ಒಮ್ಮೆ ರಕ್ಷಿಸಲ್ಪಟ್ಟವರು ಯಾವಾಗಲೂ ರಕ್ಷಿಸಲ್ಪಡುವರೋ?


ಪ್ರಶ್ನೆ: ಒಮ್ಮೆ ರಕ್ಷಿಸಲ್ಪಟ್ಟವರು ಯಾವಾಗಲೂ ರಕ್ಷಿಸಲ್ಪಡುವರೋ?

ಉತ್ತರ:
ಒಬ್ಬ ವ್ಯಕ್ತಿಯು ಒಮ್ಮೆ ರಕ್ಷಿಸಲ್ಪಟ್ಟರೆ ಅವರು ನಿತ್ಯಕ್ಕೂ ರಕ್ಷಿಸಲ್ಪಟ್ಟಿದ್ದಾರೋ? ಜನರು ಯೇಸು ಕ್ರಿಸ್ತನನ್ನು ತಮ್ಮ ರಕ್ಷಕನೆಂದು ತಿಳಿದುಕೊಳ್ಳುವಾಗ, ಅವರು ದೇವರೊಂದಿಗೆ ಒಂದು ಸಂಬಂಧಕ್ಕಾಗಿ ಕರೆತರಲ್ಪಡುತ್ತಾರೆ ಇದು ಅವರ ರಕ್ಷಣೆಯನ್ನು ನಿತ್ಯಕ್ಕೂ ಭದ್ರವಾಗಿರುವಂತೆ ಖಾತರಿಪಡಿಸುತ್ತದೆ. ಈ ಸತ್ಯಾಂಶವನ್ನು ಸತ್ಯವೇದದ ಅನೇಕ ವಾಕ್ಯ ಭಾಗಗಳಲ್ಲಿ ತಿಳಿಸಲಾಗಿದೆ.

(ಎ) ರೋಮಾ 8:30 ಹೀಗೆ ಹೇಳುತ್ತದೆ, “ಮತ್ತು ಯಾರನ್ನು ಮೊದಲು ನೇಮಿಸಿದನೋ ಅವರನ್ನು ಕರೆದನು; ಯಾರನ್ನು ಕರೆದನೋ ಅವರನ್ನು ನೀತಿವಂತರೆಂದು ನಿರ್ಣಯಿಸಿದನು; ಯಾರನ್ನು ನೀತಿವಂತರೆಂದು ನಿರ್ಣಯಿಸಿದನೋ ಅವರನ್ನು ಮಹಿಮೆಪದವಿಗೆ ಸೇರಿಸಿದನು.” ದೇವರು ನಮ್ಮನ್ನು ಆರಿಸಿಕೊಂಡ ಕ್ಷಣದಿಂದ ನಾವು ಪರಲೋಕದಲ್ಲಿ ಆತನ ಮಹಿಮೆಯಲ್ಲಿ ಮಹಿಮೆಹೊಂದಲ್ಪಟ್ಟಂತೆ ಇರುವಂತದ್ದಾಗಿದೆ. ದೇವರು ಈಗಾಗಲೇ ಪರಲೋಕದಲ್ಲಿ ಮಹಿಮೆಹೊಂದುವದನ್ನು ಸಂಕಲ್ಪ ಮಾಡಿರುವ ಕಾರಣದಿಂದ ಒಬ್ಬ ವಿಶ್ವಾಸಿಯು ಒಂದು ದಿನ ಮಹಿಮೆಹೊಂದುವದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಒಮ್ಮೆ ಒಬ್ಬ ವ್ಯಕ್ತಿಯು ನೀತಿವಂತನೆಂದು ನಿರ್ಣಯಿಸಲ್ಪಟ್ಟರೆ, ಅವನ ರಕ್ಷಣೆಯು ಖಾತರಿಯಾಗಿರುತ್ತದೆ - ಅವನು ಈಗಾಗಲೇ ಪರಲೋಕದಲ್ಲಿ ಮಹಿಮೆಹೊಂದಿದ ಹಾಗೆ ಸುರಕ್ಷಿತವಾಗಿರುತ್ತಾನೆ.

(ಬಿ) ರೋಮಾ 8:33-34 ರಲ್ಲಿ ಪೌಲನು ಎರಡು ಬಹುಪ್ರಾಮುಖ್ಯವಾದ ಪ್ರಶ್ನೆಗಳನ್ನು ಕೇಳುತ್ತಾನೆ, “ದೇವರು ಆದುಕೊಂಡವರ ಮೇಲೆ ಯಾರು ತಪ್ಪು ಹೊರಿಸಾರು? ದೇವರೇ ನಮ್ಮನ್ನು ನೀತಿವಂತರೆಂದು ನಿರ್ಣಯಿಸುವವನಾಗಿದ್ದಾನೆ. ಅಪರಾಧಿಗಳೆಂದು ನಿರ್ಣಯಿಸುವವರು ಯಾರು? ಕ್ರಿಸ್ತ ಯೇಸು ಮರಣವನ್ನು ಹೊಂದಿದ್ದಲ್ಲದೆ ಜೀವಿತನಾಗಿ ಎದ್ದು ದೇವರ ಬಲಗಡೆಯಲ್ಲಿದ್ದು ನಮಗೋಸ್ಕರ ವಿಜ್ಞಾಪಿಸುತ್ತಿದ್ದಾನೆ.” ದೇವರು ಆರಿಸಿಕೊಂಡವರ ವಿರುದ್ಧ ಯಾರು ತಪ್ಪನ್ನು ಹೊರಿಸುತ್ತಾರೆ? ಯಾರೂ ಇಲ್ಲ, ಯಾಕೆಂದರೆ ಯೇಸು ನಮ್ಮ ಪ್ರತಿಪಾದಿಯಾಗಿದ್ದಾನೆ. ನಮ್ಮನ್ನು ಖಂಡಿಸುವವರು ಯಾರು? ಯಾರೂ ಇಲ್ಲ, ಯಾಕೆಂದರೆ ನಮಗೋಸ್ಕರ ಮರಣಹೊಂದಿದ ಕ್ರಿಸ್ತನೇ ನಮ್ಮ ರಕ್ಷಕನಾಗಿ ನಮ್ಮ ಪ್ರತಿಪಾದಕನೂ ಮತ್ತು ನ್ಯಾಯಾಧಿಪತಿಯೂ ಆಗಿದ್ದಾನೆ.

(ಸಿ) ವಿಶ್ವಾಸಿಗಳು ನಂಬಿಕೊಂಡಾಗ ಅವರು ತಿರಿಗಿ ಹುಟ್ಟಿದ್ದಾರೆ (ಪುನರ್ಜನ್ಮ ಪಡೆದುಕೊಂಡವರು) (ಯೋಹಾನ 3:3; ತೀತ 3:5). ಒಬ್ಬ ಕ್ರೈಸ್ತನು ತನ್ನ ರಕ್ಷಣೆಯನ್ನು ಕಳೆದುಕೊಳ್ಳಲು, ಅವನು ಪುನರ್ಜನ್ಮ ಪಡೆದುಕೊಂಡವನಾಗಿರಬಾರದು. ಹೊಸದಾಗಿ ಹುಟ್ಟಿದ್ದನ್ನು ಹಿಂದಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಸತ್ಯವೇದವು ಯಾವುದೇ ಸಾಕ್ಷ್ಯಾಧಾರವನ್ನು ಕೊಡುವದಿಲ್ಲ. (ಡಿ) ಪವಿತ್ರಾತ್ಮನು ಎಲ್ಲಾ ವಿಶ್ವಾಸಿಗಳಲ್ಲಿ ವಾಸಿಸುತ್ತಾನೆ (ಯೋಹಾನ 14:17; ರೋಮಾ 8:9) ಮತ್ತು ಎಲ್ಲಾ ವಿಶ್ವಾಸಿಗಳನ್ನು ಕ್ರಿಸ್ತನ ದೇಹದೊಳಗೆ ದೀಕ್ಷಾಸ್ನಾನ ಮಾಡಿಸುತ್ತಾನೆ (1 ಕೊರಿಂಥ 12:13). ಒಬ್ಬ ವಿಶ್ವಾಸಿಯು ರಕ್ಷಿಸಲ್ಪಡದೆ ಇರುವದದಕ್ಕಾಗಿ ಅವನು “ಆತನಲ್ಲಿ ವಾಸಿಸದವನಾಗಿರಬೇಕು” ಮತ್ತು ಕ್ರಿಸ್ತನ ದೇಹದಿಂದ ಬೇರ್ಪಡಬೇಕು.

(ಇ) ಕ್ರಿಸ್ತನಲ್ಲಿ ನಂಬಿಕೆಯಿಡುವವರೆಲ್ಲರು “ನಿತ್ಯ ಜೀವವನ್ನು” ಹೊಂದಿಕೊಳ್ಳುತ್ತಾರೆಂದು ಯೋಹಾನ 3:15 ಹೇಳುತ್ತದೆ. ನೀವು ಇಂದು ಕ್ರಿಸ್ತನಲ್ಲಿ ನಂಬಿಕೆಯಿಟ್ಟರೆ ನಿತ್ಯಜೀವವನ್ನು ಹೊಂದಿಕೊಳ್ಳುತ್ತೀರಿ, ಆದರೆ ನಾಳೆ ಅದನ್ನು ಕಳೆದುಕೊಳ್ಳುತ್ತೀರಿ, ಆಗ ಅದು ಎಂದಿಗೂ “ನಿತ್ಯ”ವಾದದ್ದಲ್ಲ. ಆದುದರಿಂದ ನೀವು ನಿಮ್ಮ ರಕ್ಷಣೆಯನ್ನು ಕಳೆದುಕೊಂಡರೆ, ಸತ್ಯವೇದದಲ್ಲಿರುವ ನಿತ್ಯಜೀವದ ವಾಗ್ದನಗಳು ತಪ್ಪಾಗಿರುತ್ತವೆ. (ಎಫ್) ಅತ್ಯಂತ ಮುಕ್ತಾಯದ ವಾದಕ್ಕೆ, “ಹೇಗಂದರೆ ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ದುರಾತ್ಮಗಳಾಗಲಿ ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಮಹತ್ವಗಳಾಗಲಿ ಮೇಲಣ ಲೋಕವಾಗಲಿ ಕೆಳಗಣ ಲೋಕವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯವುಂಟು” (ರೋಮಾ 8:38-39) ಎಂದು ಸತ್ಯವೇದವು ತಾನೇ ಉತ್ತಮವಾಗಿ ಹೇಳುತ್ತದೆಂದು ನಾನು ಯೋಚಿಸುತ್ತೇನೆ. ನಿಮ್ಮನ್ನು ರಕ್ಷಿಸಿದ ದೇವರೇ ನಿಮ್ಮನ್ನು ಕಾಪಾಡುವ ದೇವರಾಗಿದ್ದಾನೆಂದು ನೆನಪು ಮಾಡಿಕೊಳ್ಳಿರಿ. ನಾವು ಒಮ್ಮೆ ರಕ್ಷಿಸಲ್ಪಟ್ಟರೆ ನಾವು ಎಂದೆಂದಿಗೂ ರಕ್ಷಿಸಲ್ಪಟ್ಟವರಾಗಿದ್ದೇವೆ. ನಮ್ಮ ರಕ್ಷಣೆಯು ಅತ್ಯಂತ ನಿಶ್ಚಿತವಾಗಿ ಶಾಶ್ವತವಾಗಿ ಸುರಕ್ಷಿತವಾಗಿರುತ್ತದೆ!

English
ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ
ಒಮ್ಮೆ ರಕ್ಷಿಸಲ್ಪಟ್ಟವರು ಯಾವಾಗಲೂ ರಕ್ಷಿಸಲ್ಪಡುವರೋ?