ಕ್ರೈಸ್ತರು ಹಳೆಯ ಒಡಂಬಡಿಕೆಯ ಧರ್ಮಶಾಸ್ತ್ರಕ್ಕೆ ವಿಧೇಯರಾಗಬೇಕೋ?


ಪ್ರಶ್ನೆ: ಕ್ರೈಸ್ತರು ಹಳೆಯ ಒಡಂಬಡಿಕೆಯ ಧರ್ಮಶಾಸ್ತ್ರಕ್ಕೆ ವಿಧೇಯರಾಗಬೇಕೋ?

ಉತ್ತರ:
ಈ ವಿಷಯವನ್ನು ಅರ್ಥಮಾಡಿಕೊಳ್ಳಲು ಮುಖ್ಯ ಅಂಶವೆಂದರೆ ಹಳೆಯ ಒಡಂಬಡಿಕೆಯ ಧರ್ಮಶಾಸ್ತ್ರವು ಇಸ್ರಾಯೇಲ್ ಜನಾಂಗದವರಿಗೆ ಕೊಡಲ್ಪಟ್ಟಿತ್ತು, ಕ್ರೈಸ್ತರಿಗಲ್ಲ. ದೇವರಿಗೆ ಹೇಗೆ ವಿಧೇಯರಾಗಬೇಕು ಮತ್ತು ಮೆಚ್ಚಿಸಬೇಕೆಂದು ಕೆಲವು ನಿಬಂಧನೆಗಳು ಇಸ್ರಾಯೇಲ್ಯರಿಗೆ ಪ್ರಕಟಿಸಲು ಆಗಿದ್ದವು (ಉದಾಹರಣೆಗೆ, ದಶಾಜ್ಞೆಗಳು). ದೇವರನ್ನು ಹೇಗೆ ಆರಾಧಿಸಬೇಕು ಮತ್ತು ಪಾಪಕ್ಕಾಗಿ ಸಮಾಧಾನ ಯಜ್ಞವನ್ನರ್ಪಿಸಲು ಇಸ್ರಾಯೇಲ್ಯರಿಗೆ ತೋರಿಸಲು ಕೆಲವು ನಿಬಂಧನೆಗಳು ಇದ್ದವು (ಯಜ್ಞವನ್ನರ್ಪಿಸುವ ಕ್ರಮಪದ್ಧತಿ). ಇಸ್ರಾಯೇಲ್ಯರನ್ನು ಬೇರೆ ಜನಾಂಗಗಳಿಂದ ವ್ಯತ್ಯಾಸ ಮಾಡಲು ಕೆಲವು ನಿಬಂಧನೆಗಳು ಉದ್ದೇಶಿಸಲ್ಪಟ್ಟಿದ್ದವು (ಆಹಾರ ಮತ್ತು ವಸ್ತ್ರಗಳ ನಿಯಮಗಳು). ಹಳೆಯ ಒಡಂಬಡಿಕೆಯ ಯಾವುದೇ ಕಟ್ಟಳೆಗಳು ಇಂದಿನ ಕ್ರೈಸ್ತರ ಮೇಲೆ ನಿರ್ಬಂಧವಲ್ಲ. ಯೇಸು ಶಿಲುಬೆಯ ಮೇಲೆ ಸತ್ತಾಗ, ಆತನು ಹಳೆಯ ಒಡಂಬಡಿಕೆಯ ಧರ್ಮಶಾಸ್ತ್ರಕ್ಕೆ ಕೊನೆಹಾಕಿದನು (ರೋಮಾ 10:4; ಗಲಾತ್ಯ 3:23-25; ಎಫೆಸ 2:15).

ಹಳೆಯ ಒಡಂಬಡಿಕೆಯ ಧರ್ಮಶಾಸ್ತ್ರದ ಸ್ಥಳದಲ್ಲಿ, ನಾವು ಕ್ರಿಸ್ತನ ಧರ್ಮಶಾಸ್ತ್ರದ ಅಧಿನದಲ್ಲಿದ್ದೇವೆ (ಗಲಾತ್ಯ 6:2), ಅಂದರೆ “ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು …… ಮತ್ತು ನಿನ್ನ ನೆರೆಯವರನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ” (ಮತ್ತಾಯ 22:37-39). ಒಂದು ವೇಳೆ ನಾವು ಈ ಎರಡು ಆಜ್ಞೆಗಳಿಗೆ ವಿಧೇಯರಾದರೆ, ನಾವು ಕ್ರಿಸ್ತನು ನಮ್ಮಿಂದ ಕೋರುವ ಎಲ್ಲವನ್ನೂ ನೆರವೇರಿಸುತ್ತೇವೆ: “ಈ ಎರಡು ಆಜ್ಞೆಗಳು ಎಲ್ಲಾ ಧರ್ಮಶಾಸ್ತ್ರಕ್ಕೂ ಪ್ರವಾದನಾ ಗ್ರಂಥಕ್ಕೂ ಆಧಾರವಾಗಿವೆ ಎಂದು ಹೇಳಿದನು” (ಮತ್ತಾಯ 22:40). ಈಗ, ಇದರ ಅರ್ಥ ಹಳೆಯ ಒಡಂಬಡಿಕೆಯ ಧರ್ಮಶಾಸ್ತ್ರವು ಸಂಬಂಧಪಡುವುದಿಲ್ಲ ಎಂಬುದಾಗಿಯಲ್ಲ. ಹಳೆಯ ಒಡಂಬಡಿಕೆಯ ಧರ್ಮಶಾಸ್ತ್ರದ ಅನೇಕ ಆಜ್ಞೆಗಳು “ದೇವರನ್ನು ಪ್ರೀತಿಸುವದು” ಮತ್ತು “ನಿಮ್ಮ ನೆರೆಯವರನ್ನು ಪ್ರೀತಿಸುವದು” ಎಂಬ ವಿಭಾಗಗಳಿಗೆ ಸೇರುತ್ತದೆ. ಹಳೆಯ ಒಡಂಬಡಿಕೆಯ ಧರ್ಮಶಾಸ್ತ್ರವು ದೇವರನ್ನು ಪ್ರೀತಿಸುವುದು ಹೇಗೆಂದು ತಿಳಿಯಲು ಮತ್ತು ನಿಮ್ಮ ನೆರೆಯವರನ್ನು ಪ್ರೀತಿಸುವುದು ಏನಾಗುತ್ತದೆ ಎಂದು ತಿಳಿದುಕೊಳ್ಳಲು ಒಳ್ಳೆಯ ಮಾರ್ಗದರ್ಶಿಯಾಗಿರಬಹುದು. ಅದೇ ಸಮಯದಲ್ಲಿ, ಹಳೆಯ ಒಡಂಬಡಿಕೆಯ ಧರ್ಮಶಾಸ್ತ್ರವು ಇಂದಿನ ಕ್ರೈಸ್ತರಿಗೆ ಅನ್ವಯಿಸುತ್ತದೆ ಎಂದು ಹೇಳುವುದು ಸರಿಯಲ್ಲ. ಹಳೆಯ ಒಡಂಬಡಿಕೆಯ ಧರ್ಮಶಾಸ್ತ್ರವು ಒಂದು ಘಟಕವಾಗಿದೆ (ಯಾಕೋಬ 2:10). ಒಂದು ವೇಳೆ ಎಲ್ಲವೂ ಅನ್ವಯಿಸುತ್ತದೆ ಅಥವಾ ಯಾವುದೂ ಅನ್ವಯಿಸುವುದಿಲ್ಲ. ಒಂದು ವೇಳೆ ಕ್ರಿಸ್ತನು ಕೆಲವನ್ನು ನೆರವೇರಿಸಿದ್ದರೆ, ಅಂದರೆ ಯಜ್ಞವನ್ನರ್ಪಿಸುವ ಕ್ರಮ, ಆತನು ಅದರಲ್ಲಿ ಎಲ್ಲವನ್ನು ನೆರವೇರಿಸಿದನು.

“ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ” (1 ಯೋಹಾನ 5:3). ದಶಾಜ್ಞೆಗಳು ಮುಖ್ಯವಾಗಿ ಇಡೀ ಧರ್ಮಶಾಸ್ತ್ರದ ಸಾರಾಂಶವಾಗಿದ್ದವು. ದಶಾಜ್ಞೆಗಳಲ್ಲಿ ಒಂಬ್ಬತ್ತು ಹೊಸ ಒಡಂಬಡಿಕೆಯಲ್ಲಿ ಸ್ಪಷ್ಟವಾಗಿ ಪುನರಾವರ್ತಿಸಿವೆ. (ಸಬ್ಬತ್ ದಿನವನ್ನು ಆಚರಿಸಿ ಎಂಬುದನ್ನು ಹೊರತುಪಡಿಸಿ ಎಲ್ಲಾ ಆಜ್ಞೆಗಳು). ಸಹಜವಾಗಿ, ನಾವು ದೇವರನ್ನು ಪ್ರೀತಿಸುತ್ತಿರುವುದಾದರೆ, ನಾವು ಸುಳ್ಳು ದೇವತೆಗಳನ್ನು ಆರಾಧಿಸುವದಿಲ್ಲ ಅಥವಾ ವಿಗ್ರಹಗಳಿಗೆ ಅಡ್ಡಬೀಳುವದಿಲ್ಲ. ನಾವು ನಮ್ಮ ನೆರೆಯವರನ್ನು ಪ್ರೀತಿಸುತ್ತಿರುವದಾದರೆ, ನಾವು ಅವರನ್ನು ಕೊಲೆಮಾಡುವದಿಲ್ಲ, ಅವರಿಗೆ ಸುಳ್ಳುಹೇಳುವದಿಲ್ಲ, ಅವರಿಗೆ ವಿರುದ್ಧವಾಗಿ ವ್ಯಭಿಚಾರ ಮಾಡುವದಿಲ್ಲ, ಅಥವಾ ಅವರಿಗೆ ಸೇರಿದ್ದನ್ನು ಆಶಿಸುವದಿಲ್ಲ. ಹಳೆಯ ಒಡಂಬಡಿಕೆಯ ಧರ್ಮಶಾಸ್ತ್ರದ ಉದ್ದೇಶವು ಧರ್ಮಶಾಸ್ತ್ರವನ್ನು ಕೈಕೊಳ್ಳಲು ನಮ್ಮ ಅಸಾಮರ್ಥ್ಯವನ್ನು ಕುರಿತು ಜನರಿಗೆ ಮನವರಿಕೆ ಮಾಡುವುದು ಮತ್ತು ರಕ್ಷಕನಾಗಿ ನಮಗೆ ಯೇಸು ಕ್ರಿಸ್ತನ ಅಗತ್ಯತೆಯನ್ನು ಸೂಚಿಸುವುದಾಗಿದೆ (ರೋಮಾ 7:7-9; ಗಲಾತ್ಯ 3:24). ಹಳೆಯ ಒಡಂಬಡಿಕೆಯ ಧರ್ಮಶಾಸ್ತ್ರವು ಎಲ್ಲಾ ಸಮಯಗಳಲ್ಲಿ ಎಲ್ಲಾ ಜನರಿಗೆ ಸರ್ವಸಾಮಾನ್ಯ ನಿಬಂಧನೆಯಾಗಿರುವುದಕ್ಕಾಗಿ ದೇವರು ಎಂದಿಗೂ ಉದ್ದೇಶಿಸಲಿಲ್ಲ. ನಾವು ದೇವರನ್ನು ಪ್ರೀತಿಸಬೇಕು ಮತ್ತು ನಮ್ಮ ನೆರೆಯವರನ್ನು ಪ್ರೀತಿಸಬೇಕು. ನಾವು ಈ ಎರಡು ಆಜ್ಞೆಗಳಿಗೆ ನಂಬಿಗಸ್ತಿಕೆಯಿಂದ ವಿಧೇಯರಾದರೆ, ದೇವರು ನಮ್ಮಿಂದ ಕೋರುವ ಎಲ್ಲವನ್ನೂ ನಾವು ಹಿಡಿದುಕೊಳ್ಳುತ್ತೇವೆ.

English
ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ
ಕ್ರೈಸ್ತರು ಹಳೆಯ ಒಡಂಬಡಿಕೆಯ ಧರ್ಮಶಾಸ್ತ್ರಕ್ಕೆ ವಿಧೇಯರಾಗಬೇಕೋ?