ರಕ್ಷಣೆಯ ಯೋಜನೆ/ ರಕ್ಷಣೆಯ ಮಾರ್ಗ ಎಂದರೇನು?ಪ್ರಶ್ನೆ: ರಕ್ಷಣೆಯ ಯೋಜನೆ/ ರಕ್ಷಣೆಯ ಮಾರ್ಗ ಎಂದರೇನು?

ಉತ್ತರ:
ನಿಮಗೆ ಹಸಿವಾಗಿದೆಯೇ? ದೈಹಿಕವಾದ ಹಸಿವೆಯಲ್ಲ, ನೀವು ಜೀವನದಲ್ಲಿ ಹೆಚ್ಚಿನ ಏನನ್ನಾದರೂ ಸಾಧಿಸಬೇಕೆಂಬ ಹಸಿವೆಯನ್ನು ಹೊಂದಿದ್ದೀರಾ? ನಿಮ್ಮೊಳಗೆ ಎಂದೂ ತೃಪ್ತಿಯನ್ನು ಹೊಂದದಂತಿರುವ ಆಳವಾದ ಯಾವುದೋ ಆಕಾಂಕ್ಷೆಯಿದೆಯೇ? ಹಾಗಿದ್ದಲ್ಲಿ, ಯೇಸುವೇ ಮಾರ್ಗವಾಗಿದ್ದಾನೆ! ಯೇಸು ಹೀಗೆ ಹೇಳಿದನು, "ನಾನು ಆಧ್ಯಾತ್ಮಿಕ ಆಹಾರವಾಗಿದ್ದೇನೆ. ನನ್ನ ಬಳಿ ಬಂದವರಾರೂ ಹಸಿವೆಯಿಂದ ಹಿಂತಿರುಗುವುದಿಲ್ಲ, ಹಾಗೂ ನನ್ನಲ್ಲಿ ನಂಬಿಕೆಯಿಟ್ಟವರು ಯಾವಾಗಲೂ ಬಾಯಾರಿಕೆಯಿಂದ ಬಳಲುವುದಿಲ್ಲ” (ಜಾನ್ 6:35).

ನೀವು ಗೊಂದಲಕ್ಕೊಳಗಾಗಿದ್ದೀರಾ? ನಿಮಗೆ ಜೀವನದ ಮಾರ್ಗ ಅಥವಾ ಉದ್ದೇಶವನ್ನು ಕಂಡುಕೊಳ್ಳಲು ಆಗುತ್ತಿಲ್ಲವೆಂಬಂತೆ ಅನಿಸುತ್ತಿದೆಯೇ? ಯಾರೋ ಎಲ್ಲಾ ದೀಪಗಳನ್ನು ಆರಿಸಿದ್ದು ನಿಮಗೆ ಸ್ವಿಚ್ ನ್ನು ಹುಡುಕಲು ಸಾಧ್ಯವಾಗುತ್ತಿಲ್ಲವೆಂಬಂತೆ ಅನಿಸುತ್ತಿದೆಯೇ? ಹಾಗಿದ್ದಲ್ಲಿ, ಯೇಸುವೇ ಮಾರ್ಗವಾಗಿದ್ದಾನೆ! ಯೇಸುವು ಹೀಗೆಂದು ಘೋಷಿಸಿದನು, “ನಾನು ಜಗತ್ತನ್ನು ಬೆಳಗುವ ಜ್ಯೋತಿಯಾಗಿದ್ದೇನೆ. ನನ್ನನ್ನು ಅನುಸರಿಸುವವರು ಎಂದಿಗೂ ಕತ್ತಲೆಯಲ್ಲಿ ನಡೆಯುವುದಿಲ್ಲ, ಬದಲಾಗಿ ಅವರು ಜೀವನದ ಜ್ಯೋತಿಯನ್ನು ಹೊಂದುವರು” (ಜಾನ್ 8:12).

ನಿಮಗೆ ಎಂದಾದರೂ ನಿಮ್ಮನ್ನು ಜೀವನದ ಹೊರಕ್ಕೆ ಹಾಕಿ ಬೀಗ ಹಾಕಲಾಗಿದೆ ಎಂದೆನಿಸುತ್ತದೆಯೇ? ನೀವು ಹಲವಾರು ಬಾಗಿಲುಗಳನ್ನು ತೆರೆಯಲು ಪ್ರಯತ್ನಿಸಿದ್ದರೂ, ಅವುಗಳ ಹಿಂದೆ ಕೇವಲ ಬರಿದಾದುದು ಮತ್ತು ನಿರರ್ಥಕವಾದುದನ್ನು ಕಂಡುಕೊಂಡಿದ್ದೀರಾ? ನೀವು ಸಾರ್ಥಕತೆಯ ಜೀವನಕ್ಕೆ ಪ್ರವೇಶವನ್ನು ಹುಡುಕುತ್ತಿರುವಿರಾ? ಹಾಗಿದ್ದಲ್ಲಿ, ಯೇಸುವೇ ಮಾರ್ಗವಾಗಿದ್ದಾನೆ! ಯೇಸುವು ಹೀಗೆಂದು ಘೋಷಿಸಿದನು, “ನಾನು ದ್ವಾರವಾಗಿದ್ದೇನೆ; ನನ್ನ ಮೂಲಕ ಪ್ರವೇಶಿಸುವವರು ರಕ್ಷಣೆ ಪಡೆಯುತ್ತಾರೆ. ಅವನು ಒಳಗೆ ಬರುತ್ತಾನೆ ಮತ್ತು ಹೊರಗೆ ಹೋಗುತ್ತಾನೆ, ಮತ್ತು ಮೇವನ್ನು ಪಡೆಯುತ್ತಾನೆ." (ಜಾನ್ 10:9).

ಇತರರು ನಿಮ್ಮನ್ನು ಯಾವಾಗಲೂ ನಿರಾಶೆಗೊಳಪಡಿಸುತ್ತಾರೆಯೇ? ನಿಮ್ಮ ಸಂಬಂಧಗಳು ಗಾಢವಾಗಿರದೆ ಬರಿದಾಗಿವೆಯೇ? ಎಲ್ಲರೂ ನಿಮ್ಮಿಂದ ಪ್ರಯೋಜನ ಪಡೆಯಲು ಪ್ರಯತ್ನಿಸುವಂತೆ ಭಾಸವಾಗುತ್ತದೆಯೇ? ಹಾಗಿದ್ದಲ್ಲಿ, ಯೇಸುವೇ ದಾರಿ! ಯೇಸು ಹೇಳಿದ್ದಾನೆ, “ನಾನು ಒಬ್ಬ ಒಳ್ಳೆಯ ಕುರುಬ. ಒಬ್ಬ ಒಳ್ಳೆಯ ಕುರುಬನು ತನ್ನ ಜೀವನವನ್ನು ಕುರಿಗಾಗಿ ಅರ್ಪಿಸುತ್ತಾನೆ… ನಾನು ಒಬ್ಬ ಒಳ್ಳೆಯ ಕುರುಬ; ನಾನು ನನ್ನ ಕುರಿಯನ್ನು ತಿಳಿದಿದ್ದೇನ ಮತ್ತು ನನ್ನ ಕುರಿ ನನ್ನನ್ನು ತಿಳಿದಿದೆ”(ಜಾನ್ 10:11, 14).

ಈ ಜೀವನದ ನಂತರ ಏನಾಗುವುದೆಂಬ ಕೌತುಕ ನಿಮಗಿದೆಯೇ? ನೀವು ಹಾಳಾದ ಅಥವಾ ತುಕ್ಕುಹಿಡಿದ ವಸ್ತುಗಳಿಗೋಸ್ಕರ ಬದುಕುವ ಈ ಬದುಕಿನಿಂದ ದಣಿದಿದ್ದೀರಾ? ಕೆಲವೊಮ್ಮೆ ನಿಮಗೆ ಈ ಜೀವನದಲ್ಲಿ ಏನಾದರೂ ಅರ್ಥವಿದೆಯೇ ಎಂದು ಅನುಮಾನ ಉಂಟಾಗುತ್ತದೆಯೇ? ನೀವು ನಿಮ್ಮ ಜೇವನದ ನಂತರವೂ ಬದುಕಬಯಸುತ್ತೀರಾ? ಹಾಗಿದ್ದಲ್ಲಿ, ಯೇಸುವೇ ದಾರಿ! ಯೇಸುವು ಘೋಷಿಸಿದ್ದಾನೆ, “ನಾನೇ ಪುನರುಜ್ಜೀವನ ಮತ್ತು ಜೀವನ. ಯಾರು ನನ್ನನ್ನು ನಂಬುತ್ತಾರೋ ಅವರು ಮರಣಿಸಿದರೂ ಬದುಕುತ್ತಾರೆ; ಮತ್ತು ಯಾರು ನನ್ನನ್ನು ನಂಬುತ್ತಾರೆ ಮತ್ತು ಬದುಕುತ್ತಾರೆ, ಅವರು ಎಂದೂ ಮರಣಿಸುವುದಿಲ್ಲ” (ಜಾನ್ 11:25-26).

ಯಾವುದು ಮಾರ್ಗ? ಯಾವುದು ಸತ್ಯ? ಯಾವುದು ಜೀವನ? ಯೇಸುವು ಉತ್ತರಿಸಿದನು, “ನಾನೇ ಮಾರ್ಗ, ಮತ್ತು ಸತ್ಯ, ಮತ್ತು ಜೀವನ. ನನ್ನ ಮೂಲಕವಲ್ಲದೇ ಯಾರೂ ದೇವರಲ್ಲಿಗೆ ಬರಲು ಸಾಧ್ಯವಿಲ್ಲ” (ಜಾನ್ 14:6).

ನಿಮಗೆ ಅನುಭವವಾಗುವ ಹಸಿವು ಆಧ್ಯಾತ್ಮದ ಹಸಿವು, ಮತ್ತು ಅದು ಯೇಸುವಿನಿಂದ ಮತ್ರ ಭರಿಸಲಾಗುವಂಥದ್ದು. ಯೇಸು ಒಬ್ಬ ಮಾತ್ರ ಕತ್ತಲೆಯನ್ನು ಹೋಗಲಾಡಿಸಬಲ್ಲನು. ಯೇಸುವು ನೀವು ಎದುರು ನೋಡುತ್ತಿರುವ ಸ್ನೇಹಿತ ಮತ್ತು ಉದ್ಧಾರಕ. ಯೇಸುವು ಈಗಿನ ಮತ್ತು ನಂತರದ ಜೀವನ. ಯೇಸುವು ರಕ್ಷಣೆಗೆ ಮಾರ್ಗವಾಗಿದ್ದಾನೆ!

ನೀವು ಹಸಿವನ್ನು ಅನುಭವಿಸುವುದಕ್ಕೆ, ನೀವು ಕತ್ತಲೆಯಲ್ಲಿ ಕಳೆದುಹೋದಂತೆ ಭಾಸವಾಗಲು, ನೀವು ಜೀವನದಲ್ಲಿ ಅರ್ಥವನ್ನು ಹುಡುಕಲು ಸಾಧ್ಯವಾಗದಿರಲು ಕಾರಣ, ನೀವು ದೇವರಿಂದ ಬೇರ್ಪಟ್ಟಿದ್ದೀರಿ. ಬೈಬಲ್ ನಮಗೆ ಹೇಳುವುದೇನೆಂದರೆ ನಾವೆಲ್ಲಾ ಪಾಪ ಮಾಡಿದ್ದೇವೆ, ಮತ್ತು ಅದರಿಂದಾಗಿ ದೇವರಿಂದ ಬೇರ್ಪಡಿಸಲ್ಪಟ್ಟಿದ್ದೇವೆ.(ಇಕ್ಲೀಸಿಯಾಸ್ಟೀಸ್ 7:20; ರೋಮನ್ಸ್ 3:23). ನಿಮ್ಮ ಹೃದಯದಲ್ಲಿ ನೀವು ಅನುಭವಿಸುವ ಖಾಲಿತನವು ದೇವರು ನಿಮ್ಮ ಜೀವನದಲ್ಲಿ ಕಾಣೆಯಾಗಿರುವುದನ್ನು ತೋರಿಸುತ್ತದೆ. ನಾವು ದೇವರೊಂದಿಗೆ ಸಂಬಂಧವನ್ನು ಹೊಂದಲು ಸೃಷ್ಟಿಸಲ್ಪಟ್ಟಿದ್ದೇವೆ. ನಮ್ಮ ಪಾಪದಿಂದಾಗಿ ನಾವು ಆ ಸಂಬಂಧದಿಂದ ಬೇರ್ಪಟ್ಟಿದ್ದೇವೆ. ಇನ್ನೂ ಕೆಟ್ಟ ವಿಷಯವೆಂದರೆ ನಮ್ಮ ಪಾಪವು ಎಂದೆಂದಿಗೂ ಈಗಿನ ಮತ್ತು ಮುಂದಿನ ಜೀವನದಲ್ಲಿ ದೇವರಿಂದ ದೂರವಾಗುವುದಕ್ಕೆ ಕಾರಣವಾಗುತ್ತದೆ (ರೋಮನ್ಸ್ 6:23; ಜಾನ್ 3:36).

ಈ ಸಮಸ್ಯೆಯನ್ನು ಹೇಗೆ ಪರಿಹರಿಸುವುದು? ಯೇಸುವು ಮಾರ್ಗವಾಗಿದ್ದಾನೆ! ಯೇಸುವು ನಮ್ಮ ಪಾಪವನ್ನು ಅವನ ಮೇಲೆ ತೆಗೆದುಕೊಂಡಿದ್ದಾನೆ (2 ಕರಿಂತಿಯನ್ಸ್ 5:21). ನಮ್ಮ ಪರವಾಗಿ ಮರಣಿಸಿದ್ದಾನೆ (ರೋಮನ್ಸ್ 5:8), ಯೇಸುವು ನಮಗೆ ಸಲ್ಲಬೇಕಾದ ಶಿಕ್ಷೆಯನ್ನು ತಾನು ತೆಗೆದುಕೊಂಡು. ಮೂರು ದಿನಗಳ ನಂತರ, ಯೇಸುವು ಪಾಪ ಮತ್ತುಮರಣದ ಜಯವನ್ನು ಸಾಧಿಸುತ್ತ ಮರಣದಿಂದ ಎದ್ದು ಬಂದನು (ರೋಮನ್ಸ್ 6:4-5). ಅವನು ಇದನ್ನು ಯಾಕೆ ಮಾಡಿದನು? ಯೇಸುವು ಈ ಪ್ರಶ್ನೆಗೆ ತಾನೇ ಉತ್ತರಿಸಿದನು, “ಮಹತ್ತರವಾದ ಪ್ರೀತಿಯು ಇದನ್ನು ಬಿಟ್ಟು ಬೇರೆ ಯಾರನ್ನೂ ಹೊಂದಿಲ್ಲ,ಅದೇನೆಂದರೆ ಅವನು ತನ್ನ ಜೀವನವನ್ನು ತನ್ನ ಸ್ನೇಹಿತರಿಗಾಗಿ ಮುಡಿಪಾಗಿಟ್ಟನು”(ಜಾನ್ 15:13). ಯೇಸುವು ಮರಣಿಸಿದನು, ಏಕೆಂದರೆ ಅದರಿಂದ ನಾವು ಜೀವಿಸಬಹುದಾಗಿದೆ. ನಾವು ಯೇಸುವಿನ ಮರಣವು ನಮ್ಮ ಪಾಪಗಳನ್ನು ಭರಿಸಿದೆಯೆಂದು ಭಾವಿಸಿ, ಯೇಸುವಿನಲ್ಲಿ ನಂಬಿಕೆಯನ್ನು ಇರಿಸಿದ್ದೇ ಆದಲ್ಲಿ, ನಮ್ಮ ಎಲ್ಲಾ ಪಾಪಗಳು ಕ್ಷಮಿಸಲ್ಪಡುತ್ತವೆ ಮತ್ತು ತೊಳೆಯಲ್ಪಡುತ್ತವೆ. ನಂತರವೇ ನಮ್ಮ ಆಧ್ಯಾತ್ಮಿಕ ಹಸಿವು ನೀಗಿಸಲ್ಪಡುತ್ತದೆ. ಬೆಳಕು ಹರಿಯುತ್ತದೆ. ಪರಿಪೂರ್ಣ ಜೀವನಕ್ಕೆ ನಮಗೆ ಪ್ರವೇಶ ಸಿಗುತ್ತದೆ. ನಾವು ನಮ್ಮ ನಿಜವಾದ ಒಳ್ಳೆಯ ಸ್ನೇಹಿತನನ್ನು ಮತ್ತು ಒಳ್ಳೆಯ ಉದ್ಧಾರಕನನ್ನು ತಿಳಿಯುತ್ತೇವೆ. ನಾವು ಮರಣದ ನಂತರವೂ ಬದುಕನ್ನು ಹೊಂದಿರುವುದನ್ನು ನಾವು ತಿಳಿಯುತ್ತೇವೆ –ಸ್ವರ್ಗದಲ್ಲಿ ಯೇಸುವಿನೊಂದಿಗೆ ಒಂದು ಪುನರುಜ್ಜೀವಿತವಾದ ನಿತ್ಯಜೀವನ !

"ದೇವರು ಈ ಜಗತ್ತನ್ನು ಎಷ್ಟು ಪ್ರೀತಿಸಿದನೆಂದರೆ, ಯಾರು ಅವನನ್ನು ನಂಬುತ್ತಾರೋ ಅವರು ನಾಶ ಹೊಂದದೆ ನಿತ್ಯಜೀವನವನ್ನು ಹೊಂದುವಂತಾಗಲು ಅವನ ಏಕೈಕ ಪುತ್ರನನ್ನು ನಮಗೆ ಕೊಟ್ಟಿದ್ದಾನೆ," (ಜಾನ್ 3:16).

ನೀವು ಇಲ್ಲಿ ಏನನ್ನು ಓದಿದ್ದೀರಿ, ಅದರಿಂದಾಗಿ ನೀವು ಯೇಸು ಕ್ರಿಸ್ತನಿಗೋಸ್ಕರ ನಿರ್ಧಾರವನ್ನು ಮಾಡಿದ್ದೀರಾ? ಹಾಗಿದ್ದರೆ, ದಯವಿಟ್ಟು “ನಾನು ಇಂದು ಯೇಸು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿನ ಬಟನ್ ಒತ್ತಿರಿ.


ಕನ್ನಡ ಹೋಮ್ ಪೇಜ್ ಗೆ ಹಿಂದಿರುಗಿ


ರಕ್ಷಣೆಯ ಯೋಜನೆ/ ರಕ್ಷಣೆಯ ಮಾರ್ಗ ಎಂದರೇನು?