ಕ್ರಿಸ್ತನ ದೇವತ್ವವು ಸತ್ಯವೇದಾನುಸಾರವೋ?


ಪ್ರಶ್ನೆ: ಕ್ರಿಸ್ತನ ದೇವತ್ವವು ಸತ್ಯವೇದಾನುಸಾರವೋ?

ಉತ್ತರ:
ತನ್ನನ್ನೇ ಕುರಿತು ಕ್ರಿಸ್ತನ ನಿರ್ಧಿಷ್ಟವಾದ ಹೇಳಿಕೆಗಳಿಗಿಂತ ಹೆಚ್ಚಾಗಿ, ಆತನ ಶಿಷ್ಯರು ಸಹ ಕ್ರಿಸ್ತನ ದೇವತ್ವವನ್ನು ಒಪ್ಪಿಕೊಂಡರು. ಯೇಸು ಕ್ರಿಸ್ತನು - ದೇವರು ಮಾತ್ರ ಮಾಡಬಹುದಾದ – ಅಂದರೆ ಪಾಪಗಳನ್ನು ಕ್ಷಮಿಸುವ ಅಧಿಕಾರವನ್ನು ಹೊಂದಿದ್ದನು ಎಂದು ಅವರು ಹೇಳಿಕೆ ಕೊಟ್ಟರು – ಯಾಕಂದರೆ ಪಾಪಗಳ ನಿಮಿತ್ತ ನೊಂದಿರುವವನು ದೇವರೇ ಆಗಿದ್ದಾನೆ (ಅಪೊಸ್ತಲರ ಕೃತ್ಯಗಳು 5:31; ಕೊಲೊಸ್ಸೆ 3:13; ಕೀರ್ತನೆಗಳು 130:4; ಯೆರೆಮೀಯ 31:34). ಈ ಕೊನೆಯ ಹೇಳಿಕೆಯ ಹತ್ತಿರದ ಸಂಬಂಧದಲ್ಲಿ, ಯೇಸು ಸಹ “ಜೀವಿಸುವವರಿಗೂ ಸತ್ತವರಿಗೂ ನ್ಯಾಯತೀರಿಸುವದಕ್ಕೆ ಬರುವನು” ಎಂದು ಹೇಳಲ್ಪಟ್ಟಿದೆ (2 ತಿಮೋಥೆ 4:1). ತೋಮನು ಯೇಸುವಿಗೆ, “ನನ್ನ ಸ್ವಾಮಿ, ನನ್ನ ದೇವರು!” ಎಂದು ಹೇಳಿ ಅತ್ತನು (ಯೋಹಾನ 20:28). ಪೌಲನು ಯೇಸುವನ್ನು “ದೊಡ್ಡ ದೇವರು ಮತ್ತು ರಕ್ಷಕನು” ಎಂದು ಕರೆದನು (ತೀತ 2:13) ಮತ್ತು ಆತನು ನರಾವತಾರಕ್ಕೆ ಮುಂಚೆ ಯೇಸುವು “ದೇವರ ರೂಪ”ದಲ್ಲಿ ಇದ್ದನು ಎಂದು ಸೂಚಿಸುತ್ತಾನೆ (ಫಿಲಿಪ್ಪಿ 2:5-8). ತಂದೆಯಾದ ದೇವರು ಯೇಸುವನ್ನು ಕುರಿತು ಹೀಗೆ ಹೇಳಿದನು: “ದೇವರೇ, ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವದು” (ಇಬ್ರಿಯ 1:8). ಯೋಹಾನನು ಹೇಳುವದೇನಂದರೆ, “ಆದಿಯಲ್ಲಿ ವಾಕ್ಯವಿತ್ತು; ಆ ವಾಕ್ಯವು ದೇವರ ಬಳಿಯಲ್ಲಿತ್ತು. ಆ ವಾಕ್ಯವು [ಯೇಸು] ದೇವರಾಗಿತ್ತು” (ಯೋಹಾನ 1:1). ಕ್ರಿಸ್ತನ ದೇವತ್ವವನ್ನು ಬೋಧಿಸುವ ವಾಕ್ಯಗಳ ಉದಾಹರಣೆಗಳು ಅನೇಕವುಂಟು (ಪ್ರಕಟನೆ 1:17, 2:8, 22:13; 1 ಕೊರಿಂಥ 10:4; 1 ಪೇತ್ರ 2:6-8; ಕೀರ್ತನೆಗಳು 18:2, 95:1; 1 ಪೇತ್ರ 5:4; ಇಬ್ರಿಯ 13:20), ಆದರೂ ಸಹ ಆತನ ಹಿಂಬಾಲಕರು ಕ್ರಿಸ್ತನನ್ನು ದೇವರೆಂದು ಪರಿಗಣಿಸಿದರು ಎಂಬುದಕ್ಕೆ ಇವುಗಳಲ್ಲಿ ಒಂದು ಸಾಕಾಗುತ್ತದೆ.

ಹಳೆಯ ಒಡಂಬಡಿಕೆಯಲ್ಲಿ ಯಾಹುವೇ ಎಂಬ ಅದ್ವಿತಿಯ ಹೆಸರುಗಳು ಸಹ ಯೇಸುವಿಗೆ ಕೊಡಲ್ಪಟ್ಟಿದ್ದವು (ದೇವರ ಔಪಚರಿಕ ಹೆಸರು). ಹಳೆಯ ಒಡಂಬಡಿಕೆಯ ಹೆಸರು “ವಿಮೋಚಕನು” (ಕೀರ್ತನಗಳು 130:7; ಹೊಶೆಯ 13:14) ಎಂಬುದು ಹೊಸ ಒಡಂಬಡಿಕೆಯಲ್ಲಿ ಯೇಸುವಿಗೆ ಉಪಯೋಗಿಸಲಾಗಿದೆ (ತೀತ 2:13; ಪ್ರಕಟನೆ 5:9). ಮತ್ತಾಯ 1 ರಲ್ಲಿ, ಯೇಸುವನ್ನು ಇಮ್ಮಾನುವೇಲನು – “ದೇವರು ನಮ್ಮೊಂದಿಗೆ ಇದ್ದಾನೆ” ಎಂದು ಕರೆಯಲ್ಪಟ್ಟಿದೆ. ಜೆಕರ್ಯ 12:10ರಲ್ಲಿ, ಅದು ಯಾಹುವೇ, “ತಾವು ಇರಿದವನನ್ನು ದಿಟ್ಟಿಸಿ ನೋಡುವರು.” ಆದರೆ ಹೊಸ ಒಡಂಬಡಿಕೆಯು ಇದನ್ನು ಯೇಸುವಿನ ಕ್ರೂಜೆಗೆ ಅನ್ವಯಿಸುತ್ತದೆ (ಯೋಹಾನ 19:37; ಪ್ರಕಟನೆ 1:7). ಆತನು ಇರಿಯಲ್ಪಟ್ಟ ಯಾಹ್ವೇ ಆಗಿದ್ದರೆ, ಮತ್ತು ಇರಿವಿಯಲ್ಪಟ್ಟವನು ಯೇಸುವೇ ಆಗಿದ್ದನು, ಹಾಗಾದರೆ ಯೇಸುವು ಯಾಹ್ವೇ ಆಗಿದ್ದಾನೆ. ಯೆಶಾಯ 45:22-23ರನ್ನು ಪೌಲನು ಅರ್ಥಹೇಳಿ ಫಿಲಿಪ್ಪಿ 2:10-11ರಲ್ಲಿ ಯೇಸುವಿಗೆ ಅನ್ವಯಿಸುತ್ತಿದ್ದಾನೆ. ಪ್ರಾರ್ಥನೆಯಲ್ಲಿ ದೇವರ ಜೊತೆಗೆ ಯೇಸುವಿನ ಹೆಸರನ್ನು ಉಪಯೋಗಿಸಲಾಗಿದೆ “ತಂದೆಯಾದ ದೇವರು ಮತ್ತು ಕರ್ತನಾದ ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ” (ಗಲಾತ್ಯ 1:3; ಎಫೆಸ 1:2). ಕ್ರಿಸ್ತನು ದೇವತ್ವವಾಗಿರದೆ ಇದಿದ್ದರೆ ಇದು ದೇವ ದೂಷಣೆ ಆಗಿರುತ್ತಿತ್ತು. ಯೇಸು ದೀಕ್ಷಾಸ್ನಾನ ತೆಗೆದುಕೊಳ್ಳಲು ಆಜ್ಞಾಪಿಸಿದಾಗ ದೇವರೊಂದಿಗೆ ಯೇಸುವಿನ ಹೆಸರು ಕಂಡುಬರುತ್ತದೆ, “ತಂದೆಯ, ಮಗ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ [ಏಕವಚನ]” (ಮತ್ತಾಯ 28:19; 2 ಕೊರಿಂಥ 13:14ನ್ನು ಸಹ ನೋಡಿರಿ). ದೇವರಿಂದ ಮಾತ್ರ ಪೂರ್ತಿಗೊಳಿಸಬಹುದಾದ ಕ್ರಿಯೆಗಳಿಗೆ ಯೇಸುವಿಗೆ ಮನ್ನಣೆ ಕೊಡಲಾಯಿತು. ಯೇಸು ಸತ್ತವರನ್ನು ಬದುಕಿಸಿದನು (ಯೋಹಾನ 5:21, 11:38-44) ಮತ್ತು ಪಾಪಗಳನ್ನು ಕ್ಷಮಿಸಿದ್ದು ಮಾತ್ರವಲ್ಲದೆ ( ಅಪೊಸ್ತಲರ ಕೃತ್ಯಗಳು 5:31, 13:38), ಆತನು ಜಗತ್ತನ್ನು ಸೃಷ್ಟಿಮಾಡಿ ಕಾಪಾಡುತ್ತಿದ್ದಾನೆ (ಯೋಹಾನ 1:2; ಕೊಲೊಸ್ಸೆ 1:16-17). ಯೆಹೋವನು ಹೇಳಿದಂತೆ ಆತನು ಸೃಷ್ಟಿಯ ಸಮಯದಲ್ಲಿ ಒಬ್ಬನೇ ಇದ್ದನು ಎಂಬುದನ್ನು ಪರಿಗಣಿಸಿದಾಗ ಇದು ಇನ್ನೂ ಸ್ಪಷ್ಟವಾಗುತ್ತದೆ (ಯೆಶಾಯ 44:24). ಮತ್ತಷ್ಟು, ದೇವತ್ವ ಮಾತ್ರ ಹೊಂದಿರಬಹುದಾದ ಕ್ರಿಸ್ತನು ಗುಣಲಕ್ಷಣಗಳನ್ನು ಕ್ರಿಸ್ತನು ಹೊಂದಿದ್ದನು: ನಿತ್ಯತ್ವ (ಯೋಹಾನ 8:58), ಸರ್ವವ್ಯಾಪಿ (ಮತ್ತಾಯ 18:20, 28:20), ಸರ್ವಜ್ಞತೆ (ಮತ್ತಾಯ 16:21), ಮತ್ತು ಸರ್ವಶಕ್ತನು (ಯೋಹಾನ 11:38-44).

ಈಗ, ದೇವರೆಂದು ಹೇಳಿಕೊಳ್ಳುವುದಕ್ಕಾಗಲಿ ಅಥವಾ ಇದು ಸತ್ಯವೆಂದು ನಂಬಲು ಒಬ್ಬರನ್ನು ಮರುಳುಗೊಳಿಸುದಾಗಲಿ, ಮತ್ತು ಬೇರೆ ಯಾವುದನ್ನೋ ಇದು ಹೀಗಿದೆ ಎಂದು ಸಂಪೂರ್ತಿಯಾಗಿ ರುಜುವಾತುಪಡಿಸಲು ಒಂದು ಸಂಗತಿ ಇದೆ. ಕ್ರಿಸ್ತನು ತನ್ನ ಹೇಳಿಕೆಗೆ ಆಧಾರವಾಗಿ ಅನೇಕ ಅದ್ಭುತ ಕಾರ್ಯಗಳನ್ನು ಮಾಡಿದನು. ಯೇಸುವಿನ ಕೆಲವು ಅದ್ಭುತ ಕಾರ್ಯಗಳು – ನೀರನ್ನು ದ್ರಾಕ್ಷಾರಸವಾಗಿ ಮಾರ್ಪಡಿಸಿದನು (ಯೋಹಾನ 2:7), ನೀರಿನ ಮೇಲೆ ನಡೆದನು (ಮತ್ತಾಯ 14:25), ಭೌತಿಕ ವಸ್ತುಗಳನ್ನು ಹೆಚ್ಚಿಸಿದನು (ಯೋಹಾನ 6:11), ಕುರುಡರನ್ನು (ಯೋಹಾನ 9:7), ಕುಂಟರನ್ನು (ಮಾರ್ಕ 2:3), ಮತ್ತು ರೋಗಿಗಳನ್ನು ಗುಣಪಡಿಸಿದನು (ಮತ್ತಾಯ 9:35; ಮಾರ್ಕ 1:40-42), ಮತ್ತು ಸತ್ತವರೊಳಗಿಂದ ಜನರನ್ನು ಎಬ್ಬಿಸಿದನು (ಯೋಹಾನ 11:43-44; ಲೂಕ 7:11-15; ಮಾರ್ಕ 5:35). ಇದಲ್ಲದೆ, ಕ್ರಿಸ್ತನು ತಾನೇ ಮರಣದಿಂದ ಎದ್ದು ಬಂದನು. ಅನ್ಯರ ಪುರಾಣದ ಸಾಯುವ ಮತ್ತು ಎದ್ದೇಳುವ ದೇವರುಗಳು ಎಂದು ಕರೆಯಲ್ಪಡುವದಕ್ಕಿಂತ ಹೆಚ್ಚಾಗಿ, ಬೇರೆ ಧರ್ಮಗಳಿಂದ ಗಂಭೀರವಾಗಿ ಹಕ್ಕುಸಾಧಿಸುವ ಪುನರುತ್ಥಾನದಂತೆ ಅಲ್ಲದೆ, ಮತ್ತು ಬೇರೆ ಯಾವುದೇ ಹಕ್ಕುಸಾಧಿಸುವ ಹೇಳಿಕೆಗಳು ಹೆಚ್ಚು-ವಾಕ್ಯಗಳ ಖಚಿತತೆಯನ್ನು ಹೊಂದಿಲ್ಲ.

ಯೇಸುವನ್ನು ಕುರಿತು ಕನಿಷ್ಟ ಹನ್ನೆರಡು ಚಾರಿತ್ರಿಕ ಸತ್ಯಾಂಶಗಳಿವೆ ಅವುಗಳನ್ನು ಅಕ್ರೈಸ್ತ ನಿರ್ಣಾಯಕ ವಿದ್ವಾಂಸರು ಸಹ ಒಪ್ಪಿಕೊಳ್ಳುತ್ತಾರೆ:

1. ಕ್ರೂಜೆಯ ಮೂಲಕ ಯೇಸು ಸತ್ತನು.
2. ಆತನನ್ನು ಹೂಣಿಡಲಾಯಿತು.
3. ಆತನ ಮರಣವು ಶಿಷ್ಯರಿಗೆ ಹತಾಶೆ ಉಂಟಾಗಿ ಮತ್ತು ನಿರೀಕ್ಷೆ ಕಳೆದುಕೊಳ್ಳುವಂತೆ ಮಾಡಿತು.
4. ಯೇಸುವಿನ ಸಮಾಧಿಯನ್ನು ಕೆಲವು ದಿವಸಗಳ ನಂತರ ಬರಿದಾಗಿತ್ತೆಂದು ಕಂಡುಹಿಡಿಯಲಾಯಿತು (ಅಥವಾ ಕಂಡುಹಿಡಿಯಲಾಯಿತೆಂದು ಹೇಳಿದರು).
5. ಎದ್ದುಬಂದ ಯೇಸುವಿನ ಪ್ರತ್ಯಕ್ಷತೆಯನ್ನು ಅನುಭವಿಸಿದರೆಂದು ಶಿಷ್ಯರು ನಂಬಿದರು.
6. ಇದಾದ ನಂತರ, ಶಿಷ್ಯರು ಸಂದೇಹವನ್ನು ಬಿಟ್ಟು ಧೈರ್ಯದ ವಿಶ್ವಾಸಿಗಳಾಗಿ ಮಾರ್ಪಟ್ಟರು.
7. ಆದಿ ಸಭೆಯಲ್ಲಿ ಈ ಸಂದೇಶವು ಪ್ರಸಂಗಿಸಲು ಕೇಂದ್ರವಾಗಿತ್ತು.
8. ಈ ಸಂದೇಶವನ್ನು ಯೆರೂಸಲೇಮಿನಲ್ಲಿ ಬೋಧಿಸಲಾಯಿತು.
10. ಪುನರುತ್ಥಾನದ ದಿನವಾದ ಭಾನುವಾರವು ಸಬ್ಬತ್ ದಿನವನ್ನು (ಶನಿವಾರ) ಆರಾಧಿಸಲು ಮುಖ್ಯ ದಿನವಾಗಿ ಸ್ಥಳಾಂತರಿಸಿತು.
11. ಸಂದೇಹಿಯಾಗಿದ್ದ ಯಾಕೋಬನು, ಪುನರುತ್ಥಾನಗೊಂಡ ಯೇಸುವನ್ನು ನೋಡಿದೆನೆಂದು ನಂಬಿದಾಗ ಬದಲಾದನು.
12. ಕ್ರೈಸ್ತತ್ವಕ್ಕೆ ವಿರೋಧಿಯಾಗಿದ್ದ ಪೌಲನು ಸಹ ಪುನರುತ್ಥಾನಗೊಂಡ ಯೇಸುವಿನ ಪ್ರತ್ಯಕ್ಷತೆಯನ್ನು ನೋಡಿದೆನೆಂದು ನಂಬಿದ ಅನುಭವದಿಂದ ಮಾರ್ಪಟ್ಟನು.

ಯಾರಾದರು ಈ ನಿರ್ಧಿಷ್ಟ ಪಟ್ಟಿಯನ್ನು ವಿರೋಧಿಸಿದರೂ ಸಹ, ಪುನರುತ್ಥಾನವನ್ನು ರುಜುಪಡಿಸಲು ಮತ್ತು ಸುವಾರ್ತೆಯನ್ನು ಸ್ಥಾಪಿಸಲು ಕೆಲವು ಮಾತ್ರ ಅಗತ್ಯವಾಗಿವೆ: ಯೇಸುವಿನ ಮರಣ, ಸಮಾಧಿ, ಪುನರುತ್ಥಾನ, ಮತ್ತು ಪ್ರತ್ಯಕ್ಷತೆಗಳು (1 ಕೊರಿಂಥ 15:1-5). ಆದರೆ ಈ ಮೇಲಿನ ಒಂದು ಅಥವಾ ಎರಡು ಸಂಗತಿಗಳನ್ನು ವಿವರಿಸಲು ಕೆಲವು ತತ್ವಗಳು ಇರಬಹುದು, ಕೇವಲ ಪುನರುತ್ಥಾನವು ಮಾತ್ರವೇ ಈ ಎಲ್ಲವುಗಳಿಗೆ ವಿವರಣೆ ಮತ್ತು ಲೆಕ್ಕಕೊಡುತ್ತದೆ. ತಾವು ಎದ್ದು ಬಂದ ಯೇಸುವನ್ನು ನೋಡಿದರೆಂದು ಶಿಷ್ಯರು ಹಕ್ಕುಸಾಧಿಸಿದರೆಂದು ವಿಚಾರಕರು ಒಪ್ಪಿಕೊಳ್ಳುತ್ತಾರೆ. ಪುನರುತ್ಥಾನವು ಮಾಡಿದ ರೀತಿಯಲ್ಲಿ, ಸುಳ್ಳು ಅಥವಾ ಊಹೆಗಳು ಜನರನ್ನು ಮಾರ್ಪಡಿಸಲು ಸಾಧ್ಯವಿಲ್ಲ. ಮೊದಲನೆಯದಾಗಿ, ಅವರು ಸಂಪಾದಿಸಿಕೊಳ್ಳಲು ಅವರಲ್ಲಿ ಏನಿತ್ತು? ಕ್ರೈಸ್ತತ್ವವು ಪ್ರಸಿದ್ಧವಾಗಿರಲಿಲ್ಲ ಮತ್ತು ಅವು ಖಚಿತವಾಗಿ ಅವರಿಗೆ ಯಾವುದೇ ಹಣವನ್ನು ಮಾಡಿಕೊಡಲಿಲ್ಲ. ಎರಡನೆಯದಾಗಿ, ಸುಳ್ಳುಗಾರರು ಒಳ್ಳೆಯ ಹತಸಾಕ್ಷಿಗಳನ್ನು ಉಂಟುಮಾಡುವುದಿಲ್ಲ. ತಮ್ಮ ನಂಬಿಕೆಗಾಗಿ ಘೋರವಾದ ಮರಣದಿಂದ ಸಾಯಲು ಶಿಷ್ಯರು ಸಿದ್ಧರಾಗಿರುವುದಕ್ಕೆ ಪುನರುತ್ಥಾನಕ್ಕಿಂತ ಬೇರೆ ಉತ್ತಮವಾದ ವಿವರಣೆಯಿಲ್ಲ. ಹೌದು, ಅನೇಕ ಜನರು ಅವು ಸತ್ಯವೆಂದು ಆಲೋಚಿಸಿ ಸುಳ್ಳಿಗಾಗಿ ಸಾಯುತ್ತಾರೆ, ಆದರೆ ಜನರು ಅಸತ್ಯವೆಂದು ತಿಳಿದಾಗ ಅದಕ್ಕಾಗಿ ಸಾಯುವುದಿಲ್ಲ.

ಮುಕ್ತಾಯವಾಗಿ, ತಾನು ಯಾಹ್ವೇ ಎಂದು ಕ್ರಿಸ್ತನು ಹಕ್ಕುಸಾಧಿಸಿದನು, ಅಂದರೆ ಆತನು ದೇವತ್ವನು (ಕೇವಲ “ಒಬ್ಬ ದೇವರು” ಅಲ್ಲ ಆದರೆ ಒಬ್ಬ ನಿಜವಾದ ದೇವರು); ಆತನ ಹಿಂಬಾಲಕರು (ಯೆಹೂದ್ಯರು ವಿಗ್ರಹಾರಾಧನೆಯನ್ನು ಕುರಿತು ಭಯಭೀತರಾಗಿರಬಹುದಾಗಿತ್ತು) ಆತನನ್ನು ನಂಬಿದರು ಮತ್ತು ಆತನನ್ನು ದೇವರು ಎಂದು ಉಲ್ಲೇಖಿಸಿದರು. ಲೋಕವನ್ನೇ ಬದಲಾಯಿಸುವ ಪುನರುತ್ಥಾನವನ್ನು ಒಳಗೊಂಡು, ಕ್ರಿಸ್ತನು ತಾನು ದೇವರೆಂದು ಹಕ್ಕುಸಾಧಿಸಿದಕ್ಕೆ ಅದ್ಭುತಕಾರ್ಯಗಳ ಮೂಲಕ ರುಜುವಾತುಪಡಿಸಿದನು. ಬೇರೆ ಯಾವುದೇ ನಿರಾಧಾರ ಕಲ್ಪನೆಗಳು ಈ ಸತ್ಯಾಂಶಗಳನ್ನು ವಿವರಿಸುವದಿಲ್ಲ. ಹೌದು, ಕ್ರಿಸ್ತನ ದೈವಿಕತೆಯು ಸತ್ಯವೇದಾನುಸಾರವಾಗಿದೆ.

English
ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ
ಕ್ರಿಸ್ತನ ದೇವತ್ವವು ಸತ್ಯವೇದಾನುಸಾರವೋ?