ಆದಿಕಾಂಡದಲ್ಲಿ ದೇವರ ಸೃಷ್ಟಿಯ ಕಾರ್ಯವಿಧಾನದಲ್ಲಿ ಪ್ರಾಣಿಗಳು ಸಹ ಒಂದು ಭಾಗವೆಂದು ಪರಿಗಣಿಸುವದು ಇನ್ನೊಂದು ಸತ್ಯಾಂಶವಾಗಿದೆ. ದೇವರು ಪ್ರಾಣಿಗಳನ್ನು ಸೃಷ್ಟಿಮಾಡಿ ಅವು ಒಳ್ಳೆಯವೆಂದು ಹೇಳಿದನು (ಆದಿಕಾಂಡ 1:25). ಆದುದರಿಂದ, ನೂತನ ಭೂಮಿಯ ಮೇಲೆ ಪ್ರಾಣಿಗಳು ಏಕೆ ಇರಬಾರದೆಂಬುದಕ್ಕೆ ಕಾರಣವಿಲ್ಲ (ಪ್ರಕಟನೆ 21:1). ಸಾವಿರ ವರುಷಗಳ ಆಳ್ವಿಕೆಯ ಸಮಯದಲ್ಲಿ ಖಂಡಿತವಾಗಿ ಪ್ರಾಣಿಗಳು ಇರುತ್ತವೆ (ಯೆಶಾಯ 11:6; 65:25). ನಾವು ಈ ಭೂಮಿಯ ಮೇಲೆ ಇದ್ದಾಗ ಇದ್ದಂತ ಈ ಪ್ರಾಣಿಗಳಲ್ಲಿ ಕೆಲವು ಮುದ್ದಿನ ಪ್ರಾಣಿಗಳಾಗಿರಬಹುದು ಎಂದು ಹೇಳುವದು ಅಸಾಧ್ಯವಾಗಿರುತ್ತದೆ. ದೇವರು ನೀತಿವಂತನೆಂದು ನಾವು ತಿಳಿದಿದ್ದೇವೆ ಮತ್ತು ನಾವು ಪರಲೋಕಕ್ಕೆ ಹೋದಾಗ, ಏನೇ ಆಗಿದ್ದರೂ, ಈ ವಿಷಯವನ್ನು ಕುರಿತು ಆತನ ನಿರ್ಣಯಕ್ಕೆ ನಾವು ಸಂಪೂರ್ಣ ಒಪ್ಪಿಗೆಗೆ ಬರುತ್ತೇವೆ.

English
ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ
ಮುದ್ದಿನ ಪ್ರಾಣಿಗಳು / ಮೃಗ ಪ್ರಾಣಿಗಳು ಸ್ವರ್ಗಕ್ಕೆ ಹೋಗಿ ಡು? ಸಾಕುಪ್ರಾಣಿಗಳು / ಪ್ರಾಣಿಗಳು ಆತ್ಮಗಳು ಹೊಂದಿದ್ದೀರಾ?