settings icon
share icon
ಪ್ರಶ್ನೆ

ನಾನು ಹಿಂದು ಆಗಿದ್ದೇನೆ, ನಾನು ಕ್ರೈಸ್ತನಾಗಲು ಯಾಕೆ ಪರಿಗಣಿಸಬೇಕು?

ಉತ್ತರ


ಹಿಂದುತ್ವ ಮತ್ತು ಕ್ರೈಸ್ತತ್ವವನ್ನು ಹೋಲಿಸುವದು ಕಷ್ಟಕರ, ಯಾಕೆಂದರೆ ಹಿಂದುತ್ವವು ಪಾಶ್ಚಿಮಾತ್ಯರು ಗ್ರಹಿಸಿಕೊಳ್ಳುವದಕ್ಕಾಗಿ ನೆಚ್ಚಲಾಗದ ಧರ್ಮವಾಗಿದೆ. ಇದು ಮಿತಿಯಿಲ್ಲದ ಆಳವಾದ ಒಳದೃಷ್ಟಿಯುಳ್ಳ, ಒಂದು ಐಶ್ವರ್ಯ, ಮತ್ತು ವಿಸ್ತಾರವಾದ ತತ್ವವನ್ನು ಪ್ರತಿನಿಧಿಸುತ್ತದೆ. ಪ್ರಪಂಚದಲ್ಲಿ ಹೆಚ್ಚು ವಿಧಗಳಿರುವ ಅಥವಾ ಅಲಂಕೃತವಾದ ಬೇರೆ ಧರ್ಮವಿಲ್ಲ. ಆದುದರಿಂದ ಪ್ರಸ್ಥಾಪಿಸಿದ ಪ್ರಶ್ನೆಯನ್ನು ಜಾಗರೂಕತೆಯಿಂದ ಮತ್ತು ದೀನತೆಯಿಂದ ಪರಿಗಣಿಸಬೇಕಾಗಿದೆ. ಇಲ್ಲಿ ಕೊಡಲ್ಪಟ್ಟ ಉತ್ತರವು ಸಮಗ್ರ ಅಥವಾ ಯಾವುದೇ ಹಂತದಲ್ಲಿ ಹಿಂದುತ್ವವನ್ನು “ಆಳವಾಗಿ” ಅರ್ಥಮಾಡಿಕೊಳ್ಳುವದು ಊಹೆಯೆಂದು ನಟಿಸುವದಲ್ಲ. ಕ್ರೈಸ್ತತ್ವವು ಹೇಗೆ ವಿಶೇಷ ಪರಿಗಣನೆಗೆ ಯೋಗ್ಯವೆಂದು ತೋರಿಸುವ ಪ್ರಯತ್ನದಲ್ಲಿ ಈ ಉತ್ತರವು ಕೇವಲ ಎರಡು ಧರ್ಮಗಳ ನಡುವೆ ಕೆಲವು ಅಂಶಗಳನ್ನು ಹೋಲಿಸುತ್ತದೆ.

ಮೊದಲನೆಯದಾಗಿ, ಕ್ರೈಸ್ತತ್ವವನ್ನು ಅದರ ಚಾರಿತ್ರಿಕ ಜೀವ ಶಕ್ತಿಗಾಗಿ ಪರಿಗಣಿಸಬೇಕಾಗಿದೆ. ಕ್ರೈಸ್ತತ್ವವು ಚಾರಿತ್ರಿಕವಾಗಿ ಬೇರೂರಿರುವ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ವಿಜ್ಞಾನಿಗಳ ಮೂಲಕ ಅಂದರೆ ಪುರಾತತ್ವಶಾಸ್ತ್ರ ಮತ್ತು ಪಠ್ಯ ವಿಮರ್ಶೆ ಮೂಲಕ ಗುರುತಿಸಬಲ್ಲ ಸಂಗ್ರಹದೊಳಗೆ ಇರುವ ಘಟನೆಗಳಾಗಿವೆ. ಹಿಂದುತ್ವವು ಖಂಡಿತವಾಗಿ ಚರಿತ್ರೆಯನ್ನು ಹೊಂದಿದೆ, ಆದರೆ ಅದರ ತತ್ವ, ಪುರಾಣ ಮತ್ತು ಚರಿತ್ರೆ ಅನೇಕವೇಳೆ ಒಟ್ಟಾಗಿ ಮೊಬ್ಬಾಗಿರುವದರಿಂದ ಒಂದು ಎಲ್ಲಿ ನಿಲ್ಲುತ್ತದೆ ಮತ್ತು ಬೇರೊಂದು ಎಲ್ಲಿ ಆರಂಭವಾಗುತ್ತದೆಂದು ಗುರುತಿಸುವದು ಕಷ್ಟಕರವಾಗುತ್ತದೆ. ಹಿಂದುತ್ವದಲ್ಲಿ ಪುರಾಣವನ್ನು ಬಹಿರಂಗವಾಗಿ ಒಪ್ಪಿಕೊಳ್ಳಲಾಗುತ್ತದೆ, ಇದು ವಿಸ್ತಾರವಾದ ಕಟ್ಟುಕಥೆಗಳನ್ನು ಹೊಂದಿದ್ದು ಇದನ್ನು ದೇವರುಗಳ ವ್ಯಕ್ತಿತ್ವಗಳನ್ನು ಮತ್ತು ಸ್ವಭಾವಗಳನ್ನು ವಿವರಿಸಲು ಉಪಯೋಗಿಸಲಾಗುತ್ತದೆ. ಹಿಂದುತ್ವವು ತನ್ನ ಚಾರಿತ್ರಿಕ ದ್ವಂದ್ವಾರ್ಥತೆಯ ಮೂಲಕ ಕೆಲವು ನಿರ್ಧಿಷ್ಟ ಸಂದರ್ಭಗಳಿಗೆ ಹೊಂದಿಕೊಳ್ಳುವ ಸ್ವಭಾವವನ್ನು ಹೊಂದಿದೆ. ಆದರೆ ಧರ್ಮವು ಚಾರಿತ್ರಿವಲ್ಲದಿದ್ದರೆ ಅದನ್ನು ಪರೀಕ್ಷಿಸುವ ಅಗತ್ಯವು ಕಡಿಮೆಯಾಗಿರುತ್ತದೆ. ಆ ಸಮಯದಲ್ಲಿ ಅದನ್ನು ಸುಳ್ಳೆಂದು ಸಾಧಿಸಲು ಅಥವಾ ಪರಿಶೀಲಿಸಬಹುದೆಂದು ಹೇಳಲು ಆಗುವದಿಲ್ಲ. ಕ್ರೈಸ್ತತ್ವವದ ಸಿದ್ಧಾಂತವನ್ನು ಸಮರ್ಥಿಸುವದು ಯೆಹೂದ್ಯರ ಮತ್ತು ಕ್ರಮೇಣವಾಗಿ ಕ್ರೈಸ್ತ ಸಂಪ್ರಾದಾಯದ ಅಕ್ಷರಾರ್ಥ ಚರಿತ್ರೆಯಾಗಿದೆ. ಒಂದುವೇಳೆ ಆದಾಮ ಮತ್ತು ಹವ್ವ ಇಲ್ಲದೆ ಇದ್ದಿದ್ದರೆ, ಒಂದುವೇಳೆ ಇಸ್ರಾಯೇಲ್ಯರಿಗೆ ಐಗುಪ್ತ್ಯದಿಂದ ವಿಮೋಚನೆಯಿಲ್ಲವಾಗಿದ್ದರೆ, ಒಂದುವೇಳೆ ಯೋನನ ವಿಷಯವು ಕೇವಲ ಸಾಮ್ಯವಾಗಿದ್ದರೆ ಅಥವಾ ಯೇಸು ಭೂಮಿಯ ಮೇಲೆ ನಡೆಯದೆ ಇದ್ದಿದ್ದರೆ, ಆಗ ಇಡೀ ಕ್ರೈಸ್ತ ಧರ್ಮವು ಈ ಹಂತಗಳಲ್ಲಿ ಕುಸಿದು ಬೀಳುತ್ತಿತ್ತು. ಕ್ರೈಸ್ತತ್ವಕ್ಕೆ ಮೋಸಗೊಳಿಸುವ ಚರಿತ್ರೆಯು ರಂಧ್ರಗಳಿಂದ ತುಂಬಿದ ಸಿದ್ಧಾಂತವಾಗಿರುತ್ತಿತ್ತು. ಚಾರಿತ್ರಿಕವಾಗಿ ಪರೀಕ್ಷಿಸಬಹುದಾದ ಕ್ರೈಸ್ತ ಸಂಪ್ರದಾಯದ ಭಾಗಗಳು ಅನೇಕವೇಳೆ ಪರಿಶೀಲಿಸಲಾಗಿದ್ದು ಅವು ಬಲಹೀನತೆಯಿಂದ ಬಲವಾಗುತ್ತವೆ ಎಂಬುದನ್ನು ಹೊರತುಪಡಿಸಿ ಇಂಥ ಚಾರಿತ್ರಿಕ ಬೇರೂರುವಿಕೆಯು ಕ್ರೈಸ್ತತ್ವಕ್ಕೆ ಬಲಹೀನತೆಯಾಗಿರುತ್ತಿತ್ತು.

ಎರಡನೆಯದಾಗಿ, ಕ್ರೈಸ್ತತ್ವ ಮತ್ತು ಹಿಂದುತ್ವವು ಮುಖ್ಯ ಚಾರಿತ್ರಿಕ ವ್ಯಕ್ತಿಗಳನ್ನು ಹೊಂದಿದೆ, ಆದರೆ ಯೇಸು ಮಾತ್ರ ಮರಣದಿಂದ ದೈಹಿಕವಾಗಿ ಎದ್ದನು ಎಂದು ತೋರಿಸುತ್ತದೆ. ಚರಿತ್ರೆಯಲ್ಲಿ ಅನೇಕ ಜನರು ಬುದ್ದಿವಂತ ಬೋಧಕರಾಗಿದ್ದಾರೆ ಅಥವಾ ಧಾರ್ಮಿಕ ಸಂಸ್ಥೆಗಳನ್ನು ಆರಂಭಿಸಿದ್ದಾರೆ. ಹಿಂದುತ್ವವು ತನ್ನ ಪಾಲಿನ ಬುದ್ದಿವಂತ ಬೋಧಕರು ಮತ್ತು ಪ್ರಾಪಂಚಿಕ ನಾಯಕರನ್ನು ಹೊಂದಿದೆ. ಆದರೆ ಇವರಲ್ಲಿ ಯೇಸು ಉನ್ನತವಾಗಿ ನಿಲ್ಲುವವನಾಗಿದ್ದಾನೆ. ಆತನ ಆತ್ಮಿಕ ಬೋಧನೆಗಳನ್ನು ಪರೀಕ್ಷೆಯಿಂದ ಖಚಿತಪಡಿಸಲಾಗಿದೆ, ಕೇವಲ ದೈವೀಕ ಶಕ್ತಿ ಮಾತ್ರ ಇವುಗಳನ್ನು ಹಾದುಹೋಗಬಲ್ಲದು: ಮರಣ ಮತ್ತು ದೈಹಿಕ ಪುನರುತ್ಥಾನ, ಆತನು ಇದನ್ನು ಪ್ರವಾದಿಸಿ ತನ್ನಲ್ಲೇ ನೆರವೇರಿಸಿದನು (ಮತ್ತಾಯ 16:21; 20:18-19; ಮಾರ್ಕ 8:31, ಲೂಕ 9:22; ಯೋಹಾನ 20-21; 1 ಕೊರಿಂಥ 15).

ಇಷ್ಟೇ ಅಲ್ಲದೆ, ಪುನರುತ್ಥಾನವೆಂಬ ಕ್ರೈಸ್ತ ಸಿದ್ಧಾಂತವು ಅವತಾರ ಎಂಬ ಹಿಂದು ಸಿದ್ಧಾಂತದಿಂದ ಬೇರೆ ನಿಲ್ಲುತ್ತದೆ. ಈ ಎರಡು ಕಲ್ಪನೆಗಳು ಒಂದೇ ಅಲ್ಲ. ಮತ್ತು ಈ ಪುನರುತ್ಥಾನವು ಮಾತ್ರ ಚಾರಿತ್ರಿಕ ಮತ್ತು ಸಾಕ್ಷ್ಯಾಧಾರ ಅಧ್ಯಯನದಿಂದ ಮನವರಿಕೆಯಿಂದ ಊಹಿಸಬಹುದು. ಯೇಸು ಕ್ರಿಸ್ತನ ಪುನರುತ್ಥಾನವು ಪ್ರಾಪಂಚಿಕ ಮತ್ತು ಧಾರ್ಮಿಕ ಪಂಡಿತರ ಮೂಲಕ ಪರಿಗಣನೀಯವಾದ ಸಮರ್ಥನೆಯನ್ನು ಹೊಂದಿದೆ. ಇದರ ಪರಿಶೀಲನೆಯು ಹಿಂದು ತತ್ವವಾಗಿರುವ ಅವತಾರವನ್ನು ಹೋಲಿಸುವದರೊಂದಿಗೆ ಏನೂ ಆಗಬೇಕಾಗಿರುವದಿಲ್ಲ. ಈ ಕೆಳಗಿನ ವ್ಯತ್ಯಾಸಗಳನ್ನು ಪರಿಗಣಿಸಿ:

ಪುನರುತ್ಥಾನವು ಒಂದೇ ಮರಣ, ಒಂದೇ ಜೀವ, ಒಂದೇ ಮರ್ತ್ಯ ದೇಹ ಮತ್ತು ಒಂದು ಹೊಸ ಅಮರವಾಗಿ ಮಹಿಮೆಯ ಶರೀರವನ್ನು ಒಳಗೊಂಡಿದೆ. ಪುನರುತ್ಥಾನವು ದೈವೀಕ ಮಧ್ಯಸ್ಥಿಕೆಯಿಂದ ಉಂಟಾಗುತ್ತದೆ, ಅದು ಏಕದೇವತಾವಾದಿ, ಅದು ಪಾಪದಿಂದ ವಿಮೋಚನೆ ಮತ್ತು ಇದು ಅಂತ್ಯಕಾಲದಲ್ಲಿ ಮಾತ್ರ ಆಗುತ್ತದೆ. ಇದಕ್ಕೆ ವಿರುದ್ಧವಾಗಿ, ಅವತಾರವು, ಬಹು ಮರಣಗಳು, ಬಹು ಜೀವಿತಗಳು, ಬಹು ಮರ್ತ್ಯದೇಹಗಳು ಮತ್ತು ಅಮರತ್ವವಿಲ್ಲದ ದೇಹ ಇವುಗಳನ್ನು ಒಳಗೊಂಡಿದೆ. ಇದಲ್ಲದೆ, ಅವತಾರವು ಪ್ರಕೃತಿ ನಿಯಮದಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಸರ್ವದೇವತಾರಾಧನೆ (ದೇವರೇ ಸಮಸ್ತ), ಕರ್ಮ ಎಂಬ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ಯಾವಾಗಲೂ ಕಾರ್ಯನಿರತವಾಗಿರುತ್ತದೆ. ಸಹಜವಾಗಿ ವ್ಯತ್ಯಾಸವನ್ನು ಪಟ್ಟಿಮಾಡುವದರಿಂದ ಅದು ಈ ಎರಡನ್ನು ಸತ್ಯವೆಂದು ಸಾಭೀತುಪಡಿಸುವದಿಲ್ಲ. ಕ್ರಿಸ್ತನ ಪುನರುತ್ಥಾನ ಮತ್ತು ಪುನರುತ್ಥಾನದ ಕ್ರೈಸ್ತ ಸಿದ್ಧಾಂತ ಇವೆರಡು ಪರಿಗಣನೆಗೆ ಅರ್ಹವಾಗಿವೆ.

ಮೂರನೆಯದಾಗಿ, ಕ್ರೈಸ್ತ ಸಾಹಿತ್ಯಗಳು ಚಾರಿತ್ರಿಕವಾಗಿ ಅತ್ಯುತ್ತಮವಾದವು, ಗಂಭೀರವಾಗಿ ಗಮನ ಸೆಳೆಯುವವು ಆಗಿವೆ. ಅನೇಕ ಪರೀಕ್ಷೆಗಳಲ್ಲಿ ಸತ್ಯವೇದವು ಹಿಂದು ವೇದಗಳನ್ನು ಮತ್ತು ಈ ವಿಷಯದಲ್ಲಿ ಪ್ರಾಚೀನತೆಯ ಬೇರೆ ಎಲ್ಲಾ ಪುಸ್ತಕಗಳನ್ನು ಮೀರಿಸುತ್ತದೆ. ಸತ್ಯವೇದದ ಚರಿತ್ರೆಯು ಬಹಳ ಬಲವಾದದ್ದೆಂದು, ಸತ್ಯವೇದವನ್ನು ಕುರಿತು ಸಂದೇಹಪಡುವದು ಚರಿತ್ರೆಯಲ್ಲೇ ಸಂದೇಹಪಡುವದಾಗಿದೆ ಎಂದು ಒಬ್ಬರು ಹೇಳಬಹುದು, ಯಾಕೆಂದರೆ ಇದು ಪ್ರಾಚೀನದ ಎಲ್ಲಾ ಪುಸ್ತಕಗಳಿಗಿಂತ ಚಾರಿತ್ರಿಕವಾಗಿ ಪರೀಕ್ಷಿಸಬಲ್ಲದಾಗಿದೆ. ಹಳೇ ಒಡಂಬಡಿಕೆಗಿಂತ (ಇಬ್ರಿಯ ಸತ್ಯವೇದ) ಚಾರಿತ್ರಿಕವಾಗಿ ಪರೀಕ್ಷಿಸಬಹುದಾದ ಒಂದೇ ಪುಸ್ತಕವೆಂದರೆ ಅದು ಹೊಸ ಒಡಂಬಡಿಕೆಯಾಗಿದೆ. ಈ ಕೆಳಗಿನವುಗಳನ್ನು ಪರಿಗಣಿಸಿ:

1) ಬೇರೆ ಎಲ್ಲಾ ಪ್ರಾಚೀನತೆಗಳಿಗಿಂತ ಹೊಸ ಒಡಂಬಡಿಕೆಯು ಹೆಚ್ಚಿನ ಹಸ್ತಪ್ರತಿಗಳನ್ನು ಹೊಂದಿದೆ – 5000 ಪ್ರಾಚೀನ ಗ್ರೀಕ್ ಹಸ್ತಪ್ರತಿಗಳು, ಬೇರೆ ಎಲ್ಲಾ ಭಾಷೆಗಳನ್ನು ಒಳಗೊಂಡು ಎಲ್ಲವನ್ನು ಸೇರಿ 24,000 ಹಸ್ತಪ್ರತಿಗಳನ್ನು ಒಳಗೊಂಡಿದೆ. ಈ ಬಹು ಹಸ್ತಪ್ರತಿಗಳು ಹೆಚ್ಚಿನ ಪರಿಶೋಧನೆಗೆ ಅನುಮತಿಸುತ್ತದೆ, ಇದರಿಂದ ನಾವು ವಾಕ್ಯಭಾಗಗಳನ್ನು ಒಂದಕ್ಕೊಂದು ಪರೀಕ್ಷಿಸಿ ಮೂಲವು ಏನು ಹೇಳಿದೆ ಎಂದು ಗುರುತಿಸಬಹುದು.

2) ಹೊಸ ಒಡಂಬಡಿಕೆಯ ಹಸ್ತಪ್ರತಿಗಳು ಪ್ರಾಚೀನದ ಯಾವುದೇ ದಾಖಲೆಗಳಿಗಿಂತ ಮೂಲಗಳಿಗೆ ವಯಸ್ಸಿನಲ್ಲಿ ಹತ್ತಿರವಾಗಿದೆ. ಎಲ್ಲಾ ಮೂಲ ಪ್ರತಿಗಳು ಸಮಕಾಲೀನರ (ಸಾಕ್ಷಿಗಳು) ಸಮಯದಲ್ಲೇ ಬರೆಯಲಾಯಿತು, ಕ್ರಿ.ಪೂ. ಮೊದಲನೆಯ ಶತಮಾನದಲ್ಲಿ ಮತ್ತು ನಾವು ಈಗ ಕ್ರಿ.ಪೂ. 125 ಹಳೆಯದಾಗಿರುವಷ್ಟು ಹಸ್ತಪ್ರತಿಯ ಭಾಗಗಳನ್ನು ಹೊಂದಿದ್ದೇವೆ. ಕ್ರಿ.ಪೂ. 200 ವರೆಗೆ ಇಡೀ ಪುಸ್ತಕದ ಪ್ರತಿಗಳು ಮೇಲ್ಮೈ ಹೊಂದಿತು ಮತ್ತು ಸಂಪೂರ್ಣ ಹೊಸ ಒಡಂಬಡಿಕೆಯು ಕ್ರಿ.ಪೂ. 250 ರಲ್ಲಿ ಕಂಡುಬರುತ್ತವೆ. ಹೊಸ ಒಡಂಬಡಿಕೆಯ ಎಲ್ಲಾ ಪುಸ್ತಕಗಳು ಆರಂಭದಲ್ಲಿ ಪ್ರತ್ಯಕ್ಷಸಾಕ್ಷಿಯ ಸಮಯದಲ್ಲಿ ಬರೆಯಲ್ಪಟ್ಟವು, ಅಂದರೆ ಅವುಗಳಿಗೆ ಕಟ್ಟುಕಥೆ ಮತ್ತು ದಂತಕಥೆ ಮಾಡಲು ಸಮಯವಿರಲಿಲ್ಲ. ಅವರ ಸತ್ಯದ ಹೇಳಿಕೆಗಳನ್ನು ಸಭಾಸದಸ್ಯರಿಂದ ಅವರು ವೈಯಕ್ತಿಕವಾಗಿ ಘಟನೆಗಳಿಗೆ ಸಾಕ್ಷಿಯಾಗಿದ್ದದರಿಂದ, ಸತ್ಯಾಂಶಗಳನ್ನು ಪರಿಶೀಲಿಸಲು ಸಾಧ್ಯವಾದದ್ದರಿಂದ ಗಣನೆಗೆ ತೆಗೆದುಕೊಳ್ಳಲಾಯಿತು.

3) ಬೇರೆ ಯಾವುದೇ ಪುರಾಣಗಳಿಗಿಂತ ಹೊಸ ಒಡಂಬಡಿಕೆಯು ಬಹಳ ನಿಖರವಾಗಿದೆ. ಜಾನ್ ಆರ್. ರಾಬಿನ್ಸನ್ ರವರು ದೇವರಿಗೆ ಪ್ರಾಮಾಣಿಕತೆ ಎಂಬ ಪುಸ್ತಕದಲ್ಲಿ ಹೊಸ ಒಡಂಬಡಿಕೆಯ ದಾಖಲೆಗಳು 99.9% ನಿಖರವಾಗಿವೆ ಎಂದು ವರದಿಕೊಟ್ಟರು. (ಯಾವುದೇ ಸಂಪೂರ್ಣ ಪ್ರಾಚೀನ ಪುಸ್ತಕಕ್ಕಿಂತ ಹೆಚ್ಚು ನಿಖರವಾದದ್ದು). ಬ್ರೂಸ್ ಮೆಟ್ಸ್ ಗರ್ ಗ್ರೀಕ್ ಹೊಸ ಒಡಂಬಡಿಕೆಯ ತಜ್ಞರು ಅತಿ ಸಾಧಾರಣ 99.5% ಎಂದು ಸಲಹೆಕೊಟ್ಟರು.

ನಾಲ್ಕನೆಯದಾಗಿ, ಕ್ರೈಸ್ತ ಏಕದೇವರ ತತ್ವವು ಅದ್ವೈತವಾದ ಮತ್ತು ಬಹುದೇವತಾ ವಾದದ ಮೇಲೆ ಮೇಲುಗೈ ಹೊಂದಿದೆ. ಹಿಂದುತ್ವವು ಮಾತ್ರ ಬಹುದೇವತಾ ತತ್ವವನ್ನು (“ದೇವರೇ ಸಮಸ್ತವೂ”) ಅಥವಾ ಬಹುದೇವತಾವಾದವನ್ನು ಮಾತ್ರ ಹೊಂದಿದೆ ಎಂದು ಹೇಳುವದು ಸರಿಯಲ್ಲ. ಹಿಂದುತ್ವವನ್ನು ವಿವರಿಸುವದರ ಮೇಲೆ ಆಧಾರಗೊಂಡು ಒಬ್ಬರು ಬಹುದೇವತಾವಾದಿ, ಏಕಸ್ವಾಮ್ಯ (“ಎಲ್ಲವೂ ಒಂದೇ”), ಏಕದೇವತಾವಾದಿ, ಬೇರೆ ಇತರೆ ಅಭಿಪ್ರಾಯಗಳನ್ನು ಹೇಳಬಹುದು. ಹೇಗಾದರೂ, ಹಿಂದುತ್ವದಲ್ಲಿರುವ ಎರಡು ಬಲವಾದ ಭಾಗಗಳು ಬಹುದೇವತಾವಾದ ಮತ್ತು ಏಕದೇವತಾವಾದ ಆಗಿವೆ. ಈ ಎರಡರಲ್ಲಿ ಕ್ರೈಸ್ತರ ಏಕದೇವತಾವದವು ಒಳ್ಳೆಯದೆಂದು ಗುರುತಿಸಲಾಗಿದೆ. ಬಾಹ್ಯಾಕಾಶವನ್ನು ಪರಿಗಣಿಸಿ, ಲೋಕದ ಈ ಮೂರು ದೃಷ್ಟಿಕೋನವನ್ನು ಒಂದೇ ಅಂಶದ ಮೌಲ್ಯತೆಗೆ ಹೋಲಿಸಲಾಗಿದೆ.

ಬಹುದೇವತಾವಾದ ಮತ್ತು ಏಕದೇವತಾವಾದ ತಮ್ಮ ನೀತಿಗೆ ಪ್ರಶ್ನಿಸಬಹುದಾದ ಆಧಾರವನ್ನು ಹೊಂದಿದೆ. ಬಹುದೇವತಾವಾದದಿಂದ, ಒಂದುವೇಳೆ ಅನೇಕ ದೇವರಿದ್ದರೆ, ಆಗ ಮಾನವರನ್ನು ರಕ್ಷಿಸುವದಕ್ಕಾಗಿ ಯಾವ ದೇವರು ಉತ್ತಮವಾದ ನೀತಿಯ ಗುಣಮಟ್ಟವನ್ನು ಹೊಂದಿದ್ದಾರೆ? ಬಹುದೇವರುಗಳಿರುವಾಗ ಅವರ ನೈತಿಕತೆಯ ಪದ್ಧತಿಯು ಘರ್ಷಣೆಹೊಂದದೆ ಇರಬಹುದು, ಘರ್ಷಣೆಹೊಂದಬಹುದು ಅಥವಾ ಅಸ್ತಿತ್ವದಲ್ಲಿ ಇಲ್ಲದೆ ಇರಬಹುದು. ಅವರು ಅಸ್ತಿತ್ವದಲ್ಲಿ ಇಲ್ಲದೆ ಇದ್ದರೆ ಆಗ ನೈತಿಕತೆಯನ್ನು ಕಲ್ಪನೆಯಲ್ಲಿ ಸೃಷ್ಟಿಸಿದಾಗಿ ಆಧಾರವಿಲ್ಲದಾಗುತ್ತದೆ. ಈ ಸ್ಥಾನದ ಬಲಹೀನತೆಯು ಸ್ವಾಆಧಾರಿತವಾಗಿದೆ. ನೈತಿಕ ಪದ್ಧತಿಯು ಘರ್ಷಣೆಹೊಂದದೆ ಇದ್ದರೆ ಆಗ ನೀವು ಯಾವ ತತ್ವವನ್ನು ಉಪಯೋಗಿಸುವಿರಿ? ಸರಿಹೊಂದಿಸುವ ಯಾವುದೇ ತತ್ವವು ದೇವರಿಗಿಂತ ಹೆಚ್ಚು ಉತ್ತಮವಾಗಿರುತ್ತದೆ. ದೇವರುಗಳೇ ಅಂತಿಮವಲ್ಲ ಯಾಕೆಂದರೆ ಅವರು ಬೇರೆ ಅಧಿಕಾರಕ್ಕೆ ಉತ್ತರಕೊಡುತ್ತಾರೆ. ಆದುದರಿಂದ ಒಬ್ಬರು ಬದ್ಧರಾಗಬೇಕಾದ ಒಂದು ಉನ್ನತವಾದ ವಾಸ್ತವಿಕತೆ ಇದೆ. ಈ ಸತ್ಯಾಂಶವು ಬಹುದೇವತಾ ವಾದವನ್ನು ಬರಿದಲ್ಲದೆ ಇದ್ದರೆ ಆಳವಿಲ್ಲದಂತೆ ಕಾಣುತ್ತದೆ. ಮೂರನೆಯ ಅಂಶದಲ್ಲಿ, ದೇವರುಗಳು ಸರಿ ಮತ್ತು ತಪ್ಪು ಎಂಬ ನೀತಿಯಲ್ಲಿ ಘರ್ಷಣೆಹೊಂದಿದ್ದರೆ, ಒಬ್ಬ ದೇವರಿಗೆ ವಿಧೇಯರಾಗುವ, ಬೇರೆ ದೇವರಿಗೆ ಅವಿಧೇಯರಾಗುವ ಸಂಕಷ್ಟವನ್ನು ಹೊಂದಿದೆ, ಇದು ಶಿಕ್ಷೆಯನ್ನು ಪಡೆಯುತ್ತದೆ. ನೈತಿಕತೆಯು ಸಂಬಂಧಿಕವಾಗಿರುತ್ತದೆ. ಒಂದು ದೇವತೆಯು ಒಳ್ಳೆಯದಾಗಿರುವದು ಅಸಮ್ಮತಿಯ ಮತ್ತು ಸಾರ್ವತ್ರಿಕ ಗ್ರಹಿಕೆಯಲ್ಲಿ ಅಗತ್ಯವಾಗಿ “ಒಳ್ಳೆಯದು” ಅಲ್ಲದೆ ಇರಬಹುದು. ಉದಾಹರಣೆಗೆ, ಒಂದು ಮಗುವನ್ನು ಕಾಳಿಗೆ ಬಲಿಕೊಡುವದು ಹಿಂದುತ್ವದ ಒಂದು ಭಾಗದಲ್ಲಿ ಮೆಚ್ಚುವಂತದ್ದಾಗಿರಬಹುದು, ಆದರೆ ಬೇರೆಯವರಿಗೆ ಖಂಡನೀಯವಾಗಿರಬಹುದು. ಆದರೆ ಖಂಡಿತವಾಗಿ ಮಗುವನ್ನು ಬಲಿಕೊಡುವದು ಖಂಡನೀಯವಾಗಿದೆ. ಕೆಲವು ಕಾರ್ಯಗಳು ಎಲ್ಲಾ ಕಡೆಗಳಿಂದ ಸರಿ ಎಂದು ಅಥವಾ ತಪ್ಪು ಎಂದು ತೋಚಬಹುದು.

ಏಕದೇವತೆಯು ಬಹುದೇವತೆಗಿಂತ ಹೆಚ್ಚು ಉತ್ತಮವೇನಲ್ಲ ಯಾಕೆಂದರೆ ಒಂದೇ ಒಂದು ಸಂಗತಿ – ಒಂದೇ ದೈವೀಕ ಸತ್ಯವೆಂದು ಅಂತಿಮವಾಗಿ ಹೇಳುತ್ತದೆ, ಹೀಗೆ ಅದು “ಒಳ್ಳೆಯದು” ಮತ್ತು “ಕೆಟ್ಟದ್ದು” ಇವುಗಳ ನಡುವೆ ಯಾವುದೇ ವ್ಯತ್ಯಾಸವನ್ನು ಉಂಟುಮಾಡುವದಿಲ್ಲ. ಒಂದುವೇಳೆ “ಒಳ್ಳೆಯದು” ಮತ್ತು “ಕೆಟ್ಟದ್ದು” ಎಂದು ನಿಜವಾಗಿ ವ್ಯತ್ಯಾಸವಿದ್ದರೆ, ಆಗ ಏಕ ಅದೃಷ್ಯ ಸತ್ಯತೆಯು ಇರುವದಿಲ್ಲ. ಏಕದೇವತಾ ತತ್ವವು ಅಂತಿಮವಾಗಿ “ಒಳ್ಳೆಯದು” ಮತ್ತು “ಕೆಟ್ಟದ್ದು” ಇವುಗಳ ನಡುವೆ ನೈತಿಕ ವ್ಯತ್ಯಾಸವನ್ನು ಉಂಟುಮಾಡುವದಿಲ್ಲ. ಒಳ್ಳೆಯದು ಮತ್ತು ಕೆಟ್ಟದ್ದು ಇವೆರಡೂ ಒಂದೇ ಸತ್ಯತೆಯಾಗಿ ಕೊನೆಗಾಣುವದಿಲ್ಲ. ಮತ್ತು “ಒಳ್ಳೆಯದು” ಮತ್ತು “ಕೆಟ್ಟದ್ದು” ಎಂಬ ವ್ಯತ್ಯಾಸವನ್ನು ಮಾಡಲು ಸಾಧ್ಯವಾದರೂ ಸಹ, ಕರ್ಮ ಎಂಬ ತತ್ವದಲ್ಲಿ ನೈತಿಕ ಸಂಗತಿಯ ವ್ಯತ್ಯಾಸವನ್ನು ನಿರರ್ಥಕಮಾಡುತ್ತದೆ. ಕರ್ಮ ಎಂಬುದು ಪ್ರಕೃತಿ ನಿಯಮವಾಗಿರುವ ಗುರುತ್ವ ಅಥವಾ ಜಡತ್ವದ ಹಾಗೆ ವೈಯಕ್ತಿಕವಲ್ಲದ ತತ್ವವಾಗಿದೆ. ಕರ್ಮವು ಪಾಪಮಯವಾದ ಆತ್ಮವನ್ನು ಕರೆಯುತ್ತಿರುವಾಗ, ನ್ಯಾಯತೀರ್ಪನ್ನು ತರುವಂತದ್ದು ದೈವೀಕ ತತ್ವವಲ್ಲ. ಆದರೆ ಅದು ಪ್ರಕೃತಿಯ ನಿರಾಕಾರವಾದ ಪ್ರತಿಕ್ರಿಯೆಯಾಗಿದೆ. ಆದರೆ ನೈತಿಕತೆಯು ವ್ಯಕ್ತಿತ್ವವನ್ನು ಕೋರುತ್ತದೆ, ಆ ವ್ಯಕ್ತಿತ್ವವನ್ನು ಕರ್ಮವು ಕೊಡಲು ಆಗುವದಿಲ್ಲ. ಉದಾಹರಣೆಗೆ, ಹೊಡೆಯಲು ಕೋಲನ್ನು ಉಪಯೋಗಿಸಿದಾಗ ನಾವು ಕೋಲನ್ನು ನಿಂದಿಸುವದಿಲ್ಲ. ಕೋಲು ಒಂದು ವಸ್ತುವಾಗಿದ್ದು ನೈತಿಕ ಸಾಮರ್ಥ್ಯ ಅಥವಾ ಕರ್ತವ್ಯವನ್ನು ಹೊಂದಿರುವದಿಲ್ಲ. ಅದಕ್ಕೆ ಬದಲಾಗಿ ನಾವು ದುರುಪಯೋಗದಿಂದ ಕೋಲನ್ನು ಉಪಯೋಗಿಸಿದ ವ್ಯಕ್ತಿಯನ್ನು ಆಪಾದಿಸುತ್ತದೆ. ಆ ವ್ಯಕ್ತಿಯು ನೈತಿಕ ಸಾಮರ್ಥ್ಯ ಅಥವಾ ಕರ್ತವ್ಯವನ್ನು ಹೊಂದಿರುವನು. ಹಾಗೆಯೇ, ಕರ್ಮವು ಕೇವಲ ನಿರಾಕಾರವಾದ ಸ್ವಭಾವವಾಗಿದ್ದರೆ, ಆಗ ಅದು ಅನೈತಿಕವಾಗಿದೆ (“ನೈತಿಕತೆ ಇಲ್ಲದ್ದು”) ಮತ್ತು ಇದು ನೈತಿಕತೆಗೆ ಸಾಕಷ್ಟು ಆಧಾರವಲ್ಲ.

ಕ್ರೈಸ್ತ ಏಕದೇವರ ತತ್ವವು ಹೇಗಾದರೂ, ತನ್ನ ನೀತಿಶಾಸ್ತ್ರವನ್ನು ದೇವರ ವ್ಯಕ್ತಿಯಲ್ಲಿ ಬೇರೂರಿದೆ. ದೇವರ ಸ್ವಭಾವವು ಒಳ್ಳೆಯದು, ಆದುದರಿಂದ, ಆತನಿಗೆ ಅನುಗುಣವಾದದ್ದು ಮತ್ತು ಆತನ ಚಿತ್ತವು ಒಳ್ಳೆಯದಾಗಿದೆ. ದೇವರನ್ನು ಮತ್ತು ಆತನ ಚಿತ್ತವನ್ನು ಬಿಟ್ಟುಹೋಗುವದು ಕೆಟ್ಟದಾಗಿದೆ. ಆದುದರಿಂದ, ನೈತಿಕತೆಗಾಗಿ ವೈಯಕ್ತಿಕ ಆಧಾರವನ್ನು ಕೊಡುವದರಿಂದ, ಒಳ್ಳೆಯದು ಮತ್ತು ಕೆಟ್ಟದ್ದನ್ನು ಕುರಿತು ವಸ್ತುನಿಷ್ಠ ಜ್ಞಾನವನ್ನು ಸಮರ್ಥಿಸಿಕೊಳ್ಳುವದರಿಂದ, ಏಕದೇವರು ನೀತಿಶಾಸ್ತ್ರಕ್ಕಾಗಿ ಸಂಪೂರ್ಣ ಆಧಾರವಾಗಿದ್ದಾನೆ.

ಐದನೆಯ ಪ್ರಶ್ನೆ ಹೀಗಿದೆ “ನೀವು ನಿಮ್ಮ ಪಾಪಕ್ಕಾಗಿ ಏನು ಮಾಡುತ್ತಿರಿ?” ಕ್ರೈಸ್ತ್ವವು ಈ ಸಮಸ್ಯೆಗೆ ಬಲವಾದ ಉತ್ತರವನ್ನು ಹೊಂದಿದೆ. ಭೌತಮತದಂತೆ ಹಿಂದುತ್ವವು ಪಾಪವನ್ನು ಕುರಿತು ಕನಿಷ್ಠ ಎರಡು ಕಲ್ಪನೆಗಳನ್ನು ಹೊಂದಿದೆ. ಕೆಲವೊಮ್ಮೆ ಪಾಪವನ್ನು ಮುಗ್ಧತೆ ಎಂದು ಅರ್ಥಮಾಡಿಕೊಳ್ಳಲಾಗುತ್ತದೆ. ನಿಜತ್ವವನ್ನು ಒಬ್ಬರು ನೋಡದೆ ಅಥವಾ ಅರ್ಥಮಾಡಿಕೊಳ್ಳದೆ ಇದ್ದರೆ ಅದು ಪಾಪವಾಗಿದೆ ಎಂದು ಹಿಂದುತ್ವವು ಅದನ್ನು ನಿರೂಪಿಸುತ್ತದೆ. ಆದರೆ ಇಲ್ಲಿ “ಪಾಪ” ಎಂದು ಹೆಸರಿಸಿರುವ ನೈತಿಕ ತಪ್ಪಿನ ಕಲ್ಪನೆಯು ಉಳಿದಿದೆ. ತಿಳಿದೇ ಯಾವುದಾದರು ತಪ್ಪನ್ನು ಮಾಡುವದು ಆತ್ಮೀಕ ಅಥವಾ ಪ್ರಾಪಂಚಿಕ ನಿಯಮವನ್ನು ಉಲ್ಲಂಘಿಸುವದು, ಅಥವಾ ಕೆಟ್ಟ ಕಾರ್ಯಗಳನ್ನು ಆಶಿಸುವದು, ಇವು ಪಾಪಗಳಾಗಿವೆ. ಆದರೆ ಪಾಪದ ನೈತಿಕ ನಿರೂಪಣೆಯು ಒಂದು ವಿಧವಾದ ನೈತಿಕ ತಪ್ಪನ್ನು ಸೂಚಿಸುತ್ತದೆ, ಇದು ನಿಜವಾಗಿ ಪ್ರಾಯಶ್ಚಿತವನ್ನು ಕೋರುತ್ತದೆ. ಎಲ್ಲಿಂದ ಪ್ರಾಯಶ್ಚಿತ್ತವು ಉದ್ಭವಿಸುತ್ತದೆ? ಪ್ರಾಯಶ್ಚಿತ್ತವು ಕರ್ಮದ ತತ್ವಕ್ಕೆ ಬದ್ಧವಾಗುತ್ತದೋ? ಕರ್ಮವು ವೈಯಕ್ತಿಕವಲ್ಲದ ಮತ್ತು ನೈತಿಕವಲ್ಲದ್ದು. ಒಬ್ಬನು “ಸಮತೋಲನಕ್ಕಾಗಿ” ಒಳ್ಳೆಯ ಕಾರ್ಯಗಳನ್ನು ಮಾಡಬಹುದು, ಆದರೆ ಒಬ್ಬನು ಎಂದಿಗೂ ಪಾಪವನ್ನು ಬಹಿರಂಗಪಡಿಸಲು ಆಗುವದಿಲ್ಲ. ನೈತಿಕ ತಪ್ಪು ಸಹ ನೈತಿಕತೆ ಎಂದು ಕರ್ಮವು ಸಂದರ್ಭವನ್ನು ಒದಗಿಸುವದಿಲ್ಲ. ನಾವು ಗುಪ್ತವಾಗಿ ಪಾಪಮಾಡಿದರೆ ಯಾರನ್ನು ನೋಯಿಸಿದ್ದೇವೆ? ಕರ್ಮವು ಒಂದು ರೀತಿ ಅಥವಾ ಬೇರೊಂದು ರೀತಿಯನ್ನು ಕುರಿತು ಚಿಂತಿಸುವದಿಲ್ಲ, ಯಾಕೆಂದರೆ ಕರ್ಮವು ವ್ಯಕ್ತಿಯಲ್ಲ. ಉದಾಹರಣೆಗೆ, ಒಬ್ಬನು ಮತ್ತೊಬ್ಬನ ಮಗನನ್ನು ಕೊಂದನು ಅಂದುಕೊಳ್ಳೋಣ. ಅವನು ನೊಂದ ವ್ಯಕ್ತಿಗೆ ಹಣ, ಆಸ್ತಿ ಅಥವಾ ತನ್ನ ಸ್ವಂತ ಮಗನನ್ನು ಕೊಡಬಹುದು, ಆದರೆ ಅವನು ಕೊಂದ ಆ ಯೌವನಸ್ಥನನ್ನು ಹಿಂದಿರುಗಿಸಿ ತರಲು ಆಗುವದಿಲ್ಲ. ಈ ಪಾಪಕ್ಕಾಗಿ ಯಾವುದೇ ಮೊತ್ತದ ಪರಿಹಾರವನ್ನು ಸರಿಹೊಂದಿಸಲು ಆಗುವದಿಲ್ಲ. ಪ್ರಾಯಶ್ಚಿತ್ತವು ಪ್ರಾರ್ಥನೆ ಅಥವಾ ಭಕ್ತಿಯ ಮೂಲಕ ಶಿವ ಅಥವಾ ವಿಷ್ಣುವಿಗೆ ಬರಬಹುದೋ? ಈ ವ್ಯಕ್ತಿಗಳು ಕ್ಷಮಾಪಣೆಯನ್ನು ಒದಗಿಸಿದರೂ ಸಹ, ಪಾಪವು ಇನ್ನೂ ಸಾಲವನ್ನು ತೀರಿಸದೆ ಇದಂತೆ ಕಾಣುತ್ತದೆ. ಅವುಗಳನ್ನು ಕ್ಷಮಿಸಬಹುದಾದವು, ದೊಡ್ಡ ಸಂಗತಿಯಲ್ಲ ಎಂದು ಅವರು ಪಾಪವನ್ನು ಕ್ಷಮಿಸುವರು ಮತ್ತು ಆನಂದದ ಬಾಗಿಲುಗಳ ಮೂಲಕ ಜನರನ್ನು ತೂಗಾಡಿಸುತ್ತವೆ.

ಕ್ರೈಸ್ತತ್ವವು ಹೇಗಾದರೂ, ಏಕ, ಅಂತಿಮ, ಮತ್ತು ವೈಯಕ್ತಿಕ ದೇವರಿಗೆ ವಿರುದ್ಧವಾಗಿ ಪಾಪವನ್ನು ನೈತಿಕ ತಪ್ಪೆಂದು ಪರಿಗಣಿಸುತ್ತದೆ. ಆದಾಮನ ಸಮಯದಿಂದ ಮಾನವರು ಪಾಪಮಯ ಜೀವಿಗಳಾಗಿದ್ದಾರೆ. ಪಾಪವು ನಿಜ, ಮತ್ತು ಅದು ಮನುಷ್ಯ ಮತ್ತು ಆನಂದದ ನಡುವೆ ಅಪರಿಮಿತಿ ಅಂತರವನ್ನು ವ್ಯವಸ್ಥಿತಗೊಳಿಸುತ್ತದೆ. ಪಾಪವು ನ್ಯಾಯವನ್ನು ಕೊರುತ್ತದೆ. ಆದರೂ ಸಮಾನ ಅಥವಾ ಹೆಚ್ಚಿನ ಸಂಖ್ಯೆಯ ಒಳ್ಳೆಯ ಕಾರ್ಯಗಳಿಂದ ಇದನ್ನು “ಸಮತೋಲನ” ಮಾಡಲು ಆಗುವದಿಲ್ಲ. ಒಬ್ಬನು ಕೆಟ್ಟಕಾರ್ಯಗಳಿಗಿಂತ ಹೆಚ್ಚಾಗಿ ಹತ್ತು ಸಾರಿ ಹೆಚ್ಚು ಒಳ್ಳೆಯ ಕಾರ್ಯಗಳನ್ನು ಮಾಡಿದ್ದರೆ, ಆಗ ಆ ವ್ಯಕ್ತಿಯು ಇನ್ನೂ ಅವನ ಅಥವಾ ಅವಳ ಮನಸಾಕ್ಷಿಯಲ್ಲಿ ಕೆಟ್ಟತನವನ್ನು ಹೊಂದಿರುವನು. ಈ ಉಳಿದ ಕೆಟ್ಟಕಾರ್ಯಗಳಿಗೆ ಏನಾಗುತ್ತದೆ? ಅವು ಮೊದಲ ಸ್ಥಾನದಲ್ಲಿ ದೊಡ್ಡ ವಿಷಯವಲ್ಲವೆಂದು ಪರಿಗಣಿಸಿ ಕೇವಲ ಅವುಗಳನ್ನು ಕ್ಷಮಿಸಲಾಗಿದೆಯೋ? ಅವುಗಳನ್ನು ಆನಂದಕ್ಕೆ ಅನುಮತಿಸಲಾಗಿದೆಯಾ? ಅವು ಕೇವಲ; ದೃಷ್ಟಾಂತಗಳಾಗಿವೆಯಾ, ಹೀಗೆ ಯಾವುದೇ ಸಮಸ್ಯೆಯನ್ನು ಬಿಟ್ಟುಬಿಡುವುದೋ? ಇವುಗಳಲ್ಲಿ ಒಂದೂ ಸರಿಹೊಂದುವ ಆಯ್ಕೆಯಲ್ಲ. ದೃಷ್ಟಾಂತವನ್ನು ಕುರಿತು, ಪಾಪವನ್ನು ದೃಷ್ಟಾಂತವಾಗಿ ವಿವರಿಸಲು ನಮಗೆ ಹೆಚ್ಚು ವಾಸ್ತವವಾಗಿದೆ. ಪಾಪವನ್ನು ಕುರಿತು, ನಮ್ಮಷ್ಟಕ್ಕೆ ನಾವು ಪ್ರಾಮಾಣಿಕರಾಗಿದ್ದರೆ, ನಾವು ಪಾಪ ಮಾಡಿದ್ದೇವೆಂದು ನಾವೆಲ್ಲರೂ ತಿಳಿದಿದ್ದೇವೆ. ಕ್ಷಮಾಪಣೆಯನ್ನು ಕುರಿತು, ಪಾಪವನ್ನು ಯಾವುದೇ ಕ್ರಯವಿಲ್ಲದೆ ಸುಮ್ಮನೆ ಕ್ಷಮಿಸುವದು, ಪಾಪವು ಹೆಚ್ಚು ಪರಿಣಾಮವನ್ನು ಹೊಂದಿಲ್ಲವೆಂದು ಪರಿಗಣಿಸಿದಂತೆ ಆಗುತ್ತದೆ. ಇದು ಸುಳ್ಳೆಂದು ನಾವು ತಿಳಿದಿದ್ದೇವೆ. ಆನಂದವನ್ನು ಕುರಿತು, ಒಂದುವೇಳೆ ಪಾಪವು ಕಳ್ಳಸಾಗಣೆಯಾಗುತ್ತಲೇ ಇದ್ದರೆ ಆನಂದವು ಹೆಚ್ಚು ಒಳ್ಳೆಯದಾಗಿರುವದಿಲ್ಲ. ಕರ್ಮದ ಮಾಪನವು ನಮ್ಮ ಹೃದಯದಲ್ಲಿ ಪಾಪವನ್ನು ಮತ್ತು ನಾವು ಸರಿ ಅಥವಾ ತಪ್ಪು ಎಂಬ ವೈಯಕ್ತಿಕ ನೀತಿಯನ್ನು ಉಲ್ಲಂಘಿಸಿದ್ದೇವೆಂದು ಗುಟ್ಟಿನಲ್ಲಿ ಸಂಶಯವನ್ನು ಬಿಟ್ಟಿರುತ್ತದೆ. ಹಾಗೂ ಆನಂದವು ನಮ್ಮನ್ನು ಸಹಿಸಿಕೊಳ್ಳಲು ಆಗುವದಿಲ್ಲ ಅಥವಾ ಅದು ಪರಿಪೂರ್ಣವಾಗಿರುವದನ್ನು ನಿಲ್ಲಿಸಬೇಕು ಇದರಿಂದ ನಾವು ಒಳಗೆ ಬರಬಹುದು.

ಹೇಗಾದರೂ, ಕ್ರೈಸ್ತತ್ವದಲ್ಲಿ ಎಲ್ಲಾ ಪಾಪಗಳು ಶಿಕ್ಷಿಸಲ್ಪಡುತ್ತವೆ, ಆದರೆ ಶಿಕ್ಷೆಯು ಈಗಾಗಲೇ ಶಿಲುಬೆಯ ಮೇಲೆ ಕ್ರಿಸ್ತನ ವೈಯಕ್ತಿಕ ಬಲಿಯ ಮೂಲಕ ತೃಪ್ತಿಪಡಿಸಲಾಗಿದೆ. ದೇವರು ಮನುಷ್ಯನಾದನು, ಪರಿಪೂರ್ಣ ಜೀವನವನ್ನು ನಡೆಸಿದನು, ಮತ್ತು ನಾವು ಹೊಂದಬೇಕಾಗಿದ್ದ ಮರಣವನ್ನು ಆತನು ಹೊಂದಿದನು. ನಮ್ಮ ಸ್ಥಳದಲ್ಲಿ, ನಮ್ಮ ಪರವಾಗಿ ಆತನು ಕ್ರೂಜೆಗೆ ಹಾಕಲ್ಪಟ್ಟನು, ಮತ್ತು ನಮ್ಮ ಪಾಪಗಳಿಗಾಗಿ ಪ್ರಾಯಶ್ಚಿತ್ತವಾದನು. ಆತನನ್ನು ಮರಣವು ಜಯಿಸಲು ಆಗುವದಿಲ್ಲವೆಂದು ಸಾಭೀತುಪಡಿಸಲು ಆತನು ಪುನರುತ್ಥಾನಗೊಂಡನು. ಇದಲ್ಲದೆ ಕರ್ತನು ಮತ್ತು ರಕ್ಷಕನೆಂದು ಆತನಲ್ಲಿ ನಂಬಿಕೆಯಿಟ್ಟಿರುವ ಎಲ್ಲರಿಗಾಗಿ ಆತನು ಅದೇ ಪುನರುತ್ಥಾನ ಹಾಗೂ ನಿತ್ಯಜೀವವನ್ನು ವಾಗ್ಧಾನಮಾಡುತ್ತಿದ್ದಾನೆ. (ರೋಮಾ 3:10,23, 6:23; 8:12; 10:9-10; ಎಫೆಸ 2:8-9; ಫಿಲಿಪ್ಪಿ 3:21).

ಅಂತಿಮವಾಗಿ, ಕ್ರೈಸ್ತತ್ವದಲ್ಲಿ ನಾವು ರಕ್ಷಿಸಲ್ಪಟ್ಟಿದ್ದೇವೆಂದು ತಿಳಿದಿದ್ದೇವೆ. ನಾವು ಯಾವುದಾದರು ಕ್ಷಣಿಕ ಅನುಭವದ ಮೇಲೆ ಆತುಕೊಳ್ಳಬಾರದು, ಅಥವಾ ನಮ್ಮ ಸ್ವಂತ ಒಳ್ಳೆಯ ಕಾರ್ಯಗಳು ಅಥವಾ ಆಸಕ್ತಿಯ ಧ್ಯಾನದ ಮೇಲೆ ಆತುಕೊಳ್ಳಬಾರದು, ಅಥವಾ ನಾವು “ಅಸ್ತಿತ್ವದಲ್ಲಿ ಇದ್ದಾರೆಂದು ನಂಬಿಕೆಯಿಡಲು” ಪ್ರಯತ್ನಿ ಸುಳ್ಳು ದೇವರಲ್ಲಿ ನಮ್ಮ ನಂಬಿಕೆಯನ್ನು ಹಾಕಬಾರದು. ನಾವು ಜೀವಿಸುವ ಮತ್ತು ನಿಜವಾದ ದೇವರನ್ನು ಹೊಂದಿದ್ದೇವೆ, ಚಾರಿತ್ರಿಕವಾಗಿ ಆಧಾರವಾಗಿರುವ ನಂಬಿಕೆ, ನೆಲೆಗೊಳ್ಳುವ ಮತ್ತು ಪರೀಕ್ಷಿಸಬಹುದಾದ ದೇವರ ಪ್ರಕಟನೆ (ವಾಕ್ಯ), ನೈತಿಕ ಜೀವನಕ್ಕಾಗಿ ದೈವಶಾಸ್ತ್ರೀಕವಾಗಿ ತೃಪ್ತಗೊಳಿಸುವ ಆಧಾರ, ಮತ್ತು ದೇವರೊಂದಿಗೆ ಪರಲೋಕದಲ್ಲಿ ಖಾತರಿಪಡಿಸಿದ ಮನೆಯನ್ನು ನಾವು ಹೊಂದಿದ್ದೇವೆ.

ಹಾಗಾದರೆ, ಇದು ನಿಮಗೆ ಯಾವ ಅರ್ಥವನ್ನು ಕೊಡುತ್ತದೆ? ಯೇಸುವೇ ಅಂತಿಮ ಸತ್ಯತೆಯಾಗಿದ್ದಾನೆ! ನಮ್ಮ ಪಾಪಗಳಿಗಾಗಿ ಯೇಸು ಪರಿಪೂರ್ಣವಾದ ಯಜ್ಞವಾಗಿದ್ದನು. ಒಂದುವೇಳೆ ನಾವು ಸುಮ್ಮನೆ ಆತನ ವರವನ್ನು ಅಂಗೀಕರಿಸಿ (ಯೋಹಾನ 1:12), ಆತನ ಸ್ನೇಹಿತರಾದ - ನಮಗಾಗಿ ತನ್ನ ಪ್ರಾಣವನ್ನೇ ಕೊಟ್ಟ ಯೇಸುವನ್ನು ರಕ್ಷಕನೆಂದು ನಂಬಿದರೆ, ದೇವರು ನಮ್ಮೆಲ್ಲರಿಗೂ ಕ್ಷಮಾಪಣೆ ಮತ್ತು ರಕ್ಷಣೆಯನ್ನು ಕೊಡುವನು. ನೀವು ಯೇಸು ಒಬ್ಬನೇ ರಕ್ಷಕನೆಂದು ಆತನಲ್ಲಿ ಭರವಸೆಯಿಟ್ಟರೆ, ನೀವು ಪರಲೋಕದಲ್ಲಿ ಶಾಶ್ವತ ಆನಂದದ ಸಂಪೂರ್ಣ ನಿಶ್ಚಯವನ್ನು ಹೊಂದಿರುವಿರಿ. ದೇವರು ನಿಮ್ಮ ಪಾಪಗಳನ್ನು ಕ್ಷಮಿಸುವನು, ನಿಮ್ಮ ಆತ್ಮವನ್ನು ಶುದ್ಧೀಕರಿಸುವನು, ನಿಮ್ಮ ಆತ್ಮವನ್ನು ನೂತನಪಡಿಸುವನು ಮತ್ತು ನಿಮಗೆ ಈ ಲೋಕದಲ್ಲಿ ಸಮೃದ್ಧಿಯಾದ ಜೀವನವನ್ನು ಮತ್ತು ಮುಂದಿನ ಲೋಕದಲ್ಲಿ ನಿತ್ಯ ಆನಂದವನ್ನು ಕೊಡುವನು. ನಾವು ಇಂಥ ಮೂಲ್ಯವಾದ ವರವನ್ನು ತಿರಸ್ಕರಿಸಲು ಹೇಗೆ ಸಾಧ್ಯ? ನಮಗಾಗಿ ತನ್ನನ್ನೇ ಬಲಿಕೊಡಲು ಸಾಕಷ್ಟು ಪ್ರೀತಿಸಿದ ದೇವರಿಗೆ ನಮ್ಮ ಬೆನ್ನು ತೋರಿಸುವದು ಹೇಗೆ?

ನೀವು ನಂಬುವದನ್ನು ಕುರಿತು ನೀವು ಖಚಿತರಲ್ಲದಿದ್ದರೆ, ನೀವು ಈ ಮುಂದಿನ ಪ್ರಾರ್ಥನೆಯನ್ನು ಮಾಡಬೇಕೆಂದು ನಾನು ನಿಮ್ಮನ್ನು ಆಮಂತ್ರಿಸುತ್ತೇನೆ: “ದೇವರೇ, ಸತ್ಯವನ್ನು ತಿಳಿದುಕೊಳ್ಳಲು ನನಗೆ ಸಹಾಯಮಾಡು. ಯಾವುದು ತಪ್ಪೆಂದು ವಿವೇಚಿಸಲು ನನಗೆ ಸಹಾಯಮಾಡು. ರಕ್ಷಣೆಗೆ ಸರಿಯಾದ ಮಾರ್ಗ ಯಾವುದೆಂದು ತಿಳಿದುಕೊಳ್ಳಲು ನನಗೆ ಸಹಾಯಮಾಡು.” ಇಂಥ ಪ್ರಾರ್ಥನೆಯನ್ನು ದೇವರು ಯಾವಾಗಲೂ ಗೌರವಿಸುವನು.

ನೀವು ಯೇಸುವನ್ನು ನಿಮ್ಮ ರಕ್ಷಕನೆಂದು ಅಂಗೀಕರಿಸಲು ನೀವು ಬಯಸಿದರೆ, ಬಾಯಿಂದ ಅಥವಾ ಮೌನವಾಗಿ ದೇವರೊಂದಿಗೆ ಮಾತನಾಡಿರಿ, ನೀವು ಯೇಸುವಿನ ಮೂಲಕ ರಕ್ಷಣೆಯ ವರವನ್ನು ಅಂಗೀಕರಿಸುವಿರೆಂದು ಆತನಿಗೆ ಹೇಳಿರಿ. ನೀವು ಪ್ರಾರ್ಥನೆ ಮಾಡಬೇಕೆಂದು ಬಯಸಿದರೆ, ಇಲ್ಲಿ ಒಂದು ಮಾದರಿ ಉಂಟು: “ದೇವರೇ, ನನಗಾಗಿ ನೀನು ತೋರಿಸಿದ ಪ್ರೀತಿಗಾಗಿ ವಂದನೆ. ನನಗಾಗಿ ನಿನ್ನನೇ ಬಲಿಯಾಗಿ ಕೊಟ್ಟದಕ್ಕಾಗಿ ನಿನಗೆ ವಂದನೆ. ನನಗೆ ಕೊಟ್ಟ ಕ್ಷಮಾಪಣೆ ಮತ್ತು ರಕ್ಷಣೆಗಾಗಿ ನಿನಗೆ ವಂದನೆ. ಯೇಸುವಿನ ಮೂಲಕ ರಕ್ಷಣೆಯ ವರವನ್ನು ಅಂಗೀಕರಿಸುತ್ತೇನೆ. ಯೇಸುವನ್ನು ನನ್ನ ಸ್ವಂತ ರಕ್ಷಕನೆಂದು ಸ್ವೀಕರಿಸುತ್ತೇನೆ. ಆಮೇನ್!”

ನೀವು ಇಲ್ಲಿ ಓದಿದವುಗಳ ನಿಮಿತ್ತ ಕ್ರಿಸ್ತನಿಗಾಗಿ ತೀರ್ಮಾನ ಮಾಡಿಕೊಂಡಿದ್ದೀರಾ? ಹಾಗಾದರೆ, “ನಾನು ಇಂದು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿರುವ ಬಟ್ಟನ್ ಮೇಲೆ ಕ್ಲಿಕ್ ಮಾಡಿರಿ.
Englishಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ

ನಾನು ಹಿಂದು ಆಗಿದ್ದೇನೆ, ನಾನು ಕ್ರೈಸ್ತನಾಗಲು ಯಾಕೆ ಪರಿಗಣಿಸಬೇಕು?
Facebook icon Twitter icon Pinterest icon Email icon
© Copyright Got Questions Ministries