settings icon
share icon
ಪ್ರಶ್ನೆ

ಅಂತರಜನಾಂಗೀಯ ಮದುವೆಯನ್ನು ಕುರಿತು ಸತ್ಯವೇದ ಏನು ಹೇಳುತ್ತದೆ?

ಉತ್ತರ


ಹಳೆ ಒಡಂಬಡಿಕೆಯ ನ್ಯಾಯಪ್ರಮಾಣವು ಇಸ್ರಾಯೇಲ್ಯರಿಗೆ ಅಂತರಜನಾಂಗೀಯ ಮದುವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಾರದೆಂದು ಆಜ್ಞಾಪಿಸಿತು (ಧರ್ಮೋಪದೇಶಕಾಂಡ 7:3-4). ಹೇಗಿದ್ದರೂ, ಈ ಆಜ್ಞೆಗೆ ಕಾರಣ ಚರ್ಮದ ಬಣ್ಣವಾಗಲಿ ಅಥವಾ ಜನಾಂಗೀಯತೆಯಾಗಲಿ ಅಲ್ಲ. ಆದರೆ ಇದು ಧಾರ್ಮಿಕತೆಯಾಗಿತ್ತು. ಅಂತರಜನಾಂಗೀಯ ಮದುವೆ ವಿರುದ್ಧ ಯೆಹೂದ್ಯರಿಗೆ ದೇವರು ಆಜ್ಞಾಪಿಸಲು ಕಾರಣವೇನೆಂದರೆ ಇತರ ಜನಾಂಗದ ಜನರು ದೇವರಲ್ಲದವುಗಳನ್ನು ಆರಾಧಿಸುತ್ತಿದ್ದರು. ಒಂದು ವೇಳೆ ಇಸ್ರಾಯೇಲ್ಯರು ವಿಗ್ರಹರಾಧಕರೊಂದಿಗೆ, ಅಸಂಸ್ಕೃತರೊಂದಿಗೆ ಅಥವಾ ಅನ್ಯರೊಂದಿಗೆ ಮದುವೆಯಾದರೆ, ಅವರು ದೇವರಿಂದ ದೂರ ನಡೆಸಲ್ಪಡುತ್ತಾರೆ. ಮಲಾಕಿ 2:11ರ ಪ್ರಕಾರ, ಇಸ್ರಾಯೇಲಿನಲ್ಲಿ ನಿಜವಾಗಿ ಹೀಗೆಯೇ ಜರುಗಿತು.

ಇದೇ ರೀತಿಯ ಆತ್ಮೀಕ ಶುದ್ಧವಾದ ತತ್ವವು ಹೊಸ ಒಡಂಬಡಿಕೆಯಲ್ಲಿ ಹೊರತರಲಾಗಿದೆ, ಆದರೆ ಇದಕ್ಕೂ ಜನಾಂಗಕ್ಕೂ ಯಾವ ಸಂಬಂಧವಿಲ್ಲ: "ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ. ಧರ್ಮಕ್ಕೂ ಅಧರ್ಮಕ್ಕೂ ಜೊತೆಯೇನು ಬೆಳಕಿಗೂ ಕತ್ತಲೆಗೂ ಐಕ್ಯವೇನು? (2 ಕೊರಿಂಥ 6:14). ಹೇಗೆ ಇಸ್ರಾಯೇಲ್ಯರು (ಏಕೈಕ ನಿಜವಾದ ದೇವರ ವಿಶ್ವಾಸಿಗಳು) ವಿಗ್ರಹರಾಧಕರೊಂದಿಗೆ ಮದುವೆಯಾಗಬಾರದೆಂದು ಆಜ್ಞಾಪಿಸ್ಪಟ್ಟರೋ ಹಾಗೆಯೇ ಕ್ರೈಸ್ತರು (ಏಕೈಕ ನಿಜವಾದ ದೇವರ ವಿಶ್ವಾಸಿಗಳು) ಸಹ ಅವಿಶ್ವಾಸಿಗಳೊಂದಿಗೆ ಮದುವೆಯಾಗಬಾರದೆಂದು ಆಜ್ಞಾಪಿಸ್ಪಟ್ಟರು. ಅಂತರಜನಾಂಗೀಯ ಮದುವೆ ತಪ್ಪೆಂದು ಸತ್ಯವೇದವು ಎಂದಿಗೂ ಹೇಳುವದಿಲ್ಲ. ಅಂತರಜನಾಂಗೀಯ ಮದುವೆಯನ್ನು ಯಾರಾದರೂ ನಿಷೇಧಿಸುವುದಾದರೆ ಸತ್ಯವೇದ ಆಧಾರಿತ ಅಧಿಕಾರವಿಲ್ಲದೆ ಹಾಗೆ ಮಾಡುತ್ತಾರೆ.

ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರು ಗಮನಿಸಿದ ಪ್ರಕಾರ ಒಬ್ಬ ವ್ಯಕ್ತಿಯ ಗುಣನಡತೆಯ ಮೇರೆಗೆ ತೀರ್ಪುಮಾಡಬೇಕೇ ಹೊರತು ಅವನ ಅಥವಾ ಅವಳ ಚರ್ಮ ಬಣ್ಣದ ಆಧಾರದ ಮೆಲ್ಲಲ್ಲಾ. ಕ್ರೈಸ್ತರ ಜೀವನದಲ್ಲಿ ಜನಾಂಗೀಯ ಆಧಾರಿತವಾದ ಪಕ್ಷಪಾತಕ್ಕೆ ಯಾವುದೇ ಅವಕಾಶವಿಲ್ಲ (ಯಾಕೋಬ 2:1-10). ವಾಸ್ತವವಾಗಿ ಹೇಳಬೇಕಾದರೆ, ಸತ್ಯವೇದಕ್ಕನುಗುಣವಾದ ದೃಷ್ಟಿಕೋನ ಏನೆಂದರೆ, ಕೇವಲ ಒಂದೇ "ಜನಾಂಗವಿದೆ" - ಅದೇ ಮಾನವ ಜನಾಂಗ, ಎಲ್ಲರೂ ಆದಾಮ ಮತ್ತು ಹವ್ವರ ಸಂತಾನದವರಾಗಿದ್ದಾರೆ. ಸಂಗಾತಿಯನ್ನು ಆಯ್ಕೆಮಾಡುವಾಗ ಓರ್ವ ಕ್ರೈಸ್ತನು ಆ ಸಂಗಾತಿಯು ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವುದರ ಮೂಲಕ ತಿರಿಗಿ ಹುಟ್ಟಿದವರಾಗಿದ್ದಾರೊ ಇಲ್ಲವೋ ಎಂದು ಮೊದಲು ಕಂಡುಕೊಳ್ಳಬೇಕು (ಯೋಹಾನ 3:3-5). ಕ್ರಿಸ್ತನಲ್ಲಿ ನಂಬಿಕೆಯೇ ಹೊರತು ಚರ್ಮದ ಬಣ್ಣವಲ್ಲ, ಇದೇ ಸತ್ಯವೇದಕ್ಕನುಗುಣವಾದ ಸಂಗಾತಿಯನ್ನು ಆರಿಸಿಕೊಳ್ಳುವ ಶ್ರೇಷ್ಠ ಗುಣಮಟ್ಟವಾಗಿರುತ್ತದೆ. ಅಂತರಜನಾಂಗೀಯ ಮದುವೆ ಸರಿಯೋ ತಪ್ಪೋ ಎಂಬ ವಿಷಯವಲ್ಲ, ಆದರೆ ಜ್ಞಾನದ, ವಿವೇಚನೆಯ ಮತ್ತು ಪ್ರಾರ್ಥನೆಯ ವಿಷಯವಾಗಿದೆ.

ಒಂದು ದಂಪತಿ ಮದುವೆಯ ಅಗತ್ಯೆತೆಗಳನ್ನು ಪರಿಗಣಿಸುತ್ತಾ ಅನೇಕ ಅಂಶಗಳನ್ನು ತೂಕಮಾಡಬೇಕಾಗುತ್ತದೆ. ಆ ಸಂದರ್ಭದಲ್ಲಿ ಚರ್ಮ ಬಣ್ಣದ ವ್ಯತ್ಯಾಸವನ್ನು ಅಲಕ್ಷಿಸಬಾರದು, ಒಂದು ದಂಪತಿ ಮದುವೆಯಾಗಲು ಇದೊಂದು ಖಂಡಿತವಾಗಿ ನಿರ್ಧರಿಸುವ ಅಂಶವಾಗಿರಬಾರದು. ಅಂತರಜನಾಂಗೀಯ ದಂಪತಿಗಳು ತಾರತಮ್ಯ ಹಾಗೂ ಅಪಹಾಸ್ಯ ಎದುರಿಸಬೇಕಾಗಬಹುದು ಮತ್ತು ಅವರು ಇಂಥ ಅಭಿಪ್ರಾಯಗಳನ್ನು ಸತ್ಯವೇದಾನುಸಾರದ ರೀತಿಯಲ್ಲಿ ಪ್ರತಿಕ್ರಿಯಿಸಲು ಸಿದ್ಧರಾಗಿರಬೇಕು. "ಈ ವಿಷಯದಲ್ಲಿ ಯೆಹೂದ್ಯನಿಗೂ ಗ್ರೀಕನಿಗೂ ಹೆಚ್ಚು ಕಡೆಮೆ ಏನೂ ಇಲ್ಲ. ಎಲ್ಲರಿಗೂ ಒಬ್ಬನೇ ಕರ್ತನು; ಆತನು ತನ್ನ ನಾಮವನ್ನು ಹೇಳಿಕೊಳ್ಳುವವರಿಗೆ ಹೇರಳವಾಗಿ ಕೊಡುವವನಾಗಿದ್ದಾನೆ" (ರೋಮಾ 10:12). ಒಂದು ಬಣ್ಣದ ಕುರುಡಿನ ಸಭೆ ಮತ್ತು/ಅಥವಾ ಒಂದು ಕ್ರೈಸ್ತ ಅಂತರಜನಾಂಗೀಯ ಮದುವೆಯು ಕ್ರಿಸ್ತನಲ್ಲಿ ನಮ್ಮ ಸಮಾನತೆಯನ್ನು ಕುರಿತು ಒಂದು ಬಲವಾದ ಉದಾಹರಣೆಯಾಗಿರಬಹುದು.

English



ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ

ಅಂತರಜನಾಂಗೀಯ ಮದುವೆಯನ್ನು ಕುರಿತು ಸತ್ಯವೇದ ಏನು ಹೇಳುತ್ತದೆ?
Facebook icon Twitter icon Pinterest icon Email icon
© Copyright Got Questions Ministries