ಯೇಸು ಕ್ರಿಸ್ತ ಯಾರು?ಪ್ರಶ್ನೆ: ಯೇಸು ಕ್ರಿಸ್ತ ಯಾರು?

ಉತ್ತರ:
ಯೇಸು ಕ್ರಿಸ್ತ ಯಾರು? ಈ ಪ್ರಶ್ನೆಯ ಹಾಗಲ್ಲದೆ " ದೇವರಿದ್ದಾನೆಯೇ?", ಯೇಸು ಕ್ರಿಸ್ತನು ಅಸ್ತಿತ್ವದಲ್ಲಿದ್ದನೇ ಎಂಬ ಪ್ರಶ್ನೆಯನ್ನು ತುಂಬಾ ಕಡಿಮೆ ಜನರು ಕೇಳುತ್ತಾರೆ. ಯೇಸುವು ನಿಜವಾಗಿಯೂ ಸುಮಾರು 2000 ವರ್ಷಗಳ ಹಿಂದೆ ಈ ಭೂಮಿಯ ಮೇಲೆ ಇಸ್ರೇಲ್ನಲ್ಲಿ ನಡೆದಾಡಿದ ವ್ಯಕ್ತಿ ಎಂಬುದನ್ನು ಸಾಮಾನ್ಯವಾಗಿ ಸ್ವೀಕರಿಸಲಾಗಿದೆ. ಯೇಸುವಿನ ಸಂಪೂರ್ಣ ಸ್ವಸ್ವರೂಪದ ವಿಷಯವನ್ನು ಚರ್ಚಿಸಿದಾಗ ವಾಗ್ವಾದ ಪ್ರಾರಂಭವಾಗುತ್ತದೆ. ಬಹುತೇಕ ಪ್ರತಿಯೊಂದು ಪ್ರಧಾನ ಧರ್ಮವು ಯೇಸುವು ಒಬ್ಬ ಪ್ರವಾದಿ, ಅಥವಾ ಒಬ್ಬ ಉತ್ತಮ ಗುರು, ಅಥವಾ ಒಬ್ಬ ದೇವತಾ ಮನುಷ್ಯನೆಂಬುದಾಗಿ ಕಲಿಸುತ್ತವೆ. ಇಲ್ಲಿ ಸಮಸ್ಯೆಯೆಂದರೆ, ಯೇಸುವು ಒಬ್ಬ ಪ್ರವಾದಿ, ಅಥವಾ ಒಬ್ಬ ಉತ್ತಮ ಗುರು, ಅಥವಾ ಒಬ್ಬ ದೇವತಾ ಮನುಷ್ಯನಿಗಿಂತ ಅನಂತವಾಗಿ ಉನ್ನತನಾದವನೆಂದು ಬೈಬಲ್ ಹೇಳುತ್ತದೆ.

ಸಿ.ಎಸ್. ಲೂಯಿಸ್ ತನ್ನ ಪುಸ್ತಕ ಮಿಯರ್ ಕ್ರಿಶ್ಚಿಯಾನಿಟಿಯಲ್ಲಿ ಈ ಕೆಳಗಿನದನ್ನು ಬರೆಯುತ್ತಾನೆ. “ನಾನು ಇಲ್ಲಿ ಜನರು ಆಗಾಗ ಅವನ [ಯೇಸು ಕ್ರಿಸ್ತನ] ಕುರಿತು ಹೇಳುವ ನಿಜವಾದ ಮೂರ್ಖತನದ ಮಾತನ್ನು ಹೇಳುವುದರಿಂದ ಯಾರನ್ನಾದರೂ ತಡೆಯಲು ಪ್ರಯತ್ನಿಸುತ್ತಿದ್ದೇನೆ: ‘ನಾನು ಯೇಸುವನ್ನು ಒಬ್ಬ ಮಹಾನ್ ನೈತಿಕ ಗುರುವೆಂದು ಸ್ವೀಕರಿಸಲು ಸಿದ್ಧನಿದ್ದೇನೆ, ಆದರೆ ಅವನು ದೇವರೆಂಬ ಸಾರುವಿಕೆಯನ್ನು ನಾನು ಒಪ್ಪುವುದಿಲ್ಲ.’ ಇದು ನಾವು ಹೇಳಬಾರದಾಗಿರುವಂಥ ಒಂದು ವಿಷಯವಾಗಿದೆ. ಕೇವಲ ಒಬ್ಬ ಮಾನವನಾಗಿರುವ ಮತ್ತು ಯೇಸುವು ಹೇಳಿರುವಂತಹ ವಿಷಯಗಳನ್ನು ಹೇಳಿರುವ ಒಬ್ಬ ಮನುಷ್ಯನು ಒಬ್ಬ ಮಹಾನ್ ನೈತಿಕ ಗುರುವಾಗಲಾರನು. ಅವನು ಒಂದೋ ಒಬ್ಬ ಹುಚ್ಚನಾಗಿರುತ್ತಾನೆ -- ಅವನು ನಿಷ್ಪ್ರಯೋಜಕ ವ್ಯಕ್ತಿಯ ಮಟ್ಟದಲ್ಲಿರುತ್ತಾನೆ -- ಅಥವಾ ಅವನೊಬ್ಬ ನರಕದ ಪಿಶಾಚಿಯಾಗಿರುತ್ತಾನೆ. ನೀವು ನಿಮ್ಮ ಆಯ್ಕೆಯನ್ನು ಮಾಡಬೇಕು. ಒಂದೋ ಈ ಮನುಷ್ಯನು ದೇವರ ಮಗನಾಗಿದ್ದನು, ಮತ್ತು ಆಗಿರುವನು, ಇಲ್ಲವೇ ಒಬ್ಬ ಹುಚ್ಚುಮಾನವ ಅಥವಾ ಇನ್ನೂ ಕೆಟ್ಟವನಾಗಿರುವನು…. ಒಬ್ಬ ಮೂರ್ಖನೆಂದು ನೀವು ಆತನ ಬಾಯಿ ಮುಚ್ಚಿಸಬಹುದು, ಅವನ ಮೇಲೆ ಉಗುಳಬಹುದು ಮತ್ತು ಅವನನ್ನು ಒಬ್ಬ ರಾಕ್ಷಸನೆಂದು ಕರೆಯಬಹುದು; ಅಥವಾ ನೀವು ಅವನ ಪಾದಗಳ ಮೇಲೆ ಎರಗಿ ಅವನನ್ನು ಅಧೀಶ್ವರ ಮತ್ತು ದೇವರೆಂದು ಕರೆಯಬಹುದು. ಆದರೆ ಅವನು ಒಬ್ಬ ಮಹಾನ್ ಮಾನವ ಗುರುವಾಗಿದ್ದ ಕುರಿತು ನಾವು ಪ್ರೋತ್ಸಾಹಕ ಅಸಂಬದ್ಧ ಕಲ್ಪನೆಯನ್ನು ಮುಂದಿಡುವುದು ಬೇಡ.ಅವನು ನಮಗೆ ಈ ಆಯ್ಕೆಯನ್ನು ಮಾಡುವ ಸ್ವಾತಂತ್ರ್ಯವನ್ನು ಕೊಟ್ಟಿಲ್ಲ. ಇದು ಅವನ ಉದ್ದೇಶವೂ ಅಲ್ಲ.”

ಹಾಗಾದರೆ, ಯೇಸುವನ್ನು ಯಾರೆಂದು ಸಾರಲಾಗಿತ್ತು? ಆತನು ಯಾರಾಗಿದ್ದನೆಂದು ಬೈಬಲ್ ಹೇಳುತ್ತದೆ? ಮೊದಲು, ಜಾನ್ 10:30 ರಲ್ಲಿ ಯೇಸುವಿನ ಮಾತುಗಳನ್ನು ನೋಡೋಣ, “ನಾನು ಮತ್ತು ತಂದೆ ಒಂದೇ ಆಗಿದ್ದೇವೆ.” ಮೊದಲ ನೋಟದಲ್ಲಿ, ಇದು ತಾನು ದೇವರೆಂಬ ಪ್ರತಿಪಾದನೆಯಂತೆ ಕಾಣದೇ ಇರಬಹುದು. ಆದರೂ, ಆತನ ಹೇಳಿಕೆಗೆ ಯಹೂದಿಗಳ ಪ್ರತಿಕ್ರಿಯೆಯನ್ನು ನೋಡಿ, ಯಹೂದಿಗಳು ಹೀಗೆ ಪ್ರತ್ಯುತ್ತರ ನೀಡಿದರು, “ಇವುಗಳಲ್ಲಿ ಯಾವುದೇ ಕಾರಣಕ್ಕಾಗಿಯೂ ನಾವು ನಿನಗೆ ಕಲ್ಲು ಎಸೆಯುತ್ತಿಲ್ಲ, ನಾವು ಹೀಗೆ ಮಾಡುತ್ತಿರುವುದು ಧರ್ಮ ನಿಂದೆಗಾಗಿ, ಏಕೆಂದರೆ ನೀನೊಬ್ಬ ಮನುಷ್ಯ ಮಾತ್ರನಾಗಿ ದೇವರೆಂದು ಸಾರಿಕೊಳ್ಳತ್ತಿರುವೆ” (ಜಾನ್ 10:33). ಯಹೂದಿಗಳು ಯೇಸುವಿನ ಹೇಳಿಕೆಯನ್ನು ಅದು ತಾನು ದೇವರೆಂದು ಸಾರಿಕೊಳ್ಳುವುದು ಎಂಬುದಾಗಿ ಅರ್ಥಮಾಡಿಕೊಂಡರು. ಈ ಕೆಳಗಿನ ಪಂಕ್ತಿಗಳಲ್ಲಿ ಯೇಸುವು “ತಾನು ದೇವರೆಂದು ಸಾರಿಕೊಳ್ಳಲಿಲ್ಲ” ಎಂದು ಹೇಳುವ ಮೂಲಕ ಎಂದಿಗೂ ಯಹೂದಿಗಳನ್ನು ತಿದ್ದುವುದಿಲ್ಲ. ಯೇಸುವು “ನಾನು ಮತ್ತು ತಂದೆ ಒಂದೇ ಆಗಿದ್ದೇವೆ” (ಜಾನ್ 10:30) ಎಂದು ಘೋಷಿಸುವ ಮೂಲಕ ತಾನು ದೇವರೆಂಬುದಾಗಿ ನಿಜವಾಗಿಯೂ ಹೇಳುತ್ತಿದ್ದನು ಎಂಬುದನ್ನು ಅದು ಸೂಚಿಸುತ್ತದೆ. ಜಾನ್ 8:58 ಮತ್ತೊಂದು ಉದಾಹರಣೆಯಾಗಿದೆ. ಯೇಸುವು ಘೋಷಿಸಿದನು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ಯೇಸು ಉತ್ತರಿಸಿದನು, ಅಬ್ರಾಹಾಂಗೆ ಮೊದಲು ಜನಿಸಿದ್ದು ನಾನು!” ಪುನಃ, ಪ್ರತ್ಯುತ್ತರವಾಗಿ, ಯೆಹೂದ್ಯರು ಯೇಸುವಿಗೆ ಕಲ್ಲು ಹೊಡೆಯಲು ಪ್ರಯತ್ನಿಸುತ್ತಾ ಕಲ್ಲುಗಳನ್ನು ಎತ್ತಿಕೊಂಡರು (ಜಾನ್ 8:59). ಯೇಸುವು ತನ್ನ ಸ್ವಸ್ವರೂಪವನ್ನು “ನಾನು” ಎಂಬುದಾಗಿ ಘೋಷಿಸುತ್ತಿರುವುದು ಹಳೆಯ ಒಡಂಬಡಿಕೆಯಲ್ಲಿರುವ ದೇವರ ಹೆಸರಿನ ನೇರ ಬಳಕೆಯಾಗಿದೆ (ಎಕ್ಸೋಡಸ್ 3:14). ಯಹೂದಿಗಳು ಧರ್ಮನಿಂದೆ ಎಂಬುದಾಗಿ ನಂಬಿರುವಂತಹ ಏನನ್ನೂ, ಉದಾಹರಣೆಗೆ ತಾನು ದೇವರೆಂಬ ಸಾರುವಿಕೆಯನ್ನು,ಯೇಸುವು ಮಾಡದಿದ್ದರೆ ಅವರು ಏಕೆ ಅವನಿಗೆ ಪುನಃ ಕಲ್ಲುಗಳಿಂದ ಹೊಡೆಯಲು ಬಯಸುತ್ತಿದ್ದರು?

“ಆ ಶಬ್ದವು ದೇವರಾಗಿತ್ತು” ಎಂದು 1:1 ಹೇಳುತ್ತದೆ. “ಆ ಶಬ್ದವು ಮಾಂಸಮಯವಾದ ಶರೀರವಾಯಿತು” ಎಂದು 1:14 ಹೇಳುತ್ತದೆ. ಯೇಸುವು ಮಾಂಸಮಯವಾದ ಶರೀರವಿರುವ ದೇವರು ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ. ಅನುಯಾಯಿಯಾದ ಥಾಮಸ್ ಯೇಸುವನ್ನು “ನನ್ನ ಭಗವಂತ ಮತ್ತು ನನ್ನ ದೇವರು” ಎಂದು ಘೋಷಿಸಿದನು (ಜಾನ್ 20:28). ಯೇಸುವು ಅವನನ್ನು ತಿದ್ದುವುದಿಲ್ಲ. ಪ್ರಚಾರಕನಾದ ಪೌಲ್ ಅವನನ್ನು, “...ನಮ್ಮ ಮಹಾನ್ ದೇವರು ಮತ್ತು ಉದ್ಧಾರಕ, ಯೇಸು ಕ್ರಿಸ್ತ” ಎಂದು ವಿವರಿಸುತ್ತಾನೆ (ಟೈಟಸ್ 2:13). ಪ್ರಚಾರಕನಾದ ಪೀಟರ್ ಅದನ್ನೇ ಹೇಳುತ್ತಾನೆ, “... ನಮ್ಮ ದೇವರು ಮತ್ತು ಉದ್ಧಾರಕ ಯೇಸು ಕ್ರಿಸ್ತ” (2 ಪೀಟರ್ 1:1). ದೇವರು ಯೇಸುವಿನ ಸಂಪೂರ್ಣ ಸ್ವಸ್ವರೂಪದ ಸಾಕ್ಷಿಯಾಗಿದ್ದಾನೆ, ಆದರೆ ಪುತ್ರನ ಕುರಿತು ಅವನು ಹೀಗೆ ಹೇಳುತ್ತಾನೆ, “ಓ ದೇವರೆ, ನಿಮ್ಮ ಪ್ರಭುತ್ವವು ಸದಾಕಾಲ ಇರುತ್ತದೆ, ಹಾಗೂ ಧರ್ಮಶೀಲತೆಯು ನಿಮ್ಮ ಸಾಮ್ರಾಜ್ಞದ ರಾಜದಂಡವಾಗಿದೆ.” ಹಳೆಯ ಒಡಂಬಡಿಕೆಯ ಯೇಸುವಿನ ಭವಿಷ್ಯವಾದಿಗಳು ತಮ್ಮ ದೇವರನ್ನು ಹೀಗೆಂದು ಘೋಷಿಸುತ್ತಾರೆ, “ನಮಗಾಗಿ ಒಂದು ಮಗುವು ಜನಿಸಿದೆ, ನಮಗೆ ಒಬ್ಬ ಮಗನನ್ನು ನೀಡಲಾಗಿದೆ, ಹಾಗೂ ಸರ್ಕಾರದ ಹೊಣೆಯು ಅವನ ಭುಜಗಳ ಮೇಲಿರುತ್ತದೆ. ಮತ್ತು ಅವನನ್ನುಒಬ್ಬ ಪ್ರಶಂಸನೀಯ ಸಲಹೆಗಾರ, ಶ್ರೇಷ್ಠ ದೇವರು, ಚಿರಂಜೀವಿ ಸೃಷ್ಟಿಕರ್ತ, ಶಾಂತಿದೂತನೆಂದು ಕರೆಯಲಾಗುತ್ತದೆ.”

ಆದ್ದರಿಂದ, ಸಿ. ಎಸ್. ಲೂಯಿಸ್ ವಾದಿಸಿದಂತೆ ಯೇಸುವನ್ನು ಒಬ್ಬ ಉತ್ತಮ ಗುರುವೆಂದು ನಂಬುವುದು ಒಂದು ಆಯ್ಕೆಯಾಗಿರುವುದಿಲ್ಲ. ಯೇಸುವನ್ನು ಸ್ಪಷ್ಟವಾಗಿ ಮತ್ತು ನಿರ್ವಿವಾದವಾಗಿ ದೇವರೆಂದು ಸಾರಲಾಗಿದೆ. ಅವನು ದೇವರಾಗಿರದಿದ್ದಲ್ಲಿ, ಅವನೊಬ್ಬ ಸುಳ್ಳುಗಾರನಾಗಿರುವನು, ಹಾಗೂ ಆದ್ದರಿಂದ ಒಬ್ಬ ಪ್ರವಾದಿ, ಉತ್ತಮ ಗುರು, ಅಥವಾ ದೇವತಾ ಮನುಷ್ಯನಾಗಿರಲಾರನು. ಯೇಸುವಿನ ಮಾತುಗಳನ್ನು ಟೀಕಿಸುತ್ತಾ ವಿವರಿಸುವ ತಮ್ಮ ಪ್ರಯತ್ನಗಳಲ್ಲಿ, ಆಧುನಿಕ “ವಿದ್ವಾಂಸರು”, ಯೇಸುವಿನ ಮಾತುಗಳೆಂದು ಬೈಬಲ್ ಹೇಳುವ ಹಲವಾರು ವಿಷಯಗಳನ್ನು “ಸತ್ಯವಾದ ಚಾರಿತ್ರಿಕ ಯೇಸು”ವು ಹೇಳಿರಲೇ ಇಲ್ಲ ಎಂಬುದಾಗಿ ಸಾರುತ್ತಾರೆ. ಯೇಸುವು ಏನನ್ನು ಹೇಳಿದನು ಅಥವಾ ಹೇಳಲಿಲ್ಲ ಎಂಬುದಕ್ಕೆ ಸಂಬಂಧಪಟ್ಟ ದೇವರ ಶಬ್ದಗಳೊಡನೆ ವಾದ ಮಾಡಲು ನಾವು ಯಾರು? ಎರಡು ಸಾವಿರ ವರ್ಷಗಳಿಂದ ಯೇಸುವಿನಿಂದ ಪ್ರತ್ಯೇಕಗೊಂಡಿರುವ ಒಬ್ಬ “ವಿದ್ವಾಂಸನು” ಯೇಸುವು ಏನನ್ನು ಹೇಳಿದನು ಅಥವಾ ಹೇಳಲಿಲ್ಲ ಎಂಬ ಕುರಿತು ಸ್ವತಃ ಯೇಸುವಿನೊಂದಿಗೆ ಜೀವಿಸಿದ, ಸೇವೆ ಮಾಡಿದ, ಮತ್ತು ಕಲಿತ ಜನರಿಗಿಂತ ಉತ್ತಮವಾದ ಪರಿಜ್ಞಾನವನ್ನು ಹೊಂದಿರಲು ಹೇಗೆ ಸಾಧ್ಯ (ಜಾನ್ 14:26)?

ಯೇಸುವಿನ ನಿಜವಾದ ಸ್ವಸ್ವರೂಪದ ಮೇಲಿನ ಪ್ರಶ್ನೆಯು ಯಾಕೆ ಅಷ್ಟು ಮುಖ್ಯವಾಗಿದೆ? ಯೇಸುವು ದೇವರೇ ಅಥವಾ ಅಲ್ಲವೇ ಎಂಬ ಮಾತು ಯಾಕೆ ಮಹತ್ವವನ್ನು ಪಡೆದಿದೆ? ಯೇಸುವು ದೇವರಾಗಿರಬೇಕು ಎನ್ನುವುದಕ್ಕೆ ಅತೀ ಮುಖ್ಯವಾದ ಕಾರಣವೆಂದರೆ, ಅವನು ದೇವರಲ್ಲದಿದ್ದಲ್ಲಿ, ಅವನ ಮರಣವು ಇಡೀ ಜಗತ್ತಿನ ಪಾಪಗಳಿಗೆ ದಂಡ ತೆರಲು ಸಾಕಾಗುತ್ತಿರಲಿಲ್ಲ (1 ಜಾನ್ 2:2). ಅಂತಹ ಅನಂತವಾದ ದಂಡವನ್ನು ದೇವರಿಗೆ ಮಾತ್ರ ಪಾವತಿಸಲು ಸಾಧ್ಯ 5:8; 2 ಕೊರಿಂಥಿಯನ್ನರು 5:21). ನಮ್ಮ ಸಾಲವನ್ನು ಪಾವತಿಸುವಂತಾಗಲು ಯೇಸುವು ದೇವರಾಗಿರಲೇಬೇಕು. ಯೇಸುವು ಮರಣವನ್ನು ಹೊಂದುವಂತಾಗಲು ಅವನು ಮನುಷ್ಯನಾಗಬೇಕಿತ್ತು. ಯೇಸು ಕ್ರಿಸ್ತನಲ್ಲಿ ಶ್ರದ್ದೆಯಿಡುವುದರಿಂದ ಮಾತ್ರ ರಕ್ಷಣೆ ಪ್ರಾಪ್ತಿಯಾಗುತ್ತದೆ! ಯೇಸು ದೇವರು ರಕ್ಷಣೆಯ ಏಕಮಾತ್ರ ಮಾರ್ಗವಾಗಿರುತ್ತಾರೆ. ಆದ್ದರಿಂದಲೇ ಯೇಸು ದೇವರು ಹೀಗೆಂದು ಘೋಷಿಸಿದ್ದಾರೆ, “ನಾನೇ ಮಾರ್ಗ ಮತ್ತು ಸತ್ಯ ಮತ್ತು ಜೀವನ. ನನ್ನ ಮೂಲಕವಲ್ಲದೆ ಯಾರಿಗೂ ತಂದೆಯನ್ನು ತಲುಪಲು ಸಾಧ್ಯವಿಲ್ಲ” (ಜಾನ್ 14:6).


ಕನ್ನಡ ಹೋಮ್ ಪೇಜ್ ಗೆ ಹಿಂದಿರುಗಿ


ಯೇಸು ಕ್ರಿಸ್ತ ಯಾರು?