ನಿತ್ಯ ರಕ್ಷಣೆಯು ಸತ್ಯವೇದಾನುಸಾರವಾದದ್ದೋ?


ಪ್ರಶ್ನೆ: ನಿತ್ಯ ರಕ್ಷಣೆಯು ಸತ್ಯವೇದಾನುಸಾರವಾದದ್ದೋ?

ಉತ್ತರ:
ಜನರು ಯೇಸುವನ್ನು ತಮ್ಮ ರಕ್ಷಕನೆಂದು ತಿಳಿದುಕೊಳ್ಳುವಾಗ, ಅವರು ದೇವರೊಂದಿಗೆ ನಿತ್ಯ ರಕ್ಷಣೆಯನ್ನು ಖಾತರಿಪಡಿಸುವ ಸಂಬಂಧದೊಳಗೆ ಅವರು ತರಲ್ಪಡುತ್ತಾರೆ. ಯೂದ 24 ಹೀಗೆ ಹೇಳುತ್ತದೆ, “ಎಡವಿಬೀಳದಂತೆ ನಿಮ್ಮನ್ನು ಕಾಪಾಡುವದಕ್ಕೂ ತನ್ನ ಪ್ರಭಾವದ ಸಮಕ್ಷಮದಲ್ಲಿ ನಿಮ್ಮನ್ನು ನಿರ್ದೋಷಿಯನ್ನಾಗಿ ಹರ್ಷದೊಡನೆ ನಿಲ್ಲಿಸುವದಕ್ಕೂ ಶಕ್ತನಾಗಿದ್ದಾನೆ.” ವಿಶ್ವಾಸಿಯು ಎಡವಿಬೀಳದಂತೆ ಕಾಪಾಡಲು ದೇವರ ಶಕ್ತಿಯು ಸಾಧ್ಯ ಮಾಡುತ್ತದೆ. ಆತನ ಮಹಿಮೆಯುಳ್ಳ ಪ್ರಭಾವದ ಸಮಕ್ಷಮದಲ್ಲಿ ನಮ್ಮನ್ನು ತರುವುದು, ನಾವಲ್ಲ, ಇದು ಆತನಿಗೆ ಸೇರಿದ್ದಾಗಿದೆ. ನಮ್ಮ ನಿತ್ಯ ರಕ್ಷಣೆಯು ದೇವರು ನಮ್ಮನ್ನು ಕಾಪಾಡುವದರ ಪರಿಣಾಮವಾಗಿದೆ, ಆದರೆ ನಾವು ನಮ್ಮ ರಕ್ಷಣೆಯನ್ನು ಕಾಪಾಡಿಕೊಳ್ಳುವುದರಿಂದಲ್ಲ.

ಕರ್ತನಾದ ಯೇಸು ಕ್ರಿಸ್ತನು ಹೀಗೆ ಹೇಳಿದನು, “ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ; ಅವು ಎಂದಿಗೂ ನಾಶವಾಗುವದೇ ಇಲ್ಲ; ಅವುಗಳನ್ನು ಯಾರೂ ನನ್ನ ಕೈಯೊಳಗಿಂದ ಕಸಕೊಳ್ಳರು. ನನ್ನ ತಂದೆಯು ನನಗೆ ಕೊಟ್ಟದ್ದು ಎಲ್ಲಾದಕ್ಕಿಂತ ದೊಡ್ಡದು; ಅದನ್ನು ತಂದೆಯ ಕೈಯೊಳಗಿಂದ ಯಾರೂ ಕಸಕೊಳ್ಳಲಾರರು.” (ಯೋಹಾನ 10:28-29). ತಂದೆ ಮತ್ತು ಯೇಸು ಇಬ್ಬರು ನಮ್ಮನ್ನು ತಮ್ಮ ಕೈಯಲ್ಲಿ ಭದ್ರವಾಗಿ ಹಿಡಿದಿದ್ದಾರೆ. ತಂದೆ ಮತ್ತು ಮಗ ಇಬ್ಬರ ಹಿಡಿತದಿಂದ ನಮ್ಮನ್ನು ಬೇರೆ ಮಾಡಲು ಯಾರಿಂದ ಸಾಧ್ಯವಾಗುತ್ತದೆ?

ವಿಶ್ವಾಸಿಗಳು “ವಿಮೋಚನೆಯ ದಿನಕ್ಕಾಗಿ ಮುದ್ರಿಸಲ್ಪಟ್ಟಿದ್ದಾರೆ” ಎಂದು ಎಫೆಸ 4:30 ಹೇಳುತ್ತದೆ. ಒಂದು ವೇಳೆ ವಿಶ್ವಾಸಿಗಳಿಗೆ ನಿತ್ಯ ರಕ್ಷಣೆ ಇಲ್ಲದೆ ಇದ್ದರೆ, ವಿಮೋಚನೆಯ ದಿನಕ್ಕಾಗಿ ಮುದ್ರೆಯು ನಿಜವಾಗುತ್ತಿರಲಿಲ್ಲ, ಆದರೆ ಪಾಪ, ಅವಿಶ್ವಾಸ ಅಥವಾ ಮತಭ್ರಷ್ಟ ದಿನದ ವರೆಗೆ ಮಾತ್ರ ಇರುತ್ತದೆ. ಯಾರಾರು ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವರೋ ಅವರು “ನಿತ್ಯ ಜೀವವನ್ನು ಹೊಂದುತ್ತಾರೆ” ಎಂದು ಯೋಹಾನ 3:15-16 ನಮಗೆ ಹೇಳುತ್ತದೆ. ಒಬ್ಬ ವ್ಯಕ್ತಿಗೆ ನಿತ್ಯಜೀವ ವಾಗ್ದಾನ ಮಾಡಲ್ಪಡಬೇಕಾದರೆ, ಆದರೆ ನಂತರ ಅದು ತೆಗೆದುಕೊಳ್ಳಲ್ಪಟ್ಟರೆ, ಅದು ಆರಂಭಿಸಲು ಎಂದಿಗೂ “ನಿತ್ಯ”ವಲ್ಲ. ಒಂದು ವೇಳೆ ನಿತ್ಯ ರಕ್ಷಣೆಯು ನಿಜವಲ್ಲದಿದ್ದರೆ, ಸತ್ಯವೇದದಲ್ಲಿರುವ ನಿತ್ಯಜೀವದ ವಾಗ್ದಾನಗಳು ತಪ್ಪಾಗಿರುತ್ತಿದ್ದವು.

ನಿತ್ಯ ರಕ್ಷಣೆಗೆ ಅತ್ಯಂತ ಶಕ್ತಿಯುತವಾದ ವಾದವೆಂದರೆ ಅದು ರೋಮಾ 8:38-39 ರಲ್ಲಿದೆ, “ಹೇಗಂದರೆ ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ದುರಾತ್ಮಗಳಾಗಲಿ ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಮಹತ್ವಗಳಾಗಲಿ ಮೇಲಣ ಲೋಕವಾಗಲಿ ಕೆಳಗಣ ಲೋಕವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯವುಂಟು.” ನಮ್ಮ ನಿತ್ಯ ರಕ್ಷಣೆಯು ದೇವರು ವಿಮೋಚಿಸಿದವರಿಗೆ ಇರುವ ಆತನ ಪ್ರೀತಿಯ ಮೇಲೆ ಆಧಾರಗೊಂಡಿರುತ್ತದೆ. ನಮ್ಮ ನಿತ್ಯ ರಕ್ಷಣೆಯು ಕ್ರಿಸ್ತನಿಂದ ಕೊಂಡುಕೊಳ್ಳಲ್ಪಟ್ಟಿದೆ, ತಂದೆಯಿಂದ ವಾಗ್ದಾನ ಮಾಡಲ್ಪಟ್ಟಿದೆ ಮತ್ತು ಪವಿತ್ರಾತ್ಮನಿಂದ ಮುದ್ರಿಸಲ್ಪಟ್ಟಿದೆ.

English
ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ
ನಿತ್ಯ ರಕ್ಷಣೆಯು ಸತ್ಯವೇದಾನುಸಾರವಾದದ್ದೋ?