ನಾನು ದೇವರೊಂದಿಗೆ ಸರಿಯಾಗುವುದು ಹೇಗೆ?


ಪ್ರಶ್ನೆ: ನಾನು ದೇವರೊಂದಿಗೆ ಸರಿಯಾಗುವುದು ಹೇಗೆ?

ಉತ್ತರ:
ದೇವರೊಂದಿಗೆ “ಸರಿಯಾಗುವುದಕ್ಕಾಗಿ, ಏನು “ತಪ್ಪಾಗಿದೆ” ಎಂದು ನಾವು ಮೊದಲು ಅರ್ಥಮಾಡಿಕೊಳ್ಳಬೇಕಾಗಿದೆ.” ಇದಕ್ಕೆ ಉತ್ತರವು ಪಾಪವೇ ಆಗಿದೆ. “ಒಳ್ಳೆಯದನ್ನು ಮಾಡುವವನು ಇಲ್ಲ, ಒಬ್ಬನಾದರೂ ಇಲ್ಲ” (ಕೀರ್ತನೆಗಳು 14:3). ನಾವು ದೇವರ ಆಜ್ಞೆಗಳಿಗೆ ವಿರುದ್ಧವಾಗಿ ತಿರುಗಿಬಿದ್ದಿದ್ದೇವೆ; ನಾವು, “ನಾವೆಲ್ಲರೂ ಕುರಿಗಳಂತೆ ದಾರಿತಪ್ಪಿ ತೊಳಲುತ್ತಿದ್ದೆವು” (ಯೆಶಾಯ 53:6).

ಕೆಟ್ಟ ಸುದ್ಧಿ ಎಂದರೆ ಪಾಪಕ್ಕೆ ದಂಡ ಮರಣವೇ ಆಗಿದೆ. “ಪಾಪಮಾಡುವ ಪ್ರಾಣಿಯೇ ಸಾಯುವನು” (ಯೆಹೆಜ್ಕೇಲ 18:4). ಶುಭವಾರ್ತೆ ಯಾವದೆಂದರೆ ನಮಗೆ ರಕ್ಷಣೆಯನ್ನು ತರುವುದಕ್ಕಾಗಿ ಪ್ರೀತಿಸ್ವರೂಪನಾದ ದೇವರು ನಮ್ಮನ್ನು ಹುಡುಕಿಕೊಂಡು ಬಂದನು. ಯೇಸು ಪ್ರಕಟಿಸಿದ ತನ್ನ ಉದ್ದೇಶವು, “ಕೆಟ್ಟುಹೋಗಿರುವದನ್ನು ಹುಡುಕಿ ರಕ್ಷಿಸುವದಕ್ಕೆ ಬಂದನು” (ಲೂಕ 19:10), ಮತ್ತು ಆತನು “ತೀರಿತು!” (ಯೋಹಾನ 19:30) ಎಂಬ ಮಾತುಗಳನ್ನು ಹೇಳಿ ಶಿಲುಬೆಯ ಮೇಲೆ ಸತ್ತಾಗ ಆತನು ತನ್ನ ನೆರವೇರಿದ ಉದ್ದೇಶವನ್ನು ಪ್ರಕಟಿಸಿದನು.

ನೀವು ನಿಮ್ಮ ಪಾಪಗಳನ್ನು ಒಪ್ಪಿಕೊಳ್ಳುವಾಗ ದೇವರೊಂದಿಗೆ ಸರಿಯಾದ ಸಂಬಂಧವು ಆರಂಭವಾಗುತ್ತದೆ. ನಿಮ್ಮ ಪಾಪಗಳನ್ನು ದೇವರಿಗೆ ಧೀನತೆಯಿಂದ ಅರಿಕೆಮಾಡುವುದು ನಂತರ ಬರುತ್ತದೆ (ಯೆಶಾಯ 57:15). “ಹೃದಯದಿಂದ ನಂಬುವದರ ಮೂಲಕ ನೀತಿಯು ದೊರಕುತ್ತದೆ. ಬಾಯಿಂದ ಅರಿಕೆಮಾಡುವದರ ಮೂಲಕ ರಕ್ಷಣೆಯಾಗುತ್ತದೆ” (ರೋಮಾ 10:10).

ಈ ಪಶ್ಚಾತಾಪವು ನಂಬಿಕೆಯಿಂದ ಜೊತೆಗೂಡಿರಬೇಕು - ನಿರ್ಧಿಷ್ಟವಾಗಿ, ಯೇಸುವಿನ ತ್ಯಾಗದ ಮರಣ ಮತ್ತು ಅದ್ಭುತಕರವಾದ ಪುನರುತ್ಥಾನವು ನಿಮ್ಮ ರಕ್ಷಕನಾಗಿರಲು ಆತನನ್ನು ಅರ್ಹಗೊಳಿಸುತ್ತದೆ. “ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆಮಾಡಿದಕೊಂಡು ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಿನಗೆ ರಕ್ಷಣೆಯಾಗುವದು ಎಂಬದೇ” (ರೋಮಾ 10:9). ಇನ್ನು ಅನೇಕ ವಾಕ್ಯಭಾಗಗಳು ನಂಬಿಕೆಯ ಅಗತ್ಯತೆಯನ್ನು ಕುರಿತು ಮಾತನಾಡುತ್ತವೆ, ಅಂದರೆ ಯೋಹಾನ 20:27; ಅಪೊಸ್ತಲರ ಕೃತ್ಯಗಳು 16:31; ಗಲಾತ್ಯ 2:16; 3:11, 26; ಮತ್ತು ಎಫೆಸ 2:8.

ನಿಮ್ಮ ಪರವಾಗಿ ದೇವರು ಮಾಡಿದ ಕಾರ್ಯಕ್ಕೆ ನಿಮ್ಮ ಪ್ರತಿಕ್ರಿಯೆಯು ದೇವರೊಂದಿಗೆ ಸರಿಯಾಗಿರುವುದಕ್ಕೆ ಪ್ರಾಮುಖ್ಯವಾಗಿದೆ. ಆತನು ರಕ್ಷಕನನ್ನು ಕಳುಹಿಸಿಕೊಟ್ಟನು, ನಿಮ್ಮ ಪಾಪಗಳನ್ನು ತೆಗೆದು ಹಾಕುವುದಕ್ಕಾಗಿ ಆತನು ಯಜ್ಞವನ್ನು ಅನುಗ್ರಹಿಸಿದನು (ಯೋಹಾನ 1:29), ಮತ್ತು ಆತನು ನಿಮಗೆ ವಾಗ್ಧಾನವನ್ನು ಮಾಡುತ್ತಿದ್ದಾನೆ: “ಆದರೂ ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದೆಂದು ದೇವರು ಹೇಳುತ್ತಾನೆ ಎಂಬದೇ” (ಅಪೊಸ್ತಲರ ಕೃತ್ಯಗಳು 2:21).

ಪಶ್ಚಾತಾಪ ಮತ್ತು ಕ್ಷಮಾಪಣೆಗೆ ತಪ್ಪಿಹೋದ ಮಗನ ಸಾಮ್ಯವು ಒಂದು ಸುಂದರವಾದ ದೃಷ್ಟಾತವಾಗಿದೆ (ಲೂಕ 15:11-32). ಕಿರಿಯ ಮಗನು ತನ್ನ ತಂದೆಯ ಬಹುಮಾನವನ್ನು ಅಪಮಾನಕರವಾದ ಪಾಪದಲ್ಲಿ ವ್ಯರ್ಥಮಾಡಿದನು (ವಚನ 13). ಅವನು ತನ್ನ ತಪ್ಪುಗಳನ್ನು ಒಪ್ಪಿಕೊಂಡಾಗ, ಅವನು ಮನೆಗೆ ಹಿಂದಿರುಗಲು ತೀರ್ಮಾನಿಸಿದನು (ವಚನ 18). ತನ್ನನ್ನು ಮಗನೆಂದು ಇನ್ನೆಂದಿಗೂ ಪರಿಗಣಿಸುವುದಿಲ್ಲವೆಂದು ಅವನು ಭಾವಿಸಿಕೊಂಡನು (ವಚನ 19), ಆದರೆ ಅವನು ತಪ್ಪಾಗಿ ಆಲೋಚಿಸಿದ್ದನು. ಹಿಂದಿರುಗಿಬಂದ ವಿರೋಧಿಯನ್ನು ತಂದೆಯು ಎಂದಿಗಿಂತ ಹೆಚ್ಚಾಗಿ ಪ್ರೀತಿಸಿದನು (ವಚನ 20). ಎಲ್ಲವೂ ಕ್ಷಮಿಸಲ್ಪಟ್ಟಿತು, ಮತ್ತು ಔತಣವು ನಡೆಯಿತು (ವಚನ 24). ಕ್ಷಮಿಸಲು ಮಾಡಿದ ವಾಗ್ಧಾನವನ್ನು ಒಳಗೊಂಡು, ದೇವರು ತನ್ನ ವಾಗ್ಧಾನಗಳನ್ನು ಕೈಗೊಳ್ಳುವಲ್ಲಿ ಆತನು ಒಳ್ಳೆಯವನಾಗಿದ್ದಾನೆ. “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರ ಮಾಡುತ್ತಾನೆ” (ಕೀರ್ತನೆ 34:18).

ನೀವು ದೇವರೊಂದಿಗೆ ಸರಿಯಾಗಲು ಬಯಸುವುದಾದರೆ, ಇಲ್ಲಿ ಸರಳವಾದ ಪ್ರಾರ್ಥನೆಯು ಕೊಡಲ್ಪಟ್ಟಿದೆ. ನೆನಪಿಡಿ, ಈ ಪ್ರಾರ್ಥನೆಯನ್ನು ಅಥವಾ ಬೇರೆ ಪ್ರಾರ್ಥನೆಯನ್ನು ಹೇಳುವುದರಿಂದ ನಿಮ್ಮನ್ನು ರಕ್ಷಿಸುವದಿಲ್ಲ. ಇದು ಕೇವಲ ಕ್ರಿಸ್ತನಲ್ಲಿ ನಂಬಿಕೆಯಿಡುವುದರಿಂದ ಮಾತ್ರ ನಿಮ್ಮನ್ನು ಪಾಪದಿಂದ ರಕ್ಞಿಸುತ್ತದೆ. ಆತನಲ್ಲಿಟ್ಟಿರುವ ನಿಮ್ಮ ನಂಬಿಕೆಯನ್ನು ವ್ಯಕ್ತಪಡಿಸಲು ಮತ್ತು ನಿಮಗೆ ರಕ್ಷಣೆಯನ್ನು ಒದಗಿಸಿದಕ್ಕಾಗಿ ಆತನಿಗೆ ಕೃತಜ್ಞತೆ ಸಲ್ಲಿಸಲು ಈ ಪ್ರಾರ್ಥನೆಯು ಸರಳವಾದ ರೀತಿಯಾಗಿದೆ. “ದೇವರೇ, ನಾನು ನಿನಗೆ ವಿರುದ್ಧವಾಗಿ ಪಾಪಮಾಡಿದ್ದೇನೆ ಮತ್ತು ನಾನು ಶಿಕ್ಷೆಗೆ ಅರ್ಹನಾಗಿದ್ದೇನೆಂದು ತಿಳಿದಿದ್ದೇನೆ. ಆದರೆ ನನಗೆ ಆಗಬೇಕಾದ ಶಿಕ್ಷೆಯನ್ನು ಯೇಸು ಕ್ರಿಸ್ತನು ತೆಗೆದುಕೊಂಡನು, ಇದರಿಂದ ಆತನಲ್ಲಿಟ್ಟಿರುವ ನಂಬಿಕೆಯ ಮೂಲಕ ನನಗೆ ಕ್ಷಮಾಪಣೆ ಉಂಟಾಗಬಹುದು. ರಕ್ಷಣೆಗಾಗಿ ನಿನ್ನಲ್ಲಿ ನನ್ನ ಭರವಸೆಯಿಡುತ್ತೇನೆ. ನಿನ್ನ ಅದ್ಬುತವಾದ ಕೃಪೆ ಮತ್ತು ಕ್ಷಮಾಪಣೆಗಾಗಿ – ನಿತ್ಯಜೀವದ ವರಕ್ಕಾಗಿ ನಿನಗೆ ವಂದನೆಗಳು! ಆಮೆನ್!”

ನೀವು ಇಲ್ಲಿ ಓದಿದವುಗಳ ನಿಮಿತ್ತ ಕ್ರಿಸ್ತನಿಗಾಗಿ ತೀರ್ಮಾನ ಮಾಡಿಕೊಂಡಿದ್ದೀರಾ? ಹಾಗಾದರೆ, “ನಾನು ಇಂದು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿರುವ ಬಟ್ಟನ್ ಮೇಲೆ ಕ್ಲಿಕ್ ಮಾಡಿರಿ.

English
ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ
ನಾನು ದೇವರೊಂದಿಗೆ ಸರಿಯಾಗುವುದು ಹೇಗೆ?