ಪ್ರಶ್ನೆ
ಪವಿತ್ರಾತ್ಮನು ಯಾರಾಗಿದ್ದಾನೆ?
ಉತ್ತರ
ಪವಿತ್ರಾತ್ಮನ ವ್ಯಕ್ತಿತ್ವವನ್ನು ಕುರಿತು ಅನೇಕ ತಪ್ಪರ್ಥಗಳಿವೆ. ಕೆಲವರು ಪವಿತ್ರಾತ್ಮನನ್ನು ಅಂತೀದ್ರಿಯ ಶಕ್ತಿ ಎಂದು ದೃಷ್ಟಿಸುತ್ತಾರೆ. ಬೇರೆ ಕೆಲವರು ಪವಿತ್ರಾತ್ಮನನ್ನು ಕ್ರಿಸ್ತನ ಹಿಂಬಾಲಕರಿಗೆ ದೇವರು ಕೊಡುವ ಅವೈಯಕ್ತಿಕ ಶಕ್ತಿ ಎಂದು ಅರ್ಥಮಾಡಿಕೊಳ್ಳುತ್ತಾರೆ. ಪವಿತ್ರಾತ್ಮನ ವ್ಯಕ್ತಿತ್ವವನ್ನು ಕುರಿತು ಸತ್ಯವೇದವು ಏನು ಹೇಳುತ್ತದೆ? ಸರಳವಾಗಿ ಹೇಳುವುದಾದರೆ, ಪವಿತ್ರಾತ್ಮನನ್ನು ಸತ್ಯವೇದವು ದೇವರು ಎಂದು ಪ್ರಕಟಿಸುತ್ತದೆ. ಸತ್ಯವೇದವು ಪವಿತ್ರಾತ್ಮನನ್ನು ದೈವಿಕ ವ್ಯಕ್ತಿ ಎಂದು ಸಹ ನಮಗೆ ತಿಳಿಸುತ್ತದೆ, ಅಂದರೆ ಬುದ್ಧಿ, ಭಾವನೆಗಳು ಮತ್ತು ಮನಸ್ಸನ್ನು ಹೊಂದಿರುವ ಜೀವಿ.
ಪವಿತ್ರಾತ್ಮನು ದೇವರು ಎಂಬ ಸತ್ಯಾಂಶವನ್ನು ಅಪೊಸ್ತಲ ಕೃತ್ಯಗಳು 5:3-4 ಸಹ ಒಳಗೊಂಡು, ಅನೇಕ ವಾಕ್ಯಗಳಲ್ಲಿ ಸ್ಪಷ್ಟವಾಗಿ ನೋಡಬಹುದು. ಈ ವಚನದಲ್ಲಿ ಅವನು ಪವಿತ್ರಾತ್ಮನಿಗೆ ಯಾಕೆ ಸುಳ್ಳು ಹೇಳಿದನು. ಪೇತ್ರನು ಅನನ್ಯನನ್ನು ಖಂಡಿಸಿ ಅವನು, “ಮನುಷ್ಯರಿಗಲ್ಲ ದೇವರಿಗೆ ಸುಳ್ಳು ಹೇಳಿದ್ದಾನೆ” ಅಂದನು. ಪವಿತ್ರಾತ್ಮನಿಗೆ ಸುಳ್ಳು ಹೇಳುವದು ದೇವರಿಗೆ ಸುಳ್ಳು ಹೇಳುವುದಾಗಿದೆ ಎಂದು ಇದು ಸ್ಪಷ್ಟವಾಗಿ ಪ್ರಕಟಿಸುತ್ತದೆ. ಪವಿತ್ರಾತ್ಮನು ದೇವರ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಪವಿತ್ರಾತ್ಮನು ದೇವರಾಗಿದ್ದಾನೆ ಎಂದು ಸಹ ನಾವು ತಿಳಿದುಕೊಳ್ಳಬಹುದು. ಉದಾಹರಣೆಗೆ, ಆತನು ಸರ್ವವ್ಯಾಪಿ ಎಂದು ಕೀರ್ತನೆಗಳು 139:7-8ರಲ್ಲಿ ನೋಡುತ್ತೇವೆ, “ನಾನು ನಿನ್ನ ಆತ್ಮಕ್ಕೆ ತಪ್ಪಿಸಿಕೊಳ್ಳುವಂತೆ ಎಲ್ಲಿಗೆ ಹೋಗಲಿ? ನಿನ್ನ ಕಣ್ಣಿಗೆ ಮರೆಯಾಗುವಂತೆ ಎಲ್ಲಿಗೆ ಓಡಲಿ? ಮೇಲಣ ಲೋಕಕ್ಕೆ ಏರಿಹೋದರೆ ಅಲ್ಲಿ ನೀನಿರುತ್ತೀ; ಪಾತಾಳಕ್ಕೆ ಹೋಗಿ ಮಲಗಿಕೊಂಡೇನಂದರೆ ಅಲ್ಲಿಯೂ ನೀನಿರುವಿ.” ಹಾಗೂ 1 ಕೊರಿಂಥ 2:10-11ರಲ್ಲಿ, ನಾವು ಪವಿತ್ರಾತ್ಮನಲ್ಲಿ ಸರ್ವವ್ಯಾಪಿಯ ಗುಣಲಕ್ಷಣಗಳನ್ನು ನೋಡುತ್ತೇವೆ. “ನಮಗಾದರೋ ದೇವರು ತನ್ನ ಆತ್ಮನ ಮೂಲಕ ಅದನ್ನು ಪ್ರಕಟಿಸಿದನು. ಆ ಆತ್ಮನು ಎಲ್ಲಾ ವಿಷಯಗಳನ್ನು, ದೇವರ ಅಗಾಧವಾದ ವಿಷಯಗಳನ್ನು ಕೂಡ ಪರಿಶೋಧಿಸುವವನಾಗಿದ್ದಾನೆ. ಮನುಷ್ಯನ ಒಳಗಿನ ಆಲೋಚನೆಗಳು ಅವನಲ್ಲಿರುವ ಜೀವಾತ್ಮಕ್ಕೆ ಹೊರತು ಮತ್ತಾರಿಗೆ ತಿಳಿಯುವದು? ಹಾಗೆಯೇ ದೇವರ ಆಲೋಚನೆಗಳನ್ನು ದೇವರ ಆತ್ಮನೇ ಹೊರತು ಬೇರೆ ಯಾರೂ ಗ್ರಹಿಸುವದಿಲ್ಲ.”
ಪವಿತ್ರಾತ್ಮನು ನಿಜವಾಗಿ ದೈವಿಕ ವ್ಯಕ್ತಿ ಎಂದು ನಾವು ತಿಳಿದುಕೊಳ್ಳಬಹುದು ಯಾಕೆಂದರೆ ಆತನು ಬುದ್ಧಿ, ಭಾವನೆಗಳು ಮತ್ತು ಮನಸ್ಸನ್ನು ಹೊಂದಿದ್ದಾನೆ. ಪವಿತ್ರಾತ್ಮನು ಆಲೋಚಿಸುತ್ತಾನೆ ಮತ್ತು ತಿಳಿದವನಾಗಿದ್ದಾನೆ (1 ಕೊರಿಂಥ 2:10). ಪವಿತ್ರಾತ್ಮನನ್ನು ದುಃಖಪಡಿಸಬಹುದು (ಎಫೆಸ 4:30). ಪವಿತ್ರಾತ್ಮನು ನಮಗಾಗಿ ವಿಜ್ಞಾಪಿಸುತ್ತಾನೆ (ರೋಮಾ 8:26-27). ಆತನ ಚಿತ್ತದ ಪ್ರಕಾರ ತೀರ್ಮಾನಗಳನ್ನು ಮಾಡುತ್ತಾನೆ (1 ಕೊರಿಂಥ 12:7-11). ಪವಿತ್ರಾತ್ಮನು ದೇವರಾಗಿದ್ದಾನೆ, ತ್ರಯೇಕತ್ವದ ಮೂರನೆಯ ವ್ಯಕ್ತಿಯಾಗಿದ್ದಾನೆ. ದೇವರಾಗಿ, ಯೇಸು ವಾಗ್ಧಾನ ಮಾಡಿದಂತೆ ಪವಿತ್ರಾತ್ಮನು ನಿಜವಾಗಿ ಆದರಣೆ ಕೊಡುವವನು ಮತ್ತು ಉಚಿತಾಲೋಚಕನು ಆಗಿ ಕಾರ್ಯಮಾಡುವನು (ಯೋಹಾನ 14:16, 26, 15:26).
English
ಪವಿತ್ರಾತ್ಮನು ಯಾರಾಗಿದ್ದಾನೆ?