ನಾನು ಸತ್ತರೆ ಪರಲೋಕ್ಕೆ ಹೋಗುತ್ತೇನೆಂದು ತಿಳಿದುಕೊಳ್ಳುವುದು ಹೇಗೆ?


ಪ್ರಶ್ನೆ: ನಾನು ಸತ್ತರೆ ಪರಲೋಕ್ಕೆ ಹೋಗುತ್ತೇನೆಂದು ತಿಳಿದುಕೊಳ್ಳುವುದು ಹೇಗೆ?

ಉತ್ತರ:
ನೀವು ಸತ್ತರೆ ಪರಲೋಕಕ್ಕೆ ಹೋಗುತ್ತೀರೆಂತಲೂ ಹಾಗೂ ನಿಮಗೆ ನಿತ್ಯಜೀವ ಉಂಟೆಂತಲೂ ನಿಮಗೆ ಖಚಿತವಾಗಿ ಗೊತ್ತೋ? ನೀವು ಖಚಿತವಾಗಿರಬೇಕೆಂದು ದೇವರು ಬಯಸುತ್ತಾನೆ! ಸತ್ಯವೇದ ಹೀಗೆ ಹೇಳುತ್ತದೆ, "ದೇವರ ಮಗನ ಹೆಸರಿನಲ್ಲಿ ನಂಬಿಕೆಯಿಟ್ಟಿರುವವರಾದ ನಿಮ್ಮಲ್ಲಿ ನಿತ್ಯಜೀವ ಉಂಟೆಂದು ನಿಮಗೆ ಗೊತ್ತಾಗುವಂತೆ ಈ ಮಾತುಗಳನ್ನು ಬರೆದಿದ್ದೇನೆ." (1 ಯೋಹಾನ 5:13). ನೀವು ಈ ಕ್ಷಣವೇ ದೇವರ ಮುಂದೆ ನಿಂತಿರುವುದನ್ನು ಹಾಗೂ ಆತನು ನಿಮಗೆ: "ನಿಮ್ಮನ್ನು ಪರಲೋಕದಲ್ಲಿಡಲು ನಾನೇಕೆ ಬಿಡಲಿ?" ಎಂದು ಕೇಳಿರುವಂತೆ ಭಾವಿಸಿ. ಅದಕ್ಕೆ ನೀವೆನು ಹೇಳುತ್ತೀರಿ? ಏನು ಉತ್ತರಿಸಬೆಕೆಂದು ನಿಮಗೆ ತಿಳಿಯದಿರಬಹುದು. ದೇವರು ನಮ್ಮನ್ನು ಪ್ರೀತಿಸುತ್ತಾನೆ ಮತ್ತು ನಾವು ನಿತ್ಯತ್ವವನ್ನು ಎಲ್ಲಿ ಕಳೆಯುತ್ತೇವೆಂದು ಖಚಿತವಾಗಿ ತಿಳಿದುಕೊಳ್ಳಲು ಆತನು ಒಂದು ಮಾರ್ಗ ಒದಗಿಸಿದ್ದಾನೆಂದು ನೀವು ತಿಳಿದುಕೊಳ್ಳಬೇಕಾಗಿದೆ. ಸತ್ಯವೇದ ಹೀಗೆ ಹೇಳುತ್ತದೆ, "ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು. ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು" (ಯೋಹಾನ 3:16).

ನಮ್ಮನ್ನು ಪರಲೋಕದಿಂದ ದೂರವಿಡುವ ಸಮಸ್ಯೆ ಯಾವದೆಂದು ನಾವು ಮೊದಲು ಅರ್ಥಮಾಡಿಕೊಳ್ಳಬೇಕಾಗಿದೆ. ಸಮಸ್ಯೆ ಏನೆಂದರೆ - ನಮ್ಮ ಪಾಪಸ್ವಭಾವವೇ ದೇವರೊಂದಿಗೆ ಸಂಬಂಧವನ್ನಿಟ್ಟುಕೊಳ್ಳದಂತೆ ನಮ್ಮನ್ನು ದೂರವಿಡುತ್ತದೆ. ನಾವು ಸ್ವಭಾವಪೂರ್ವಕವಾಗಿ ಹಾಗೂ ಆಯ್ಕೆಪೂರ್ವಕವಾಗಿ ಪಾಪಿಗಳಾಗಿದ್ದೇವೆ. "ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ" (ರೋಮಾ 3:23). ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಆಗುವುದಿಲ್ಲ. "ನಂಬಿಕೆಯ ಮೂಲಕ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ವರವೇ. ಅದು ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ; ಆದದರಿಂದ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ" (ಎಫೆಸ 2:8-9). ಮರಣ ಮತ್ತು ನರಕವೇ ನಮ್ಮ ಗತಿಯಾಗಿತ್ತು. "ಪಾಪವು ಕೊಡುವ ಸಂಬಳ ಮರಣ" (ರೋಮಾ 6:23).

ದೇವರು ಪರಿಶುದ್ಧನೂ ನೀತಿವಂತನೂ ಆಗಿರುವುದರಿಂದ ಪಾಪಕ್ಕೆ ಶಿಕ್ಷೆ ಕೊಡಲೇಬೇಕಾಯಿತು, ಆದರೆ ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪಗಳಿಗೆ ಕ್ಷಮಾಪಣೆಯನ್ನು ಕೊಟ್ಟನು. ಯೇಸು ಹೇಳಿದ್ದು, "ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ" (ಯೋಹಾನ 14:6). ಯೇಸು ನಮಗೋಸ್ಕರ ಶಿಲುಬೆ ಮೇಲೆ ಸತ್ತನು, "ಕ್ರಿಸ್ತನು ಸಹ ನೀತಿವಂತನಾಗಿದ್ದು ಅನೀತಿವಂತರಿಗೋಸ್ಕರ ಪ್ರಾಣಕೊಟ್ಟು ನಮ್ಮನ್ನು ದೇವರ ಬಳಿಗೆ ಸೇರಿಸುವದಕ್ಕಾಗಿ ಒಂದೇ ಸಾರಿ ಪಾಪನಿವಾರಣಕ್ಕೋಸ್ಕರ ಬಾಧೆಪಟ್ಟು ಸತ್ತನು" (1 ಪೇತ್ರ 3:18). ಯೇಸು ಸತ್ತವರೊಳಗಿಂದ ಪುನುರುತ್ಥಾನ ಹೊಂದಿದನು, "ದೇವರು ಆತನನ್ನು ನಮ್ಮ ಅಪರಾಧಗಳ ನಿಮಿತ್ತ ಮರಣಕ್ಕೆ ಒಪ್ಪಿಸಿಕೊಟ್ಟು ನಮಗೆ ನೀತಿವಂತರೆಂಬ ನಿರ್ಣಯವು ಉಂಟಾಗುವ ನಿಮಿತ್ತ ಜೀವದಿಂದ ಎಬ್ಬಿಸಿದನು" (ರೋಮಾ 4:25).

ತಿರಿಗಿ ಮೂಲ ಪ್ರಶ್ನೆಗೆ ಹೋಗೊಣ - "ನಾನು ಸತ್ತರೆ ಪರಲೋಕ್ಕೆ ಹೋಗುತ್ತೇನೆಂದು ತಿಳಿದುಕೊಳ್ಳುವುದು ಹೇಗೆ? ಇದಕ್ಕೆ ಉತ್ತರ - ಕರ್ತನಾದ ಯೇಸುವಿನ ಮೇಲೆ ನಂಬಿಯಿಡು, ಆಗ ನೀನು ರಕ್ಷಣೆಹೊಂದುವಿ (ಅಪೋಸ್ತಲರ ಕೃತ್ಯ 16:31). "ಯಾರಾರು ಆತನನ್ನು ಅಂಗಿಕರಿಸಿದರೋ, ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರೋ, ಅವರಿಗೆ ದೇವರ ಮಕ್ಕಳಾಗುವ ಅಧಿಕಾರ ಕೊಟ್ಟನು" (ಯೋಹಾನ 1:12). ನೀವು ನಿತ್ಯಜೀವವನ್ನು ಒಂದು ಉಚಿತ ವರವಾಗಿ ಹೊಂದಿಕೊಳ್ಳಬಹುದು. "ದೇವರ ಉಚಿತಾರ್ಥಾವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ" (ರೋಮಾ 6:23). ಈ ಕ್ಷಣವೇ ನೀವೊಂದು ಪರಿಪೂರ್ಣ ಹಾಗೂ ಸಂಪೂರ್ಣ ಅರ್ಥಭರಿತ ಜೀವಿತವನ್ನು ಜೀವಿಸಬಹುದು. ಯೇಸು ಹೇಳಿದ್ದು, "ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿ ಇರಬೇಕೆಂತಲೂ ಬಂದೆನು" (ಯೋಹಾನ 10:10). ನೀವು ಪರಲೋಕದಲ್ಲಿ ಯೇಸುವಿನೊಂದಿಗೆ ನಿತ್ಯತ್ವವನ್ನು ಕೆಳೆಯಬಹುದು, ಯಾಕೆಂದರೆ ಆತನು ಹೀಗೆ ವಾಗ್ದಾನ ಮಾಡಿದ್ದಾನೆ, "ನಾನು ಹೋಗಿ ನಿಮಗೆ ಸ್ಥಳವನ್ನು ಸಿದ್ಧಮಾಡಿದ ಮೇಲೆ ತಿರಿಗಿ ಬಂದು ನಿಮ್ಮನ್ನು ಕರಕೊಂಡು ಹೋಗಿ ನನ್ನ ಬಳಿಗೆ ಸೇರಿಸಿಕೊಳ್ಳುವೆನು; ಯಾಕೆಂದರೆ ನಾನಿರುವ ಸ್ಥಳದಲ್ಲಿ ನೀವು ಸಹ ಇರಬೇಕು" (ಯೋಹಾನ 14:3).

ಯೇಸು ಕ್ರಿಸ್ತನನ್ನು ನಿಮ್ಮ ರಕ್ಷಕನನ್ನಾಗಿ ಅಂಗೀಕರಿಸಿ ದೇವರಿಂದ ಕ್ಷಮಾಪಣೆ ಪಡೆಯಲು ನೀವು ಬಯಸುವುದಾದರೆ, ನೀವು ಪ್ರಾರ್ಥಿಸಬೇಕಾದ ಪ್ರಾರ್ಥನೆ ಇಲ್ಲಿದೆ. ಈ ಪ್ರಾರ್ಥನೆಯಾಗಲಿ ಅಥವಾ ಬೇರೆ ಯಾವುದೇ ಪ್ರಾರ್ಥನೆಯಾಗಲಿ ಹೇಳುವುದರಿಂದ ನೀವು ರಕ್ಷಿಸಲ್ಪಡುವುದಿಲ್ಲ. ಕೇವಲ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವದರಿಂದಲೇ ಪಾಪ ಕ್ಷಮಾಪಣೆ ದೊರಕುತ್ತದೆ. ಈ ಪ್ರಾರ್ಥನೆ ದೇವರಲ್ಲಿ ನೀವಿಡುವ ನಂಬಿಕೆಯನ್ನು ವ್ಯಕ್ತಪಡಿಸುವಂತದ್ದು ಹಾಗೂ ನಿಮಗೆ ಕ್ಷಮಾಪಣೆ ಒದಗಿಸಿದ್ದಕ್ಕೆ ಆತನನ್ನು ವಂದಿಸುವಂತದ್ದಾಗಿದೆ. "ದೇವರೇ, ನಿನ್ನ ವಿರುದ್ಧ ಪಾಪ ಮಾಡಿ ನಾನು ಶಿಕ್ಷೆಗೆ ಪಾತ್ರನಾಗಿದ್ದೇನೆಂದು ಒಪ್ಪಿಕೊಳ್ಳುತ್ತೇನೆ. ಆದರೆ ನಾನು ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವದರ ಮೂಲಕ ಕ್ಷಮಿಸಲ್ಪಡುವಂತೆ ಯಾವ ಶಿಕ್ಷೆಗೆ ನಾನು ಪಾತ್ರನಾಗಿದ್ದೆನೋ ಆತನು ಅದನ್ನು ತನ್ನ ಮೇಲೆ ತೆಗೆದುಕೊಂಡನು. ರಕ್ಷಣೆಗಾಗಿ ನನ್ನ ನಂಬಿಕೆ ನಿನ್ನಲ್ಲಿಡುತ್ತೇನೆ. ನಿನ್ನ ಅದ್ಭುತವಾದ ಕೃಪೆ ಮತ್ತು ಕ್ಷಮಾಪಣೆಗಾಗಿ ಸ್ತೋತ್ರ! ಆಮೆನ್!"

ನೀವು ಇಲ್ಲಿ ಓದಿದವುಗಳ ನಿಮಿತ್ತ ಕ್ರಿಸ್ತನಿಗಾಗಿ ತೀರ್ಮಾನ ಮಾಡಿಕೊಂಡಿದ್ದೀರಾ? ಹಾಗಾದರೆ, “ನಾನು ಇಂದು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿರುವ ಬಟ್ಟನ್ ಮೇಲೆ ಕ್ಲಿಕ್ ಮಾಡಿರಿ.

English
ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ
ನಾನು ಸತ್ತರೆ ಪರಲೋಕ್ಕೆ ಹೋಗುತ್ತೇನೆಂದು ತಿಳಿದುಕೊಳ್ಳುವುದು ಹೇಗೆ?