ನಿಮ್ಮ ವೈಯಕ್ತಿಕ ಉದ್ಧಾರಕನನ್ನಾಗಿ ಯೇಸುವನ್ನು ಅಂಗೀಕರಿಸುವುದು ಎಂಬುದರ ಅರ್ಥವೇನು?ಪ್ರಶ್ನೆ: ನಿಮ್ಮ ವೈಯಕ್ತಿಕ ಉದ್ಧಾರಕನನ್ನಾಗಿ ಯೇಸುವನ್ನು ಅಂಗೀಕರಿಸುವುದು ಎಂಬುದರ ಅರ್ಥವೇನು?

ಉತ್ತರ:
ನೀವು ಎಂದಾದರೂ ಏಸು ಕ್ರಿಸ್ತನನ್ನು ನಿಮ್ಮ ವೈಯಕ್ತಿಕ ಉದ್ಧಾರಕನನ್ನಾಗಿ ಅಂಗೀಕರಿಸಿದ್ದೀರಾ? ನೀವು ಉತ್ತರಿಸುವ ಮೊದಲು ನನಗೆ ಈ ಪ್ರಶ್ನೆಯನ್ನು ವಿವರಿಸಲು ಅನುವು ಮಾಡಿಕೊಡಿ. ಈ ಪ್ರಶ್ನೆಯನ್ನು ಸರಿಯಗಿ ಅರ್ಥಮಾಡಿಕೊಳ್ಳಲು, ಮೊದಲನೆಯದಾಗಿ ನೀವು “ಯೇಸು ಕ್ರಿಸ್ತ”, “ವೈಯಕ್ತಿಕ” ಮತ್ತು “ಉದ್ಧಾರಕ” ಇವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.

ಯೇಸು ಕ್ರಿಸ್ತ ಎಂದರೆ ಯಾರು? ಹಲವಾರು ಜನರು ಯೇಸು ಕ್ರಿಸ್ತನನ್ನು ಒಬ್ಬ ಉತ್ತಮ ವ್ಯಕ್ತಿ, ಶ್ರೇಷ್ಠ ಗುರು, ಅಥವಾ ದೇವರ ಪ್ರವಾದಿಯೆಂದೂ ಸಹ ಪರಿಗಣಿಸುತ್ತಾರೆ. ಯೇಸುವಿನ ಕುರಿತ ಈ ವಿಷಯಗಳು ಖಂಡಿತವಾಗಿಯೂ ಸತ್ಯ, ಆದರೆ ಆತನು ನಿಜವಾಗಿಯೂ ಯಾರೆಂಬುದನ್ನು ಅವು ವ್ಯಾಖ್ಯಾನಿಸುವುದಿಲ್ಲ. ಯೇಸುಕ್ರಿಸ್ತನು ಒಬ್ಬ ಮಾಂಸಮಯವಾದ ಶರೀರವನ್ನು ಹೊಂದಿರುವ ದೇವರು, ದೇವರು ಒಬ್ಬ ಮನುಷ್ಯನಾದನು ಎಂದು ಬೈಬಲ್ ನಮಗೆ ಹೇಳುತ್ತದೆ (ಜಾನ್ 1:1,14 ಅನ್ನು ನೋಡಿ). ದೇವರು ನಮಗೆ ಬೋಧಿಸುವುದಕ್ಕಾಗಿ, ನಮ್ಮನ್ನು ಗುಣಪಡಿಸುವುದಕ್ಕಾಗಿ, ನಮ್ಮ ತಪ್ಪುಗಳನ್ನು ತಿದ್ದುವುದಕ್ಕಾಗಿ, ನಮ್ಮನ್ನು ಕ್ಷಮಿಸುವುದಕ್ಕಾಗಿ- ಮತ್ತು ನಮಗಾಗಿ ಮರಣ ಹೊಂದುವುದಕ್ಕಾಗಿ ಭೂಮಿಗೆ ಬಂದನು! ಯೇಸು ಕ್ರಿಸ್ತನು ದೇವರು, ಸೃಷ್ಟಿಕರ್ತ, ಅಧೀಶ್ವರನಾದ ಭಗವಂತ. ಈ ಯೇಸುವನ್ನು ನೀವು ಅಂಗೀಕರಿಸಿದ್ದೀರಾ?

ಉದ್ಧಾರಕ ಎಂದರೆ ಯಾರು ಮತ್ತು ನಮಗೆ ಯಾಕೆ ಉದ್ಧಾರಕನ ಅಗತ್ಯವಿದೆ? ನಾವೆಲ್ಲರೂ ಪಾಪವನ್ನು ಮಾಡಿದ್ದೇವೆ, ನಾವೆಲ್ಲರೂ ದುಷ್ಕೃತ್ಯಗಳನ್ನು ಎಸಗಿದ್ದೇವೆ ಎಂಬುದಾಗಿ ಬೈಬಲ್ ನಮಗೆ ಹೇಳುತ್ತದೆ (ರೋಮನ್ನರು 3:10-18). ನಮ್ಮ ಪಾಪದ ಪರಿಣಾಮವಾಗಿ ನಾವು ದೇವರ ಕ್ರೋಧ ಮತ್ತು ಶಿಕ್ಷೆಗೆ ಅರ್ಹರಾಗಿದ್ದೇವೆ. ಅನಂತ ಮತ್ತು ಶಾಶ್ವತವಾದ ದೇವರ ವಿರುದ್ಧ ಎಸಗಿದ ಪಾಪಗಳಿಗಾಗಿ ಪಡೆಯಬೇಕಾದ ಒಂದೇ ಯೋಗ್ಯ ಶಿಕ್ಷೆಯೆಂದರೆ ಅನಂತವಾದ ಶಿಕ್ಷೆ (ರೋಮನ್ನರು 6:23; ಪ್ರಕರಣ 20:11-15). ಇದೇ ಕಾರಣಕ್ಕಾಗಿ ನಮಗೆ ಒಬ್ಬ ಉದ್ಧಾರಕನ ಅಗತ್ಯವಿದೆ!

ಯೇಸು ಕ್ರಿಸ್ತನು ಭೂಮಿಗೆ ಬಂದು ನಮ್ಮ ಸ್ಥಾನದಲ್ಲಿ ಮರಣ ಹೊಂದಿದ್ದಾನೆ. ಮಾಂಸಮಯವಾದ ಶರೀರವನ್ನು ಹೊಂದಿರುವ ದೇವರಾಗಿ ಯೇಸುವಿನ ಮರಣವು ನಮ್ಮ ಪಾಪಗಳನ್ನು ಅನಂತವಾಗಿ ಭರಿಸಿದೆ. (2 ಕೊರಿಂಥಿಯನ್ನರು 5:21). ನಮ್ಮ ಪಾಪಗಳಿಗೆ ದಂಡ ತೆರುವುದಕ್ಕಾಗಿ ಯೇಸುವು ಮರಣ ಹೊಂದಿದನು (ರೋಮನ್ನರು 5:8). ನಮಗೆ ಭರಿಸುವ ಅವಶ್ಯಕತೆ ಬಾರದಂತೆ ಯೇಸುವು ಮೊತ್ತವನ್ನು ಪಾವತಿಸಿದನು.ಮರಣದಿಂದ ಯೇಸುವಿನ ಪುನರುಜ್ಜೀವನವು ನಮ್ಮೆಲ್ಲರ ಪಾಪಗಳಿಗೆ ದಂಡ ತೆರಲು ಅವನ ಮರಣವೊಂದೇ ಸಾಕಾಗಿತ್ತು ಎಂಬುದನ್ನು ರುಜುವಾತುಪಡಿಸುತ್ತದೆ. ಈ ಕಾರಣದಿಂದಾಗಿಯೇ ಯೇಸುವು ಏಕಮಾತ್ರ ಉದ್ಧಾರಕನೆಂದು ಹೇಳಬಹುದು (ಜಾನ್ 14:6; ಕ್ರಿಯೆಗಳು 4:12)!. ನೀವು ನಿಮ್ಮ ಉದ್ಧಾರಕನನ್ನಾಗಿ ಯೇಸುವಲ್ಲಿ ವಿಶ್ವಾಸವಿಡುತ್ತೀರಾ?

ಯೇಸುವು ನಿಮ್ಮ “ವೈಯಕ್ತಿಕ” ಉದ್ಧಾರಕನೇ? ಹಲವಾರು ಜನರು ಕ್ರೈಸ್ತ ಧರ್ಮವನ್ನು ಅನುಸರಿಸುವುದೆಂದರೆ ಇಗರ್ಜಿಗಳಿಗೆ ಹೋಗುವುದು, ಧಾರ್ಮಿಕ ವಿಧಿಗಳನ್ನು ನೆರವೇರಿಸುವುದು, ಕೆಲವು ಪಾಪಗಳನ್ನು ಮಾಡದಿರುವುದು ಎಂದು ಪರಿಗಣಿಸುತ್ತಾರೆ. ಅದು ಕ್ರೈಸ್ತಧರ್ಮವಲ್ಲ. ನಿಜವಾದ ಕ್ರೈಸ್ತಧರ್ಮವೆಂದರೆ ಯೇಸುಕ್ರಿಸ್ತನೊಂದಿಗಿನ ವೈಯಕ್ತಿಕ ಸಂಬಂಧವಾಗಿರುತ್ತದೆ. ನಿಮ್ಮ ವೈಯಕ್ತಿಕ ಉದ್ಧಾರಕನನ್ನಾಗಿ ಯೇಸುವನ್ನು ಸ್ವೀಕರಿಸುವುದೆಂದರೆ ನಿಮ್ಮ ಸ್ವಂತ ವೈಯಕ್ತಿಕ ಶ್ರದ್ಧೆ ಮತ್ತು ವಿಶ್ವಾಸವನ್ನು ಅವನಲ್ಲಿಡುವುದು ಎಂದರ್ಥ. ಯಾರೊಬ್ಬರೂ ಇತರರ ಶ್ರದ್ಧೆಯಿಂದ ಕಾಪಾಡಲ್ಪಟ್ಟಿಲ್ಲ. ಯಾರೊಬ್ಬರೂ ಕೆಲವು ನಿರ್ದಿಷ್ಟ ಅಚರಣೆಗಳನ್ನು ಮಾಡುವುದರ ಮೂಲಕ ಕ್ಷಮೆಯನ್ನು ಪಡೆದಿಲ್ಲ. ನೀವು ಉಳಿವಿಗೆ ಇರುವ ಒಂದೇ ಮಾರ್ಗವೆಂದರೆ ವೈಯಕ್ತಿಕವಾಗಿ ಯೇಸುವನ್ನು ನಿಮ್ಮ ಉದ್ಧಾರಕನನ್ನಾಗಿ ಸ್ವೀಕರಿಸುವುದು, ಅವನ ಮರಣ ನಿಮ್ಮ ಪಾಪಗಳಿಗಾಗಿ ಮಾಡಿದ ಪಾವತಿ ಎಂಬುದಾಗಿ ಹಾಗೂ ಅವನ ಪುನರುಜ್ಜೀವನವು ನಿಮಗೆ ನಿತ್ಯಜೀವನದ ಖಾತರಿ ಎಂಬ ವಿಶ್ವಾಸ ಹೊಂದುವುದು (ಜಾನ್ 3:16). ಯೇಸುವು ವೈಯಕ್ತಿಕವಾಗಿ ನಿಮ್ಮ ಉದ್ಧಾರಕನೇ?

ನೀವು ಯೇಸು ಕ್ರಿಸ್ತನನ್ನು ನಿಮ್ಮ ವೈಯಕ್ತಿಕ ಉದ್ಧಾರಕನನ್ನಾಗಿ ಸ್ವೀಕರಿಸಲು ಬಯಸುತ್ತಿದ್ದಲ್ಲಿ, ಈ ಕೆಳಗಿನ ಶಬ್ದಗಳನ್ನು ದೇವರಿಗೆ ಹೇಳಿರಿ. ನೆನಪಿಡಿ, ಈ ಪ್ರಾರ್ಥನೆಯನ್ನು ಅಥವಾ ಬೇರೆ ಯಾವುದೇ ಪ್ರಾರ್ಥನೆಯನ್ನು ಹೇಳುವುದು ನಿಮ್ಮನ್ನು ಕಾಪಾಡುವುದಿಲ್ಲ. ಕ್ರಿಸ್ತನ ಮೇಲಿನ ವಿಶ್ವಾಸ ಮಾತ್ರ ನಿಮ್ಮನ್ನು ಪಾಪದಿಂದ ಕಾಪಾಡಬಲ್ಲದು. ಈ ಪ್ರಾರ್ಥನೆಯು ದೇವರಿಗೆ ಅವನಲ್ಲಿರುವ ನಿಮ್ಮ ಶ್ರದ್ಧೆಯನ್ನು ವ್ಯಕ್ತಪಡಿಸಲು ಮತ್ತು ನಿಮ್ಮ ರಕ್ಷಣೆಗಾಗಿ ಅವಕಾಶ ಒದಗಿಸುದುದಕ್ಕೆ ಧನ್ಯವಾದ ಸಲ್ಲಿಸಲು ಸುಮ್ಮನೆ ಒಂದು ಮಾರ್ಗ. “ದೇವರೆ, ನಾನು ನಿನ್ನ ವಿರುದ್ಧ ಪಾಪವನ್ನು ಮಾಡಿದ್ದೇನೆ ಮತ್ತು ಶಿಕ್ಷೆಗೆ ಅರ್ಹನಾಗಿದ್ದೇನೆ ಎಂದು ನನಗೆ ತಿಳಿದಿದೆ. ಆದರೆ ಯೇಸು ಕ್ರಿಸ್ತನು ಅವನಲ್ಲಿ ನಂಬಿಕೆಯನ್ನಿಟ್ಟು ನನಗೆ ಕ್ಷಮೆ ದೊರೆಯುವಂತಾಗಲು ನನಗ ಸಲ್ಲಬೇಕಿದ್ದ ಶಿಕ್ಷೆಯನ್ನು ತೆಗೆದುಕೊಂಡಿದ್ದಾನೆ. ನಾನು ನೀವು ಒದಗಿಸಿದ ಕ್ಷಮೆಯ ಕೊಡುಗೆಯನ್ನು ಪಡೆಯುತ್ತೇನೆ ಮತ್ತು ರಕ್ಷಣೆಗಾಗಿ ನಿನ್ನಲ್ಲಿ ನನ್ನ ವಿಶ್ವಾಸವನ್ನು ಇಡುತ್ತೇನೆ. ನಾನು ಯೇಸುವನ್ನು ನನ್ನ ವೈಯಕ್ತಿಕ ಉದ್ಧಾರಕನನ್ನಾಗಿ ಸ್ವೀಕರಿಸುತ್ತೇನೆ! ನಿಮ್ಮ ಅದ್ಭುತ ಕೃಪೆ ಮತ್ತು ಕ್ಷಮೆಗೆ – ನಿತ್ಯಜೀವನದ ಉಡುಗೊರೆಗೆ ನಿಮಗೆ ಧನ್ಯವಾದಗಳು! ಆಮೇನ್!”

ನೀವು ಇಲ್ಲಿ ಏನನ್ನು ಓದಿದ್ದೀರಿ, ಅದರಿಂದಾಗಿ ನೀವು ಯೇಸು ಕ್ರಿಸ್ತನಿಗೋಸ್ಕರ ನಿರ್ಧಾರವನ್ನು ಮಾಡಿದ್ದೀರಾ? ಹಾಗಿದ್ದರೆ, ದಯವಿಟ್ಟು “ನಾನು ಇಂದು ಯೇಸು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿನ ಬಟನ್ ಒತ್ತಿರಿ.


ಕನ್ನಡ ಹೋಮ್ ಪೇಜ್ ಗೆ ಹಿಂದಿರುಗಿ


ನಿಮ್ಮ ವೈಯಕ್ತಿಕ ಉದ್ಧಾರಕನನ್ನಾಗಿ ಯೇಸುವನ್ನು ಅಂಗೀಕರಿಸುವುದು ಎಂಬುದರ ಅರ್ಥವೇನು?