ಪರಲೋಕಕ್ಕೆ ಒಂದೇ ಮಾರ್ಗ ಯೇಸುವೇ ಆಗಿದ್ದಾನೋ?ಪ್ರಶ್ನೆ: ಪರಲೋಕಕ್ಕೆ ಒಂದೇ ಮಾರ್ಗ ಯೇಸುವೇ ಆಗಿದ್ದಾನೋ?

ಉತ್ತರ:
ಹೌದು, ಪರಲೋಕಕ್ಕೆ ಒಂದೇ ಮಾರ್ಗ ಯೇಸುವೇ ಆಗಿದ್ದಾನೆ. ಇಂಥ ಹೇಳಿಕೆಯು ಪೂರ್ವಆಧುನಿಕ ಯುಗದ ಮೇಲೆ ಸರಳಿನ ಚೌಕಟ್ಟಾಗಿರಬಹುದು, ಆದರೂ ಇದು ಸತ್ಯವಾಗಿದೆ. ಯೇಸು ಕ್ರಿಸ್ತನ ಹೊರತು ರಕ್ಷಣೆಗೆ ಬೇರೆ ಯಾವುದೇ ಮಾರ್ಗವಿಲ್ಲವೆಂದು ಸತ್ಯವೇದವು ಬೊಧಿಸುತ್ತದೆ. ಯೋಹಾನ 14:6ರಲ್ಲಿ ಯೇಸು ತಾನೇ ಹೀಗೆ ಹೇಳುತ್ತಾನೆ, “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ.” ಅನೇಕ ಮಾರ್ಗಗಳಲ್ಲಿ ಆತನೂ ಒಂದು ಮಾರ್ಗವಲ್ಲ; ಒಂದೇ ಒಂದು ಮಾರ್ಗವಿದೆ, ಆತನೇ ಮಾರ್ಗವಾಗಿದ್ದಾನೆ. ಯಾರಾದರು ಹೆಸರುವಾಸಿ, ಸಾಧನೆ, ವಿಶೇಷ ಜ್ಞಾನ, ಅಥವಾ ವೈಯಕ್ತಿಕ ಪರಿಶುದ್ಧತೆ ಇವುಗಳಿದ್ದರೂ ಸಹ, ಯೆಸು ಕ್ರಿಸ್ತನ ಹೊರತು ಯಾರೂ ತಂದೆಯಾದ ದೇವರ ಬಳಿಗೆ ಬರಲು ಸಾಧ್ಯವಿಲ್ಲ.

ಪರಲೋಕಕ್ಕೆ ಯೇಸು ಒಂದೇ ಮಾರ್ಗವಾಗಿರುವುದಕ್ಕೆ ಅನೇಕ ಕಾರಣಗಳಿವೆ. ಯೇಸು ರಕ್ಷಕನಾಗಿರುವುದಕ್ಕಾಗಿ “ದೇವರಿಂದ ಆರಿಸಿಕೊಳ್ಳಲ್ಪಟ್ಟನು” (1 ಪೇತ್ರ 2:4). ಯೇಸು ಒಬ್ಬನೇ ಪರಲೋಕದಿಂದ ಇಳಿದು ಬಂದವನು ಮತ್ತು ಅಲ್ಲಿಗೆ ಹಿಂದಿರುಗಿ ಹೋದವನು ಆಗಿದ್ದಾನೆ (ಯೋಹಾನ 3:13). ಆತನೊಬ್ಬನೇ ಪರಿಪೂರ್ಣವಾದ ಮಾನವ ಜೀವಿತವನ್ನು ನಡೆಸಿದ ವ್ಯಕ್ತಿಯಾಗಿದ್ದಾನೆ (ಇಬ್ರಿಯ 4:15). ಆತನೊಬ್ಬನೇ ಪಾಪಗಳಿಗಾಗಿ ಯಜ್ಞವಾದನು (1 ಯೋಹಾನ 2:2; ಇಬ್ರಿಯ 10:26). ಆತನೊಬ್ಬನೇ ಧರ್ಮಶಾಸ್ತ್ರವನ್ನು ಮತ್ತು ಪ್ರವಾದನೆಗಳನ್ನು ನೆರವೇರಿಸಿದನು (ಮತ್ತಾಯ 5:17). ಆತನೊಬ್ಬನೇ ಮರಣವನ್ನು ಎಂದೆಂದಿಗೂ ಜಯಿಸಿದಾತನಾಗಿದ್ದಾನೆ (ಇಬ್ರಿಯ 2:14-15). ಆತನೊಬ್ಬನೇ ದೇವರು ಮತ್ತು ಮನುಷ್ಯರ ನುಡವೆ ಮಧ್ಯಸ್ಥನಾಗಿದ್ದಾನೆ (1 ತಿಮೋಥೆ 2:5). ದೇವರು “ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿದ….” (ಫಿಲಿಪ್ಪಿ 2:9) ಮನುಷ್ಯನು ಆತನೊಬ್ಬನೇ ಆಗಿದ್ದಾನೆ.

ಯೋಹಾನ 14:6 ಹಾಗೂ ಇನ್ನು ಅನೇಕ ಸ್ಥಳಗಳಲ್ಲಿ ಯೇಸು ತಾನೇ ಪರಲೋಕಕ್ಕೆ ಒಂದೇ ಮಾರ್ಗವೆಂದು ಹೇಳಿದನು. ಆತನು ಮತ್ತಾಯ 7:21-27ರಲ್ಲಿ ನಂಬಿಕೆಯ ಕೇಂದ್ರವಾಗಿ ಆತನು ತನ್ನನ್ನೇ ಪ್ರಸ್ತುತಪಡಿಸಿದನು. ತನ್ನ ಮಾತುಗಳು ಜೀವವೆಂದು ಆತನು ಹೇಳಿದನು (ಯೋಹಾನ 6:63). ತನ್ನಲ್ಲಿ ನಂಬಿಕೆಯಿಡುವವನು ನಿತ್ಯಜೀವವನ್ನು ಹೊಂದಿಕೊಳ್ಳುತ್ತಾನೆ ಎಂದು ಆತನು ವಾಗ್ಧಾನ ಮಾಡಿದನು (ಯೋಹಾನ 3:14-15). ಆತನು ಕುರಿಗಳಿಗೆ ಬಾಗಿಲಾಗಿದ್ದಾನೆ (ಯೋಹಾನ 10:7); ಜೀವದ ರೊಟ್ಟಿಯಾಗಿದ್ದಾನೆ (ಯೋಹಾನ 6:35); ಮತ್ತು ಪುನರುತ್ಥಾನವೂ ಆಗಿದ್ದಾನೆ (ಯೋಹಾನ 11:25). ಈ ಶಿರೋನಾಮೆಗಳನ್ನು ಬೇರೆ ಯಾರೂ ಹಕ್ಕಿನಿಂದ ಹೇಳಿಕೊಳ್ಳಲು ಆಗುವದಿಲ್ಲ.

ಅಪೊಸ್ತಲರ ಬೊಧನೆಯು ಕರ್ತನಾದ ಯೇಸು ಕ್ರಿಸ್ತನ ಮರಣ ಮತ್ತು ಪುನರುತ್ಥಾನದ ಮೇಲೆ ಕೇಂದ್ರೀಕೃತವಾಗಿತ್ತು. ಪೇತ್ರನು ಮಂತ್ರಾಲೋಚಕರ ಸಭೆಯೊಂದಿಗೆ ಮಾತನಾಡುತ್ತಾ, ಪರಲೋಕಕ್ಕೆ ಯೇಸು ಒಂದೇ ಮಾರ್ಗವೆಂದು ಸ್ಪಷ್ಟವಾಗಿ ಪ್ರಕಟಿಸಿದನು: “ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವದಿಲ್ಲ; ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ” (ಅಪೊಸ್ತಲರ ಕೃತ್ಯಗಳು 4:12). ಪೌಲನು ಅಂತಿಯೋಕ್ಯದಲ್ಲಿ ಸಭಾ ಮಂದಿರದೊಳಗೆ ಮಾತನಾಡುತ್ತಾ, ಯೇಸುವೇ ರಕ್ಷಕನೆಂದು ಪ್ರಕಟಿಸಿದನು: “ಆದದರಿಂದ ಸಹೋದರರೇ, ಆತನ ಮೂಲಕವಾಗಿ ಪಾಪಪರಿಹಾರವು ದೊರೆಯುತ್ತದೆಂಬುದು ನಿಮಗೆ ಸಾರೋಣವಾಗುತ್ತದೆಂದು ನಿಮಗೆ ತಿಳಿದಿರಲಿ. ಮೋಶೆಯ ಧರ್ಮಶಾಸ್ತ್ರದ ಮೂಲಕ ನೀವು ಬಿಡುಗಡೆ ಹೊಂದಲಾಗದ ಎಲ್ಲಾ ಪಾಪಗಳಿಂದ ನಂಬುವವರೆಲ್ಲರು ಆತನ ಮೂಲಕವಾಗಿ ಬಿಡುಗಡೆಹೊಂದಿ ನೀತಿವಂತರೆನಿಸಿಕೊಳ್ಳುತ್ತಾರೆ.” (ಅಪೊಸ್ತಲರ ಕೃತ್ಯಗಳು 13:38-39). ಯೋಹಾನನು ಸಭೆಗೆ ಬರೆಯುತ್ತಾ, ಕ್ರಿಸ್ತನ ನಾಮವು ನಮ್ಮ ಕ್ಷಮಾಪಣೆಗೆ ಆಧಾರವೆಂದು ಹೇಳುತ್ತಾನೆ: “ಪ್ರಿಯರಾದ ಮಕ್ಕಳೇ, ಕ್ರಿಸ್ತನ ಹೆಸರಿನ ನಿಮಿತ್ತ ನಿಮ್ಮ ಪಾಪಗಳು ಕ್ಷಮಿಸಲ್ಪಟ್ಟಿರುವದರಿಂದ ನಿಮಗೆ ಬರೆಯುತ್ತೇನೆ” (1 ಯೋಹಾನ 2:12). ಯಾರೂ ಅಲ್ಲ ಆದರೆ ಯೇಸು ಪಾಪಗಳನ್ನು ಕ್ಷಮಿಸಬಲ್ಲನು.

ಪರಲೋಕದಲ್ಲಿರುವ ನಿತ್ಯಜೀವವು ಕೇವಲ ಕ್ರಿಸ್ತನಿಂದ ಮಾತ್ರ ಸಾಧ್ಯವಾಗಿ ಮಾಡಲ್ಪಟ್ಟಿತು. ಯೇಸು ಹೀಗೆ ಪ್ರಾರ್ಥಿಸಿದನು, “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು” (ಯೋಹಾನ 17:3). ದೇವರ ರಕ್ಷಣೆಯ ಉಚಿತ ವರವನ್ನು ಪಡೆದುಕೊಳ್ಳಲು, ನಾವು ಯೇಸು ಮತ್ತು ಯೇಸು ಒಬ್ಬನನ್ನೇ ನೋಡಬೇಕಾಗಿದೆ. ನಮ್ಮ ಪಾಪಕ್ಕೆ ಕ್ರಯವನ್ನು ಕೊಟ್ಟನೆಂದು ಯೇಸುವಿನ ಶಿಲುಬೆಯ ಮರಣದಲ್ಲಿ ಮತ್ತು ಆತನ ಪುನರುತ್ಥಾನದಲ್ಲಿ ನಾವು ಭರವಸೆಯಿಡಬೇಕಾಗಿದೆ. “ದೇವರಿಂದಾಗುವ ಆ ನೀತಿಯು ಯಾವದಂದರೆ ಯೇಸು ಕ್ರಿಸ್ತನನ್ನು ನಂಬುವದರಿಂದಲೇ ನಂಬುವವರೆಲ್ಲರಿಗೆ ದೊರಕುವಂಥದು.” (ರೋಮಾ 3:22).

ಯೇಸುವಿನ ಸೇವೆಯ ಒಂದು ಸಂದರ್ಭದಲ್ಲಿ, ಗುಂಪಿನ ಜನರಲ್ಲಿ ಅನೇಕರು ಬೇರೊಬ್ಬ ರಕ್ಷಕನನ್ನು ಕಂಡುಕೊಳ್ಳುವ ನಿರೀಕ್ಷೆಯಲ್ಲಿ ಆತನಿಗೆ ಬೆನ್ನು ತೋರಿಸಿ ಬಿಟ್ಟು ಹೋಗುತ್ತಿದ್ದರು. ಯೇಸು ಹನ್ನೆರಡು ಮಂದಿಗೆ ಹೀಗೆ ಕೇಳಿದನು, “ನೀವು ಸಹ ಹೋಗಬೇಕೆಂದಿದ್ದೀರಾ?” (ಯೋಹಾನ 6:67). ಪೇತ್ರನ ಪ್ರತ್ಯುತ್ತರವು ಸರಿಯಾಗಿತ್ತು: “ಸ್ವಾಮೀ, ನಿನ್ನನ್ನು ಬಿಟ್ಟು ನಾವು ಇನ್ನಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳುಂಟು; ನೀನು ದೇವರು ಪ್ರತಿಷ್ಠಿಸಿದವನೇ ಎಂದು ನಾವು ನಂಬಿದ್ದೇವೆ ಮತ್ತು ತಿಳಿದಿದ್ದೇವೆ ಅಂದನು” (ಯೋಹಾನ 6:68-69). ನಿತ್ಯಜೀವವು ಯೇಸು ಕ್ರಿಸ್ತನಲ್ಲಿ ಮಾತ್ರ ನೆಲೆಗೊಂಡಿದೆ ಎಂಬ ಪೇತ್ರನ ನಂಬಿಕೆಯನ್ನು ನಾವೆಲ್ಲರೂ ಹಂಚಿಕೊಳ್ಳೋಣ.

ನೀವು ಇಲ್ಲಿ ಓದಿದವುಗಳ ನಿಮಿತ್ತ ಕ್ರಿಸ್ತನಿಗಾಗಿ ತೀರ್ಮಾನ ಮಾಡಿಕೊಂಡಿದ್ದೀರಾ? ಹಾಗಾದರೆ, “ನಾನು ಇಂದು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿರುವ ಬಟ್ಟನ್ ಮೇಲೆ ಕ್ಲಿಕ್ ಮಾಡಿರಿ.


ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ


ಪರಲೋಕಕ್ಕೆ ಒಂದೇ ಮಾರ್ಗ ಯೇಸುವೇ ಆಗಿದ್ದಾನೋ?