settings icon
share icon
ಪ್ರಶ್ನೆ

ಜೀವನದ ಅರ್ಥವೇನಾಗಿದೆ?

ಉತ್ತರ


ಜೀವನದ ಅರ್ಥವೇನಾಗಿದೆ? ಜೀವನದಲ್ಲಿ ಉದ್ದೇಶ, ನೇರವೇರಿಕೆ, ಮತ್ತು ಸಂತೃಪ್ತಿಯನ್ನು ಕಂಡುಕೊಳ್ಳುವದು ಹೇಗೆ? ಸದಾಕಾಲ ಇರುವಂತ ಯಾವುದಾದರು ಮಹತ್ವವನ್ನು ಸಾಧಿಸುವುದು ಹೇಗೆ? ಈ ಪ್ರಾಮುಖ್ಯ ಪ್ರಶ್ನೆಗಳನ್ನು ಪರಿಗಣಿಸಲು ಬಹಳಷ್ಟು ಜನರು ಎಂದಿಗೂ ನಿಲ್ಲಲಿಲ್ಲ. ಅವರು ಕೆಲವು ವರುಷಗಳ ನಂತರ, ತಮ್ಮ ಸಂಬಂಧಗಳು ಯಾಕೆ ಬಿದ್ದು ಹೋಗಿವೆ ಮತ್ತು ಅವರು ನೆರವೇರಿಸಬೇಕೆಂದು ಗುರಿಯಿಟ್ಟುಕೊಂಡದ್ದನ್ನು ಸಾಧಿಸಿದ್ದರೂ ಸಹ, ತಾವು ಯಾಕೆ ಇಷ್ಟೊಂದು ಬರಿದಾಗಿದ್ದೇವೆ ಎಂದು ಹಿಂದಿರುಗಿ ನೋಡಿಕೊಳ್ಳುತ್ತಾರೆ. ತನ್ನ ಕ್ರೀಡೆಯಲ್ಲಿ ಉನ್ನತ ಮಟ್ಟಕ್ಕೆ ತಲುಪಿದ ಓರ್ವ ಕ್ರೀಡಾಪಟು ತನ್ನ ಕ್ರೀಡೆಯನ್ನು ಮೊದಲು ಆರಂಭಿಸಿದಾಗ ಯಾರಾದರು ತನಗೆ ಏನು ಹೇಳ ಬೇಕಾಗಿತ್ತು ಎಂದು ನೀನು ಆಶಿಸುತ್ತೀ ಎಂದು ಕೇಳಿದರು. ಅವನು ಉತ್ತರಿಸಿ, “ನೀನು ತುದಿಯನ್ನು ತಲುಪಿದಾಗ, ಅಲ್ಲಿ ಏನೂ ಇರುವದಿಲ್ಲ ಎಂದು ಹೇಳಬೇಕಾಗಿತ್ತು ಎಂದು ನಾನು ಆಶಿಸುತ್ತೇನೆ. ತಮ್ಮ ಅನ್ವೇಷಣೆಯಲ್ಲಿ ಅನೇಕ ವರುಷಗಳನ್ನು ವ್ಯರ್ಥಮಾಡಿದ ನಂತರ ಅನೇಕ ಗುರಿಗಳು ತಮ್ಮ ಬರಿದುತನವನ್ನು ತಿಳಿಯಪಡಿಸುತ್ತವೆ.

ನಮ್ಮ ಮಾನವಿಯ ಸಂಸ್ಕೃತಿಯಲ್ಲಿ, ಅವರು ಅರ್ಥವನ್ನು ಕಂಡುಕೊಳ್ಳಬಹುದೆಂದು ಆಲೋಚಿಸಿ, ಜನರು ಅನೇಕ ಸಂಗತಿಗಳನ್ನು ಹಿಂಬಾಲಿಸುತ್ತಾರೆ. ಈ ಕೆಲವು ಸಾಧನೆಗಳು ಅವು ವ್ಯವಹಾರದಲ್ಲಿ ಸಫಲತೆ, ಸಂಪತ್ತು, ಒಳ್ಳೆಯ ಸಂಬಂಧಗಳು, ಲೈಂಗಿಕತೆ, ಮನರಂಜನೆ, ಮತ್ತು ಬೇರೆಯವರಿಗೆ ಒಳ್ಳೆಯದನ್ನು ಮಾಡುವುದು. ತಮ್ಮ ಗುರಿಗಳಾದ ಸಂಪತ್ತು, ಸಂಬಂಧಗಳು ಮತ್ತು ಆನಂದ ಇವುಗಳನ್ನು ಸಾಧಿಸಿಕೊಂಡಾಗ, ಒಳಗೆ ಆಳದಲ್ಲಿ ಇನ್ನೂ ಬರಿದಾಗಿತ್ತು, ಅದನ್ನು ತುಂಬಲು ಯಾವುದರಿಂದಲೂ ಸಾಧ್ಯವಿಲ್ಲವೆಂಬ ಬರಿದಾದ ಭಾವನೆಯಿತ್ತು.

ಈ ಭಾವನೆಯನ್ನು ಸತ್ಯವೇದದ ಪುಸ್ತಕವಾಗಿರುವ ಪ್ರಸಂಗಿಯ ಗ್ರಂಥಕರ್ತನು ಇದನ್ನು ವಿವರಿಸಿ ಹೀಗೆ ಹೇಳುತ್ತಾನೆ, “ವ್ಯರ್ಥವೇ ವ್ಯರ್ಥ! ವ್ಯರ್ಥವೇ ವ್ಯರ್ಥ! ಸಮಸ್ತವೂ ವ್ಯರ್ಥ! (ಪ್ರಸಂಗಿ 1:2). ಪ್ರಸಂಗಿ ಪುಸ್ತಕದ ಗ್ರಂಥಕರ್ತ ಅರಸನಾದ ಸಲೊಮೋನನು ಅಳತೆ ಮಾಡಲಾರದಷ್ಟು ಸಂಪತ್ತನ್ನು ಹೊಂದಿದ್ದನು, ತನ್ನ ಅಥವಾ ನಮ್ಮ ಸಮಯದಲ್ಲಿ ಯಾವುದೇ ಮನುಷ್ಯನಿಗಿಂತ ಮೀರಿ ಜ್ಞಾನವನ್ನು ಹೊಂದಿದ್ದನು, ನೂರಾರು ಸ್ತ್ರೀಯರು, ಸ್ಥಳಗಳು ಮತ್ತು ತೋಟಗಳು ಇವು ಬೇರೆ ಸಾಮ್ಯಾಜ್ಯಗಳಿಗೆ ಅಸೂಯೆ ತಂದಿತು, ಉತ್ತಮವಾದ ಆಹಾರ ಮತ್ತು ದ್ರಾಕ್ಷಾರಸ, ಮತ್ತು ಎಲ್ಲಾ ವಿಧವಾದ ಮನರಂಜನೆ ಇತ್ತು. ಒಂದು ಸಮಯದ್ದಲ್ಲಿ ತನ್ನ ಹೃದಯ ಬೇಕೆಂದು ಬಯಸಿದ್ದನ್ನು ಹೊಂದಿಕೊಳ್ಳುತ್ತಿದ್ದನು ಎಂದು ಹೇಳಿದನು. ಆದರೂ, “ಸೂರ್ಯನ ಕೆಳಗಿರುವ ಜೀವನ”ವನ್ನು ಹೀಗೆ ಸಾರಾಂಶಗೊಳಿಸಿದನು –ನಮ್ಮ ಕಣ್ಣುಗಳಿಂದ ನಾವು ನೋಡಬಹುದಾದ ಮತ್ತು ನಮ್ಮ ಇಂದ್ರೀಯಗಳಿಂದ ಅನುಭವಿಸಬಹುದಾದ ಎಲ್ಲವೂ ಇದ್ದು ನಾವು ಬದುಕಿದ ಜೀವಿತವು – ಅರ್ಥವಿಲ್ಲದ್ದಾಗಿದೆ. ಯಾಕೆ ಇಷ್ಟೊಂದು ಶೂನ್ಯವಾಗಿದೆ? ಯಾಕೆಂದರೆ ನಾವು ಇಲ್ಲಿ ಮತ್ತು ಈಗ ಅನುಭವಿಸುವದಕ್ಕಿಂತ ಇನ್ನು ಮಿಗಿಲಾಗಿರುವದಕ್ಕಾಗಿ ದೇವರು ನಮ್ಮನ್ನು ಉಂಟುಮಾಡಿದ್ದಾನೆ. ಸೊಲೊಮೋನನು ದೇವರನ್ನು ಕುರಿತು ಹೇಳಿದ್ದು, “ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ” (ಪ್ರಸಂಗಿ 3:11). “ಇಲ್ಲಿ ಮತ್ತು ಈಗ” ಇರುವಂತದ್ದೇ ಎಲ್ಲಾ ಅಲ್ಲವೆಂದು ನಮ್ಮ ಹೃದಯದಲ್ಲಿ ನಾವು ಅರಿವುಳ್ಳವರಾಗಿದ್ದೇವೆ.

ಸತ್ಯವೇದದ ಮೊದಲ ಪುಸ್ತಕ ಆದಿಕಾಂಡದಲ್ಲಿ, ದೇವರು ಮಾನವಕುಲವನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನೆಂದು ನಾವು ನೋಡುತ್ತೇವೆ (ಆದಿಕಾಂಡ 1:26). ಅಂದರೆ ಇದರ ಅರ್ಥ ನಾವು ಬೇರೆ ಎಲ್ಲದಕ್ಕಿಂತ ಹೆಚ್ಚಾಗಿ ದೇವರ ಹಾಗೆ ಇದ್ದೇವೆ (ಬೇರೆ ಜೀವಿಯ ರೂಪ). ಮಾನವಕುಲವು ಪಾಪಕ್ಕೆ ಬೀಳುವುದಕ್ಕಿಂತ ಮತ್ತು ಭೂಮಿಯ ಮೇಲೆ ಪಾಪಕ್ಕೆ ಶಾಪ ಬರುವದಕ್ಕಿಂತ ಮುಂಚೆ, ಈ ಕೆಳಗಿನ ಸಂಗತಿಗಳು ಸತ್ಯವಾಗಿದ್ದವು: 1) ದೇವರು ಮನುಷ್ಯನನ್ನು ಸಹವಾಸಪ್ರಿಯ ಜೀವಿಯಾಗಿ ಮಾಡಿದನು (ಆದಿಕಾಂಡ 2:18-25); 2) ದೇವರು ಮನುಷ್ಯನಿಗೆ ಕೆಲಸವನ್ನು ಕೊಟ್ಟನು (ಆದಿಕಾಂಡ 2:15); 3) ದೇವರು ಮನುಷ್ಯನೊಂದಿಗೆ ಅನ್ಯೋನ್ಯತೆಯನ್ನು ಹೊಂದಿದ್ದನು (ಆದಿಕಾಂಡ 3:8); ಮತ್ತು 4) ದೇವರು ಮನುಷ್ಯನಿಗೆ ಭೂಮಿಯ ಮೇಲೆ ಅಧೀನತೆಯನ್ನು ಕೊಟ್ಟನು (ಆದಿಕಾಂಡ 1:26). ಈ ಸಂಗತಿಗಳ ಮಹತ್ವವೇನಾಗಿದೆ? ಜೀವನದಲ್ಲಿ ನಮ್ಮ ನೆರವೇರಿಕೆಗೆ ಕೂಡಿಸುವದಕ್ಕಾಗಿ ಈ ಪ್ರತಿಯೊಂದು ಸಂಗತಿಯನ್ನು ದೇವರು ಉದ್ದೇಶಿಸಿದನು, ಆದರೆ ಮನುಷ್ಯನು ಪಾಪಕ್ಕೆ ಬೀಳುವುದರ ಮೂಲಕ ಈ ಎಲ್ಲವೂ (ವಿಶೇಷವಾಗಿ ದೇವರೊಂದಿಗಿದ್ದ ಮನುಷ್ಯನ ಅನ್ಯೋನ್ಯತೆ) ಕೆಟ್ಟ ಪರಿಣಾಮ ಬೀರಿದವು ಮತ್ತು ಭೂಮಿಯ ಮೇಲೆ ಶಾಪವು ಬಂತು (ಆದಿಕಾಂಡ 3).

ಸತ್ಯವೇದದ ಕೊನೆಯ ಪುಸ್ತಕವಾದ ಪ್ರಕಟನೆಯಲ್ಲಿ, ಈ ಪ್ರಸ್ತುತ ಭೂಮಿಆಕಾಶಗಳನ್ನು ನಾಶಪಡಿಸುವೆನು ಮತ್ತು ಹೊಸ ಆಕಾಶ ಹೊಸ ಭೂಮಿಯನ್ನು ಸೃಷ್ಟಿಸಿ ನಿತ್ಯರಾಜ್ಯವನ್ನು ಉಂಟುಮಾಡುವೆನು ಎಂದು ದೇವರು ತಿಳಿಯಪಡಿಸಿದನು. ಆ ಸಮಯದಲ್ಲಿ, ಆತನು ವಿಮೋಚಿಸಲ್ಪಟ್ಟ ಮಾನವ ಕುಲವನ್ನು ಸಂಪೂರ್ಣ ಅನ್ಯೋನ್ಯತೆಗೆ ಪುನರ್ ಸ್ಥಾಪಿಸವನು, ವಿಮೋಚಿಸಲ್ಪಡದೆ ಇರುವವರನ್ನು ಅಯೋಗ್ಯರೆಂದು ತೀರ್ಪುಮಾಡಿ ಬೆಂಕಿಯ ಕೆರೆಗೆ ದೊಬ್ಬಲಾಗುವದು (ಪ್ರಕಟನೆ 20:11-15). ಪಾಪದ ಶಾಪವು ಮುಕ್ತಾಯಗೊಳ್ಳುತ್ತದೆ; ಇನ್ನು ಮೇಲೆ ಪಾಪ, ದುಃಖ, ಕಾಯಿಲೆ, ಸಾವು ಅಥವಾ ನೋವು ಇರುವದಿಲ್ಲ (ಪ್ರಕಟನೆ 21:4). ದೇವರು ಅವರೊಂದಿಗೆ ವಾಸಿಸುವನು, ಮತ್ತು ಅವರು ಆತನ ಮಕ್ಕಳಾಗಿರುವರು (ಪ್ರಕಟನೆ 21:7). ಹೀಗೆ, ನಾವು ಪೂರ್ಣ ವೃತ್ತಕ್ಕೆ ಬರುತ್ತೇವೆ: ನಾವು ಆತನೊಂದಿಗೆ ಅನ್ಯೋನ್ಯತೆಯನ್ನು ಹೊಂದಿಕೊಳ್ಳಬೇಕೆಂದು ದೇವರು ನಮ್ಮನ್ನು ಉಂಟುಮಾಡಿದನು, ಮನುಷ್ಯನು ಪಾಪ ಮಾಡಿ ಈ ಅನ್ಯೋನ್ಯತೆಯನ್ನು ಮುರಿದುಹಾಕಿದನು, ದೇವರು ಈ ಅನ್ಯೋನ್ಯತೆಯನ್ನು ಸಂಪೂರ್ತಿಯಾಗಿ ನಿತ್ಯಸ್ಥಿತಿಗೆ ಪುನರ್ ಸ್ಥಾಪಿಸಿದನು. ಎಲ್ಲವನ್ನೂ ಸಾಧಿಸಿದಂತ ಜೀವಿತವನ್ನು ಹಾದು ನಿತ್ಯತ್ವಕ್ಕಾಗಿ ದೇವರಿಂದ ಪ್ರತ್ಯೇಕವಾಗಿ ಸಾಯುವುದು ಕೇವಲ ನಿರರ್ಥಕಕ್ಕಿಂತ ಹೀನಾಯವಾಗಿದೆ! ಆದರೆ ದೇವರು ನಿತ್ಯ ಪರಮಾನಂದಕ್ಕೆ ಮಾರ್ಗವನ್ನು ಸಾಧ್ಯವಾಗಿ ಮಾಡಿದಷ್ಟೇ ಅಲ್ಲದೆ (ಲೂಕ 23:43), ಭೂಮಿಯ ಮೇಲೆ ಜೀವಿತವನ್ನು ತೃಪ್ತಿಕರ ಮತ್ತು ಅರ್ಥಭರಿತವಾಗಿ ಸಹ ಮಾಡಿದನು. ಈ ನಿತ್ಯ ಪರಮಾನಂದವನ್ನು ಮತ್ತು “ಭೂಮಿಯ ಮೇಲೆ ಸ್ವರ್ಗ”ವನ್ನು ಪಡೆದುಕೊಳ್ಳುವುದು ಹೇಗೆ?

ಯೇಸು ಕ್ರಿಸ್ತನ ಮೂಲಕ ಪುನರ್ ಸ್ಥಾಪಿಸಿದ ಜೀವನದ ಅರ್ಥ

ಆದಾಮ ಮತ್ತು ಹವ್ವ ಪಾಪಕ್ಕೆ ಬಿದ್ದಾಗ ಕಳಕೊಂಡ ದೇವರೊಂದಿಗಿನ ಸಂಬಂಧವನ್ನು ಪುನರ್ ಸ್ಥಾಪಿಸಿದಾಗ, ಈಗ ಮತ್ತು ನಿತ್ಯತ್ವದಲ್ಲಿ ಜೀವನದ ನಿಜ ಅರ್ಥವು ಕಂಡುಬರುತ್ತದೆ. ದೇವರೊಂದಿಗೆ ಈ ಸಂಬಂಧವು ತನ್ನ ಕುಮಾರನಾದ ಯೇಸುಕ್ರಿಸ್ತನ ಮೂಲಕ ಮಾತ್ರ ಸಾಧ್ಯ (ಅಪೊಸ್ತಲರ ಕೃತ್ಯಗಳು 4:12; ಯೋಹಾನ 1:12; 14:6). ನಮ್ಮ ಪಾಪಕ್ಕಾಗಿ ನಾವು ಪಶ್ಚಾತಾಪಪಟ್ಟಾಗ, ಕ್ರಿಸ್ತನು ನಮ್ಮನ್ನು ಹೊಸ ಸೃಷ್ಟಿಯಾಗಿ ಮಾಡುವುದರ ಮೂಲಕ ಮಾರ್ಪಡಿಸುವನು, ಮತ್ತು ನಾವು ಯೇಸುಕ್ರಿಸ್ತನು ರಕ್ಷಕನೆಂದು ಆತನ ಮೇಲೆ ಆತುಕೊಂಡಾಗ, ನಿತ್ಯಜೀವವನ್ನು ಪಡೆದುಕೊಳ್ಳಬಹುದು.

ಯೇಸುವನ್ನು ರಕ್ಷಕನೆಂದು ಕೇವಲ ಅಂಗೀಕರಿಸುವುದರಿಂದ ಮಾತ್ರ ಜೀವನದಲ್ಲಿ ನಿಜವಾದ ಅರ್ಥವನ್ನು, ಅಷ್ಟೊಂದು ಅದ್ಭುತಕರವಾಗಿರುವಷ್ಟು ಕಂಡುಕೊಳ್ಳಲು ಆಗುವದಿಲ್ಲ. ಆದರೆ ಆತನ ಶಿಷ್ಯನಾಗಿ, ಆತನನ್ನು ಕುರಿತು ಕಲಿಯುವುದು, ಆತನ ವಾಕ್ಯಗಳಲ್ಲಿ ಆತನೊಂದಿಗೆ ಸಮಯವನ್ನು ಕಳೆಯುವುದು, ಪ್ರಾರ್ಥನೆಯಲ್ಲಿ ಆತನೊಂದಿಗೆ ಐಕ್ಯವಾಗುವದು, ಮತ್ತು ಆತನ ಆಜ್ಞೆಗಳಿಗೆ ವಿಧೇಯರಾಗುತ್ತಾ ಆತನೊಂದಿಗೆ ನಡೆಯುವದರಿಂದ ಜೀವನದಲ್ಲಿ ನಿಜವಾದ ಅರ್ಥವಿರುತ್ತದೆ. ಒಂದು ವೇಳೆ ನೀವು ಕ್ರೈಸ್ತರಾಗಿಲ್ಲದೆ ಇದ್ದರೆ (ಅಥವಾ ಬಹುಶಃ ಹೊಸ ವಿಶ್ವಾಸಿಯಾಗಿರಬಹುದು), ನಿಮ್ಮಷ್ಟಕ್ಕೆ ನೀವು ಹೀಗೆ ಹೇಳುತ್ತಿರಬಹುದು, “ಇದು ನನಗೆ ಬಹಳ ಸಂತೋಷಕರವಾಗಿ ಅಥವಾ ನೆರವೇರುವಂತೆ ಕಾಣುವದಿಲ್ಲ!” ಆದರೆ ಯೇಸು ಈ ಕೆಳಗಿನ ಹೇಳಿಕೆಗಳನ್ನು ಹೇಳಿದನು:

“ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವೀಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು ಅಂದನು” (ಮತ್ತಾಯ 11:28-30). “ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿ ಇರಬೇಕೆಂತಲೂ ಬಂದೆನು” (ಯೋಹಾನ 10:10ಬಿ). “ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ – ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳಕೊಂಡವನು ಅದನ್ನು ಕಂಡುಕೊಳ್ಳುವನು” (ಮತ್ತಾಯ 16:24-25). “ಆಗ ಯೆಹೋವನಲ್ಲಿ ಸಂತೋಷಿಸುವಿ; ಮತ್ತು ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು” (ಕೀರ್ತನೆ 37:4).

ನಮಗೆ ಆಯ್ಕೆ ಇದೆ ಎಂದು ಈ ಎಲ್ಲಾ ವಚನಗಳು ಹೇಳುತ್ತಿವೆ. ನಮ್ಮ ಸ್ವಂತ ಜೀವಿತಗಳನ್ನು ಮಾರ್ಗದರ್ಶಿಸಲು ನಾವು ಸತತವಾಗಿ ಹುಡುಕಬಹುದು, ಇದು ಬರಿದಾಗಿ ಪರಿಣಮಿಸುತ್ತದೆ, ಅಥವಾ ನಾವು ಪೂರ್ಣ ಹೃದಯದಿಂದ ದೇವರನ್ನು ಹುಡುಕಲು ಮತ್ತು ನಮ್ಮ ಜೀವಿತಗಳಿಗಾಗಿ ಆತನ ಚಿತ್ತವನ್ನು ಆರಿಸಿಕೊಳ್ಳಬಹುದು, ಇದು ನಮ್ಮ ಹೃದಯದ ಆಶೆಗಳನ್ನು ಪೂರೈಸಿ, ಜೀವಿತವನ್ನು ಸಂಪೂರ್ಣವಾಗಿ ಜೀವಿಸುವಂತೆ, ಮತ್ತು ನೆಮ್ಮದಿ ಮತ್ತು ತೃಪ್ತಿಯನ್ನು ಕಂಡುಕೊಳ್ಳುವಂತೆ ಮಾಡುತ್ತದೆ. ಯಾಕೆಂದರೆ ನಮ್ಮ ಸೃಷ್ಟಿಕರ್ತನು ನಮ್ಮನ್ನು ಪ್ರೀತಿಸುತ್ತಾನೆ ಮತ್ತು ನಮಗಾಗಿ ಒಳ್ಳೆಯದನ್ನೇ ಬಯಸುತ್ತಾನೆ (ಸುಲಭವಾದದ್ದಲ್ಲಾ, ಆದರೆ ಅತಿಹೆಚ್ಚಾಗಿ ನೆರವೇರಿಸುವ ಜೀವತವನ್ನು).

ಕ್ರೀಡೆಯ ಕಾರ್ಯಕ್ರಮದಲ್ಲಿ ಆಟಕ್ಕೆ ಹತ್ತಿರವಿರುವ ಬಹಳ ಬೆಲೆಯುಳ್ಳ ಸ್ಥಳವನ್ನು ಕೊಂಡುಕೊಳ್ಳಬೇಕೋ ಅಥವಾ ಕಡಿಮೆ ಹಣಕೊಟ್ಟು ಆಟವನ್ನು ದೂರದಿಂದ ನೋಡಬೇಕೋ ಎಂದು ಮಾಡುವ ಆಯ್ಕೆಗೆ ಕ್ರೈಸ್ತ ಜೀವಿತವನ್ನು ಹೋಲಿಸಬಹುದು. ದೇವರು ಮಾಡುವಂತ ಕಾರ್ಯವನ್ನು “ಮೊದಲ ಸಾಲಿನಿಂದ” ನೋಡಲು ನಾವು ಆರಿಸಿಕೋಳ್ಳಬೇಕು, ಆದರೆ ದುಃಖಕರವಾಗಿ, ಇದನ್ನು ಅನೇಕ ಜನರು ಆರಿಸಿಕೊಳ್ಳುವದಿಲ್ಲ. ದೇವರು ಮಾಡುವ ಕಾರ್ಯವನ್ನು ನೇರವಾಗಿ ನೋಡುವಂತದ್ದು ಕ್ರಿಸ್ತನ ಪೂರ್ಣಹೃದಯದ ಶಿಷ್ಯರಿಗೆ ಆಗಿದೆ, ಇವರು ತಮ್ಮ ಸ್ವಂತ ಆಶೆಗಳನ್ನು ಪೂರೈಸುವದನ್ನು ನಿಜವಾಗಿ ನಿಲ್ಲಿಸಿ ದೇವರ ಉದ್ದೇಶಗಳನ್ನು ಮುಂದುವರಿಸಿದವರಾಗಿದ್ದಾರೆ. ಅವರು ಕ್ರಯವನ್ನು ಕೊಟ್ಟಿದ್ದಾರೆ (ಕ್ರಿಸ್ತನಿಗೆ ಮತ್ತು ಆತನ ಚಿತ್ತಕ್ಕೆ ಸಂಪೂರ್ತಿಯಾಗಿ ಒಪ್ಪಿಸಿದವರು); ಅವರು ಜೀವಿತವನ್ನು ಅದರ ಪೂರ್ಣತೆಗೆ ಅನುಭವಿಸಿದ್ದಾರೆ; ಮತ್ತು ಅವರು ತಮ್ಮಷ್ಟಕ್ಕೆ ತಮ್ಮನ್ನೇ, ಅವರ ಜೊತೆಗಾರರನ್ನು, ಮತ್ತು ಯಾವುದೇ ವಿಷಾದವಿಲ್ಲದೆ ಅವರನ್ನು ಉಂಟುಮಾಡುವವರನ್ನು ಎದುರಿಸಬಹುದು. ನೀವು ಕ್ರಯವನ್ನು ಕೊಟ್ಟಿದ್ದೀರಾ? ನೀವು ಇದಕ್ಕೆ ಮನಸ್ಸುಳ್ಳವರಾಗಿದ್ದೀರಾ? ಹಾಗಾದರೆ, ನೀವು ಅರ್ಥಕ್ಕಾಗಿ ಅಥವಾ ಉದ್ದೇಶಕ್ಕಾಗಿ ಮತ್ತೆ ಹಸಿವೆಗೊಳ್ಳುವದಿಲ್ಲ.

Englishಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ

ಜೀವನದ ಅರ್ಥವೇನಾಗಿದೆ?
Facebook icon Twitter icon Pinterest icon Email icon
© Copyright Got Questions Ministries